Site icon Vistara News

Mysore News: ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ವ್ಯಕ್ತಿ ವಿರುದ್ಧ ಕೇಸ್

post against CM Siddaramaiah

ಮೈಸೂರು: ತಿ.ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ವ್ಯಕ್ತಿ ವಿರುದ್ಧ ನಗರದ (Mysore News) ಸೈಬರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಿ ಹಿಂದೂ ಎಂಬಾತನ ವಿರುದ್ಧ ರವಿಕುಮಾರ್‌ ಎಂ.ಎನ್‌ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಎಷ್ಟೊಂದು ಸಲೀಸಾಗಿ ಕೊಲೆ ಮಾಡುತ್ತಾರೆ ನೋಡಿ. ಸಿದ್ರಾಮುಲ್ಲಾ ಖಾನ್ ಸರ್ಕಾರದಲ್ಲಿ ಜಿಹಾದಿಗಳಿಂದ ಹಿಂದು ಯುವಕನ ಕೊಲೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ. ನಾವೆಲ್ಲ ಒಗ್ಗಟ್ಟಾಗಿ ನಮ್ಮ ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕಿದೆ. ಇದಕ್ಕಾಗಿ ಸ್ವಯಂ ಪ್ರೇರಿತವಾಗಿ ತಿ.ನರಸೀಪುರದಲ್ಲಿ ಬಂದ್ ಮಾಡೋಣ ಎಂದು ರಾಜಿ ಹಿಂದೂ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದ.

ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಹಾಕಿರುವ ರಾಜಿ ಹಿಂದೂ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದುದು ವರುಣ ಹೋಬಳಿಯ ಮೆಲ್ಲಹಳ್ಳಿ ಗ್ರಾಮದ ರವಿಕುಮಾರ್ ಎಂ.ಎನ್‌ ದೂರು ನೀಡಿದ್ದರು. ಹೀಗಾಗಿ ಮೈಸೂರು ಸೈಬರ್ ಕ್ರೈಮ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರಂಭದಲ್ಲೇ ಹಳಿ ತಪ್ಪಿದ ತನಿಖೆ?

ಮೈಸೂರು: ತಿ.ನರಸೀಪುರ ಯವಾ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ ಆರಂಭದಲ್ಲೇ ಹಳಿ ತಪ್ಪಿದೆ ಎಂಬ ಆರೋಪಗಳು ಕೇಳಿಬಂದಿವೆ. ಎ4 ಆರೋಪಿಯನ್ನು ಎ1 ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆ, ತ‌ನಿಖಾಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಜತೆ ಲಿಂಕ್ ಕಾರಣಕ್ಕೆ ಇಡೀ ಪ್ರಕರಣದಲ್ಲಿ ಶಂಕರ್ ಅಲಿಯಾಸ್ ತುಪ್ಪ ಮಾತ್ರ ಟಾರ್ಗೆಟ್ ಆಗಿದ್ದಾನೆ. ಈ ಮೂಲಕ ಎ1 ಮಣಿಕಂಠ, ಎ2 ಸಂದೇಶ್ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಮಣಿಕಂಠ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಮುಖಂಡ ಸುನೀಲ್ ಬೋಸ್ ಆಪ್ತ. ಸಂದೇಶ್ ಕಾಂಗ್ರೆಸ್ ಹಿರಿಯ ಮುಖಂಡ ಸ್ವಾಮಿಗೌಡ ಪುತ್ರ. ಸ್ವಾಮಿಗೌಡ ಡಾ.ಎಚ್.ಸಿ.ಮಹದೇವಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಪರಮಾಪ್ತರಾಗಿದ್ದಾರೆ. ಆರೋಪಿಗಳ ಪೈಕಿ ಶಂಕರ್‌ಗೆ ಮಾತ್ರ ಬಿಜೆಪಿಗೆ ನಂಟಿದೆ. ಮಹಾನಗರ ಪಾಲಿಕೆ ಸದಸ್ಯೆ ಸಹೋದರ ಎನ್ನುವ ಕಾರಣಕ್ಕೆ ಶಂಕರ್ ಟಾರ್ಗೆಟ್ ಆಗಿದ್ದಾನೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.

ಇದನ್ನೂ ಓದಿ | Rehabilitation Centre : ಕುಡಿತದ ಚಟ ಬಿಡಿಸಲು ವ್ಯಸನ ಮುಕ್ತ ಕೇಂದ್ರದಲ್ಲಿ ಹೊಡಿಬಡಿ ಪನಿಶ್ಮೆಂಟ್‌!

ಎ1 ಮಣಿಕಂಠ, ಎ2 ಸಂದೇಶ್ ಬಂಧನವಾಗಿದ್ದರೂ, ಅವರನ್ನು ತನಿಖಾಧಿಕಾರಿಗಳು ಪೊಲೀಸ್ ಕಸ್ಟಡಿಗೆ ಪಡೆದಿಲ್ಲ. ಎ4 ಶಂಕರ್‌ನನ್ನು ಕಸ್ಟಡಿಗೆ ಪಡೆದು ಸ್ಥಳ ಮಹಜರು ನಡೆಸಲಾಗಿದೆ. ಹೀಗಾಗಿ ಪೊಲೀಸರ ನಡೆ ಅನುಮಾನ ಹುಟ್ಟಿಸಿದೆ. ಆಪ್ತರನ್ನು ಬಚಾವ್ ಮಾಡಿದಂತೂ ಆಗಬೇಕು, ಸ್ವಜನ ಪಕ್ಷಪಾತದ ಆರೋಪ ಮಾಡಿದ ಬಿಜೆಪಿಯನ್ನೇ ಸಿಕ್ಕಿ ಹಾಕಿಸಿದಂತೆಯೂ ಆಗಬೇಕು. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Exit mobile version