Site icon Vistara News

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Cancellation of tenders for 108 ambulances and Dinesh Gundu rao

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಗುತ್ತಿಗೆಗಳ ಮೇಲೆ ಈಗಿನ ಕಾಂಗ್ರೆಸ್‌ ಸರ್ಕಾರ ಕಣ್ಣಿಟ್ಟಿದ್ದು, ಒಂದೊಂದೇ ಟೆಂಡರ್‌ಗಳನ್ನು ರದ್ದುಗೊಳಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಅಲ್ಲದೆ, ಆಗಿನ ಸಚಿವ ಡಾ. ಕೆ. ಸುಧಾಕರ್‌ (Dr K Sudhakar) ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿಕೊಂಡಿದೆ. ಈಗ ಇದರ ಭಾಗವಾಗಿ 108 ಆಂಬ್ಯುಲೆನ್ಸ್‌ ಹಾಗೂ ಡಯಾಲಿಸಿಸ್‌ ಕೇಂದ್ರಗಳ ಟೆಂಡರ್‌ಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಈಗಾಗಲೇ ಕೆಲವು ಟೆಂಡರ್‌ಗಳನ್ನು ರದ್ದುಪಡಿಸಿದ್ದೇವೆ. 108 ಆಂಬ್ಯುಲೆನ್ಸ್‌ ಸೇವೆ ನೀಡಲು ಜಿವಿಕೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನು ಸಹ ರದ್ದುಪಡಿಸಲಾಗಿದೆ. ಈಗ ಜರೂರಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ. ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯನ್ನು ಸರಿಪಡಿಸಬೇಕಿದೆ. ಪಾಲಿಸಿ ವಿಚಾರಗಳನ್ನು ಬದಲಾಯಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Traffic Police:‌ ಒನ್‌ವೇ, ಫುಟ್‌ಪಾತ್‌ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!

ಆರೋಗ್ಯ‌ ಇಲಾಖೆಯಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಈಗಾಗಲೇ ಕೆಲವು ಟೆಂಡರ್‌ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಬಾಕಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ತಜ್ಞರ ಜತೆ ಚರ್ಚೆ ಮಾಡಿ ಸುಧಾರಣೆ ತರುತ್ತೇವೆ. ಗುಣಮಟ್ಟದ ಚಿಕಿತ್ಸೆ, ಗುಣಮಟ್ಟದ ವ್ಯವಸ್ಥೆಯನ್ನು ನಾವು ಕೊಡುವಂತೆ ಮಾಡುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನೇಶ್‌ ಗುಂಡೂರಾವ್‌ ಹೇಳಿಕೆ

ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ಸಿಗಲಿದೆ

ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್‌ ಗುಂಡೂರಾವ್‌, ಈ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿ ಇದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಡಿಕೆ ಇರುವಂತಹ ಅರ್ಹರಿಗೆ ಯೋಜನೆ ಸಿಗಲಿದೆ. ಜನಸಂಖ್ಯೆ ನೋಡಿದರೆ 1-2 ಪರ್ಸೆಂಟ್ ಮಾತ್ರ ಈ ರೀತಿ ಇರಬಹುದು. ಈ ರೀತಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸುಲಭ. ಆದರೆ ಅನುಷ್ಠಾನ ಮಾಡೋದು ಕಷ್ಟ. ಈಗ ಅನುಷ್ಠಾನ ಕೂಡ ಮಾಡಿ ಜನರಿಗೆ ನಾವು ತೋರಿಸಿದ್ದೇವೆ. ಅನುಷ್ಠಾನ ಮಾಡಲ್ಲ ಎಂದು ಕೆಲವರು ನಕರಾತ್ಮಕತೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದರು.

ದಿನೇಶ್‌ ಗುಂಡೂರಾವ್‌ ಹೇಳಿಕೆಯ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಿನೇಶ್‌ ಗುಂಡೂರಾವ್‌, ಜನರಲ್ಲಿ ಕೋಮುವಾದದ ವಿಚಾರವನ್ನು ಹಿಂದಿನ ಬಿಜೆಪಿ ಸರ್ಕಾರದವರು ತುಂಬಿದರು. ಅವರ ಪಕ್ಷದ ಬೆಳವಣಿಗೆಗೆ ಸಿದ್ಧಾಂತ ಬಿತ್ತಲು ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

Exit mobile version