Site icon Vistara News

Theft case : ಬೆಂಗಳೂರಿನಲ್ಲಿ ದೇವರನ್ನೇ ಕದ್ದ ಖದೀಮರು! ಸಿಸಿ ಕ್ಯಾಮೆರಾದಲ್ಲಿ ಸೆರೆ

theft case

ಬೆಂಗಳೂರು: ಚಿನ್ನ, ಬೆಳ್ಳಿ, ಬೈಕ್‌, ಕಾರು ಇದ್ಯಾವುದನ್ನು ಮುಟ್ಟಲ್ಲ ಆದರೆ ದೇವರನ್ನು ಕಂಡರೆ ಬಿಡೋದಿಲ್ಲ. ಬೆಂಗಳೂರಿನಲ್ಲಿ ಗಣಪತಿ ಉತ್ಸವಗಳಿಗೆ ಮಾರಾಟಕ್ಕಿಟ್ಟಿದ್ದ ಗಣಪತಿ ಮೂರ್ತಿ ಕಳವು (Theft Case) ಮಾಡಿದ್ದಾರೆ. ರಾತ್ರೋ ರಾತ್ರಿ ಬಂದ ಖದೀಮರು ಗಣಪತಿ ಮೂರ್ತಿ ಕದ್ದು ಕ್ಷಣಾರ್ಧದಲ್ಲಿ ಎಸ್ಕೇಪ್‌ ಆಗಿದ್ದಾರೆ. ಕಳೆದ 12ರಂದು ಮಧ್ಯರಾತ್ರಿ 12 .45ರ ಸುಮಾರಿಗೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂದ್ರಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದಿರುವ ಇಬ್ಬರು ಖದೀಮರಿಂದ ಕೃತ್ಯ ನಡೆದಿದೆ.

ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ಗಣಪತಿ ಉತ್ಸವಗಳಿಗಾಗಿ ಗಣಪತಿ ವಿಗ್ರಹಗಳನ್ನು ಮಾರಾಟಕ್ಕಿಡಲಾಗಿತ್ತು. ಸುಮಾರು 20 ರಿಂದ 30 ವಿಗ್ರಹಗಳನ್ನು ಮಾರಾಟಕ್ಕಿಡಲಾಗಿತ್ತು. ವ್ಯಾಪಾರಿಯೊಬ್ಬರು ರಾತ್ರಿ ಹೊತ್ತು ಮೂರ್ತಿ ಅಲ್ಲೇ ಬಿಟ್ಟು ಟಾರ್ಪಲ್ ಹೊದಿಸಿ‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿರುವ ಇಬ್ಬರು ಖದೀಮರಿಂದ ಒಂದು ಮೂರ್ತಿ ಕಳುವು ಮಾಡಿದ್ದಾರೆ. ಖದೀಮರು ಮೂರ್ತಿ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ; Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಕುಖ್ಯಾತ ಸರಗಳ್ಳ ಅರೆಸ್ಟ್‌

ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಸರಗಳ್ಳ ರಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರವನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ. ಕದ್ದ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದ. ಕಳೆದ ತಿಂಗಳು 27 ರಂದು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದ. ಕುತ್ತಿಗೆಯಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿ ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆಯಲ್ಲಿ 4 ಬೈಕ್ ಹಾಗೂ 1 ಆಟೋ ಕಳವು ಪ್ರಕರಣವು ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಆನೇಕಲ್‌ನ ಜುವೆಲ್ಲರಿ ಶಾಪ್‌ನಲ್ಲಿ ಅಡವಿಡುತ್ತಿದ್ದ. ಬಂಧಿತನಿಂದ 10 ಲಕ್ಷ ಮೌಲ್ಯದ 6 ಗ್ರಾಂ ಚಿನ್ನಾಭರಣ, 4 ಬೈಕ್ ಹಾಗೂ 1 ಆಟೋ ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version