Site icon Vistara News

Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರು ಬಲಿ, ಇಬ್ಬರು ಗಂಭೀರ

thunderbolt

ಚಿಕ್ಕೋಡಿ: ಮುಂಗಾರು (monsoon) ಆಗಮನಕ್ಕೆ ಮುನ್ನವೇ ಸಿಡಿಲಿನ (Thunderbolt) ಮೂಲಕ ಇಬ್ಬರ ಬಲಿ ಪಡೆದುಕೊಂಡಿದೆ. ಚಿಕ್ಕೋಡಿ (chikkodi news) ಗ್ರಾಮಾಂತರ ಭಾಗದಲ್ಲಿ ಸಿಡಿಲು ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಜಿಲ್ಲೆಯ (Belagavi news) ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಶೋಭಾ ಕೃಷ್ಣ ಕುಲಗೋಡೆ (45) ಮೃತ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಾಯಗೊಂಡವರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲಿಕ (35) ಎಂಬವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗುರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸಂಕೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

ಮಧ್ಯಪ್ರದೇಶ: ಆಧುನಿಕ ಕಾಲಘಟ್ಟ, ಬದಲಾದ ತಂತ್ರಜ್ಞಾನವು (Technology) ಒಂದೆಡೆ ಒಲಿತನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸಮಾಜ, ಮೌಲ್ಯಗಳ ಅಧಃಪತನಕ್ಕೆ ಕಾರಣವಾಗುತ್ತಿದೆ. ಹಿಂದೆ ಸಿನಿಮಾಗಳನ್ನು ಮನೋರಂಜನೆಗಾಗಿ, ಸಾಮಾಜಿಕ ಮೌಲ್ಯಗಳ ಅರಿವಿಗಾಗಿ ನೋಡುತ್ತಿದ್ದ ಕಾಲಘಟ್ಟವೊಂದಿತ್ತು. ಆದರೆ ಈಗ ಅದೇ ಸಿನಿಮಾದಿಂದ ಪ್ರೇರಿತರಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಘಟನೆಗಳು ಆಗಾಗ ಕಣ್ಣೆದುರು ಬರುತ್ತಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಮಧ್ಯಪ್ರದೇಶದಲ್ಲಿ 21ವರ್ಷದ ಯುವಕನೋರ್ವ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆದು ಕೊಲೆಗೈದು(Physical Abuse & Murder) ಬಳಿಕ ದೃಶ್ಯಂ(Drishyam) ಸಿನಿಮಾ ಶೈಲಿನಲ್ಲಿ ಪೊಲೀಸರಿಂದ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ.

ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗೌರವ್‌ ಅಲಿಯಾಸ್‌ ಕುಶಾಲ್‌ ಎಂಬ ಯುವಕ ಪುಟ್ಟ ಬಾಲಕಿಯ ಮೇಲೆ ಕ್ರೌರ್ಯ ಮೆರೆದಿದ್ದು, ಬಳಿಕ ಉಸಿರುಗಟ್ಟಿಸಿ ಕೊಂದಿದ್ದಾನೆ. ಇದಕ್ಕೂ ಮುನ್ನ ಗೌರವ್‌ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವೊಂದನ್ನು ನೋಡಿದ್ದ. ಅದನ್ನು ನೋಡಿದ ನಂತರ ಆತನಿಗೆ ತನ್ನ ಮೇಲೆ ನಿಯಂತ್ರಣ ಇಲ್ಲದಂತಾಗಿತ್ತು. ಹೀಗಾಗಿ ಅವನು ಮನೆಯ ಹೊರಗೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ತನ್ನ ಕೃತ್ಯ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ದೃಶ್ಯಂ ಶೈಲಿಯಲ್ಲಿ ಎಸ್ಕೇಪ್‌ ಆಗಲು ಪ್ಲ್ಯಾನ್‌

ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಗೌರವ್‌ ಬಾಲಿವುಡ್‌ ಖ್ಯಾತ ಸಿನಿಮಾ ದೃಶ್ಯಂ ಶೈಲಿಯಲ್ಲೇ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಕೃತ್ಯ ಎಸಗಿದ ನಂತರ ಆತ ನೇರವಾಗಿ ಜಿಮ್‌ಗೆ ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಅಲ್ಲಿ ಸುಮಾರು ಹೊತ್ತು ಕಳೆದಿದ್ದಾನೆ. ಹೀಗೆ ಘಟನೆ ವೇಳೆ ತಾನು ಆ ಸ್ಥಳದಲ್ಲೇ ಇರಲಿಲ್ಲ ಎಂಬುದನ್ನು ಪೊಲೀಸರಿಗೆ ನಂಬಿಸುವ ಪ್ರಯತ್ನ ಮಾಡಿದ್ದ. ಮಗುವಿನ ಮೃತ ಸಿಗುತ್ತಿದ್ದಂತೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು ಎಂಬುದು ಸ್ಪಷ್ಟವಾಗಿತ್ತು. ಅನುಮಾನದ ಮೇರೆ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅದ್ಯ ಗೌರವ್‌ನನ್ನು ಅರೆಸ್ಟ್‌ ಮಾಡಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯಿದೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಮಹಾರಾಷ್ಟ್ರದಲ್ಲೂ ಎರಡು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿ 15 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ಅಕ್ಕ ಹಾಗೂ ತಮ್ಮ ಒಟ್ಟಿಗೆ ಕುಳಿತು ಮೊಬೈಲ್‌ನಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಸೆಕ್ಸ್‌ ಮಾಡಲು ಪ್ರಯತ್ನಿಸಿದ್ದಾರೆ. ಇನ್ನು ಜನವರಿಯಲ್ಲಿ ಬಾಲಕನು ಮತ್ತೆ ವಿಡಿಯೊಗಳನ್ನು ನೋಡಿದ್ದು, ಅದಾದ ನಂತರ ಅಕ್ಕ ಬೇಡ ಎಂದರೂ ಕೇಳದೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿಯ ಋತುಸ್ರಾವ ಆಗಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿಯು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ಅವರು ಆಸ್ಪತ್ರೆಗೆ ತೆರಳಿ ಗರ್ಭಪಾತ ಮಾಡಿಸಲು ಮುಂದಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು

Exit mobile version