ಚಿಕ್ಕೋಡಿ: ಗೌರಿ ತರುವ ವಿಚಾರಕ್ಕೆ ಅಕ್ಕ- ತಂಗಿಯರ ನಡುವೆ ಗಲಾಟೆ ನಡೆದು ಕಡೆಗೆ ಆತ್ಮಹತ್ಯೆಯಲ್ಲಿ (Suicide Case) ಅಂತ್ಯ ಕಂಡಿದೆ. ಇಲ್ಲಿನ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ರುಕ್ಮಿಣಿ ತೊಗರಿ (15) ಮೃತ ದುರ್ದೈವಿ.
ಪ್ರತಿ ವರ್ಷ ಮನೆಗೆ ಗೌರಿಯನ್ನು ರುಕ್ಮಿಣಿ ತರುತ್ತಿದ್ದಳು. ಯಾವಾಗಲೂ ಅಕ್ಕನೇ ಯಾಕೆ ಗೌರಿ ತರಬೇಕು? ಈ ಬಾರಿ ಮನೆಗೆ ಗೌರಿ ಮೂರ್ತಿಯನ್ನು ನಾನೇ ತರುವುದಾಗಿ ಸರಿತಾ ಹೇಳಿದ್ದಾಳೆ. ಗೌರಿ ವಿಚಾರವಾಗಿ ಇಬ್ಬರ ನಡುವೆ ಸಣ್ಣ ಮಾತುಕತೆಯು ಶುರುವಾಗಿದ್ದು ಬಳಿಕ ಜಗಳಕ್ಕೆ ತಿರುಗಿದೆ ಎನ್ನಲಾಗಿದೆ.
ಜಗಳದ ನಡುವೆಯು ತಂಗಿ ಸರಿತಾ ಮನೆಗೆ ಗೌರಿ ತಂದು ಪ್ರತಿಷ್ಠಾಪಿಸಿದ್ದಾಳೆ. ಇದನ್ನು ಕಂಡು ಮನನೊಂದ ಅಕ್ಕ ರುಕ್ಮಿಣಿ ತೊಗರಿ(೧೫) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ತಾಯಿ ಮೃತಪಟ್ಟು 1 ವರ್ಷವಾಗುವ 1 ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡ ಯುವಕ