Site icon Vistara News

ಇದು ಫುಡ್‌ ಫ್ರಾಡ್‌ | ಇಲ್ಲಿ ವಂಚನೆಗೆ ನೀವೇ ಆಹಾರ!

food fraud

ಬೆಂಗಳೂರು: ಬೆಸ್ಕಾಂ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ವ್ಯವಹಾರ ಎಲ್ಲರದಲ್ಲೂ ಮೂಗು ಆನ್‌ಲೈನ್‌ ವಂಚಕರು ಮೂಗು ತೂರಿಸಿ ಸಾಕಷ್ಟು ವಂಚನೆ ಮಾಡುತ್ತಿದ್ದಾರೆ. ಈಗ ಫುಡ್ ಡೆಲಿವರಿ ವ್ಯವಸ್ಥೆಗೂ ಕಾಲಿಟ್ಟಿದ್ದಾರೆ.

ಇವರ ವಂಚನೆ ವೈಖರಿ ಹೀಗಿದೆ- ಸಾಮಾಜಿಕ ಜಾಲತಾಣಗಳಲ್ಲಿ ಆಹಾರ ವ್ಯಾಪಾರದ ಜಾಹೀರಾತು ಬಿಡುತ್ತಾರೆ. ಅದನ್ನು ಕ್ಲಿಕ್ ಮಾಡಿ ಅಲ್ಲಿ ನೀಡಿದ ಇನ್ಸ್‌ಟ್ರಕ್ಷನ್‌ನಂತೆ ನಡೆದರೆ ಸಾಕು, ನಿಮ್ಮ ಖಾತೆಯಿಂದ ಲಕ್ಷಗಟ್ಟಲೆ ಹಣ ಇದ್ದಕ್ಕಿದ್ದಂತೆ ಮಂಗಮಾಯ ಆಗುತ್ತದೆ. ಹೀಗೆ ಹಲವು ಮಂದಿ ಆಹಾರದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿಗೊಳಗಾಗಿದ್ದಾರೆ.

ಖಾಂಧಾನಿ ರಾಜಧಾನಿ ಫುಡ್, ರುಚಿ ಸಾಗರ್ ಹೆಸರಿನಲ್ಲಿ ನಕಲಿ ಆ್ಯಪ್‌ಗಳು ಕಾರ್ಯಪ್ರವೃತ್ತವಾಗಿವೆ. ಆ್ಯಪ್ ಡೌನ್‌ಲೋಡ್ ಮಾಡಿ ಫುಡ್ ಆರ್ಡರ್ ಮಾಡಲು ಇವು ಆಮಿಷ ಒಡ್ಡುತ್ತವೆ. ಝೊಮ್ಯಾಟೋ, ಸ್ವಿಗ್ಗಿಯಂತೆ ಕಾರ್ಯ ನಿರ್ವಹಿಸುವ ಆ್ಯಪ್ ಎಂದು ತಿಳಿದು ಡೌನ್‌ಲೋಡ್ ಮಾಡಿಕೊಂಡಿರೋ, ಮುಗಿಯಿತು! ನಂತರ ಲಿಂಕ್ ಕ್ಲಿಕ್ ಮಾಡಿ ಕ್ರೆಡಿಟ್ ಕಾರ್ಡ್, ಡೆಬಿಟ್‌ ಕಾರ್ಡ್‌ ಮಾಹಿತಿಗಳನ್ನು ತುಂಬಲು ಸೂಚನೆ ಬರುತ್ತದೆ. ಕಾರ್ಡ್ ನಂಬರ್ ಅವರಿಗೆ ಸಿಕ್ಕಿದರೆ ಸಾಕು ಹಂತ ಹಂತವಾಗಿ ಹಣ ಮಾಯವಾಗುತ್ತದೆ.

ಹೀಗೆ ಇಮ್ರಾನ್ ಉಲ್ಲಾ ಖಾನ್ ಎಂಬವರು 2 ಲಕ್ಷದ 23 ಸಾವಿರ ಹಣ ಕಳೆದುಕೊಂಡಿದ್ದಾರೆ. ದೀಪಿಕಾ ಎಂಬವರೂ ಹಣ ಕಳೆದುಕೊಂಡಿದ್ದು, ಈಸ್ಟ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | Defrauding Apple | ಆ್ಯಪಲ್‌ ಕಂಪನಿಯಲ್ಲಿ ಕಳವು, ಲಂಚ, 140 ಕೋಟಿ ರೂ. ವಂಚನೆ ಒಪ್ಪಿಕೊಂಡ ಎನ್‌ಆರ್‌ಐ

Exit mobile version