ರಾಯಚೂರು: ಕಾಂಗ್ರೆಸ್‌ನ ಭಾರತ ಐಕ್ಯತಾ ಯಾತ್ರೆ ಇಂದು ಮತ್ತೆ ಕರ್ನಾಟಕವನ್ನು ಪ್ರವೇಶಿಸಲಿದೆ. ರಾಹುಲ್ ಗಾಂಧಿ ಆಂಧ್ರಪ್ರದೇಶದಲ್ಲಿ ಪಾದಯಾತ್ರೆ ಮುಗಿಸಿ ಮತ್ತೆ ರಾಜ್ಯ ಪ್ರವೇಶಿಸಲಿದ್ದಾರೆ.
ಬೆಳಗ್ಗೆ ಮಂತ್ರಾಲಯದ ಮುಖ್ಯದ್ವಾರದಿಂದ ಪಾದಯಾತ್ರೆ ಆರಂಭವಾಗಲಿದೆ. ಮಂತ್ರಾಲಯದಿಂದ ತುಂಗಭದ್ರಾ ಬ್ರಿಡ್ಜ್ ಮೂಲಕ ಕರ್ನಾಟಕ ಪ್ರವೇಶಿಸಲಿದೆ. ತುಂಗಭದ್ರಾ ಬ್ರಿಡ್ಜ್ ಬಳಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲಾಗುತ್ತಿದ್ದು, ಬಳಿಕ ಗಿಲ್ಲೆಸಗೂರು ಗ್ರಾಮದಲ್ಲಿ ಲಂಚ್ ಬ್ರೇಕ್ ತೆಗೆದುಕೊಳ್ಳಲಿದೆ. ಗಿಲ್ಲೆಸಗೂರು ಗ್ರಾಮದಲ್ಲಿ ಪ್ರಗತಿಪರ ರೈತರ ಜೊತೆ ರಾಹುಲ್ ಸಂವಾದ ನಡೆಸಲಿದ್ದಾರೆ.
ಬಳಿಕ ಸಂಜೆ 5 ಗಂಟೆಗೆ ಯರಗೇರಾ ಗ್ರಾಮದವರೆಗೆ ಪಾದಯಾತ್ರೆ ನಡೆಯಲಿದ್ದು, ವಾಲ್ಮೀಕಿ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಯರಗೇರಾ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮುಂದಿನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯಲಿದೆ.
ಎರಡನೇ ದಿನ ರಾಯಚೂರು ನಗರದ ಬೃಂದಾವನ ಹೋಟೆಲ್‌ವರೆಗೆ ಪಾದಯಾತ್ರೆ ನಡೆಯಲಿದ್ದು, ರಾತ್ರಿ ಯರಮರಸ್‌ನಲ್ಲಿ ರಾಹುಲ್ ವಾಸ್ತವ್ಯ ಮಾಡಲಿದ್ದಾರೆ. ಮೂರನೇ ದಿನ ಚಿಕ್ಕಸುಗೂರು, ಹೆಗ್ಗಸನಹಳ್ಳಿ, ಶಕ್ತಿನಗರ, ದೇವಸಗೂರಿನಲ್ಲಿ ನಡಿಗೆ ಸಾಗಲಿದೆ. ಬಳಿಕ ಕೃಷ್ಣಾ ನದಿ ಸೇತುವೆ ಮೇಲೆ ಪಾದಯಾತ್ರೆ ಸಾಗಿ ತೆಲಂಗಾಣ ಪ್ರವೇಶ ಮಾಡಲಿದೆ.
ಇದನ್ನೂ ಓದಿ | ಭಾರತ್ ಜೋಡೋ | ಇಂದು ಆಂಧ್ರಪ್ರದೇಶದತ್ತ ರಾಹುಲ್