Site icon Vistara News

Parappana Agrahara : ಅವ್ಯವಹಾರ ಬಯಲಿಗೆ ಬಂದ್ರೆ ನಾವೇ ಟಾರ್ಗೆಟ್‌? ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯಿಂದಲೇ ಪ್ರತಿಭಟನೆ

Are we the target if the irregularities Parappana Agrahara jail staff stage protest

ಬೆಂಗಳೂರು: ಪರಪ್ಪನ ಅಗ್ರಹಾರಕ್ಕೆ (Parappana Agrahara) ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೆಎಸ್‌ಐಎಸ್‌ಎಫ್‌ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕೇಂದ್ರ ಕಾರಾಗೃಹ ಸಿಬ್ಬಂದಿ ಪ್ರತಿಭಟಿಸಿದ್ದಾರೆ. ನಿನ್ನೆ ಶುಕ್ರವಾರ ಮಧ್ಯಾಹ್ನ ಜೈಲಿನ ಸುಮಾರು 100ಕ್ಕೂ ಹೆಚ್ಚು ಜೈಲಾಧಿಕಾರಿಗಳು, ಸಿಬ್ಬಂದಿ ಪ್ರತಿಭಟಿಸಿದ್ದಾರೆ.

ನಟ ದರ್ಶನ್ ವಿಚಾರ ಅಷ್ಟೇ ಅಲ್ಲದೆ, ಜೈಲಿನ ಯಾವುದೇ ಅವ್ಯವಹಾರ ಬಯಲಿಗೆ ಬಂದಾಗಲೂ ಕೇವಲ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಮಾಧ್ಯಮಗಳಲ್ಲೂ ಜೈಲು ಸಿಬ್ಬಂದಿ ಬಗ್ಗೆ ಮಾತ್ರ ಸುದ್ದಿಯಾಗುತ್ತಿದೆ. ಆದರೆ ಜೈಲಿಗೆ ಒಂದು ಇರುವೆ ಬರಬೇಕಾದರೂ ಕರ್ನಾಟಕ ಕೈಗಾರಿಕ ಭದ್ರತಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜೈಲಿನ ಸಿಬ್ಬಂದಿಯ ಶೂ, ಬೆಲ್ಟ್ ತೆಗೆಸಿ ಕೆಎಸ್‌ಐಎಸ್‌ಎಫ್‌ (KSISF) ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.

ಇಷ್ಟಿದ್ದರೂ ಜೈಲಿನೊಳಗೆ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಹೇಗೆ ಬರುತ್ತಿದೆ. ಅವರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ಇಷ್ಟಾದ್ದರೂ ಜೈಲಿನ ಅಧಿಕಾರಿಗಳಿಗೆ ಅಮಾನತ್ತು ಶಿಕ್ಷೆಯಾಗುತ್ತಿದೆ. ಆದರೆ ಕೆಎಸ್‌ಐಎಸ್‌ಎಫ್‌ (KSISF) ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಇರಲಿ, ಒಂದು ರೂಲ್ 7 ನೀಡಿ ತನಿಖೆ ಕೂಡ ನಡೆಸುತ್ತಿಲ್ಲ. ಹೀಗೆಂದು ತಮ್ಮ ಅಳಲು ತೋಡಿಕೊಂಡು ಹಿರಿಯ ಅಧಿಕಾರಿಗಳ ಮುಂದೆ ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್- ಪವಿತ್ರಾ ದೂರದೂರವಾದರೂ ಒಂದಾಯಿತು ಇವರಿಬ್ಬರ ಮನೆಯ ಶ್ವಾನಗಳು

ಜೈಲಿನೊಳಗೆ ವಿಡಿಯೊ ಕಾಲ್‌; ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಿಗೆ ಪತ್ರ

ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಸತ್ಯನಿಗೆ ವಿಡಿಯೋ ಕಾಲ್ ವಿಚಾರವಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಜಿಪಿ ಮಾಲಿನಿ‌ ಕೃಷ್ಣಮೂರ್ತಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್ 25 ರಂದು ದರ್ಶನ್ ಮತ್ತು ಇತರೆ ಕೆಲವರು ಮಾತನಾಡುತ್ತಿರುವ ದೃಶ್ಯದ ತುಣುಕು ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ. ಕೇಂದ್ರ ಕಾರಾಗೃಹದ ಆವರಣದಲ್ಲಿ 3 ಎಚ್‌ಸಿಬಿಎಸ್‌ (HCBS) ಟವರ್‌ಗಳಿವೆ. ಮೊಬೈಲ್ ಸಿಗ್ನಲ್‌ಗಳು ಜೈಲಿನ ಯಾವುದೇ ಭಾಗದಲ್ಲಿ ಲಭ್ಯವಿಲ್ಲವೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಆದಾಗ್ಯೂ ವಿಡಿಯೋ ಕಾಲ್ ಹಾಗೂ ಫೋಟೊ ವೈರಲ್ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ‌ಮೊಬೈಲ್ ಸಿಗ್ನಲ್ ದೊರೆಯುತ್ತಿರುವುದು ಧೃಡವಾಗಿದೆ. ಈ ಹಿನ್ನಲೆ ಮೊಬೈಲ್ ಸಿಗ್ನಲ್ ನಿರ್ಬಂಧಿಸುವ ಟವರ್‌ಗಳ ಅಳವಡಿಸಿದ್ದರೂ, ಸಿಗ್ನಲ್ ಲಭ್ಯವಾಗಿದ್ದು ಹೇಗೆ? ಈ ಸಂಬಂಧ ಏರ್ ಟೆಲ್, ಬಿಎಸ್ ಎನ್ ಎಲ್, ಜಿಯೋ DOT (Department of Telecommunications) ನಿಂದ ಪತ್ರ ಬರೆದು ವಿವರಣೆ ಪಡೆಯಲು ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 4 ರ ಒಳಗೆ ತಪ್ಪದೇ ವರದಿ ಸಲ್ಲಿಸಲು ಮುಖ್ಯ ಅಧೀಕ್ಷರಿಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಮಹಾನಿರ್ದೇಶಕಿ, ಮಾಲಿನಿ ಕೃಷ್ಣಮೂರ್ತಿ ಪತ್ರ ಬರೆದು ಸೂಚನೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version