ಮೈಸೂರು: ಇಲ್ಲಿನ ಮಾರ್ಬಳ್ಳಿ ಹುಂಡಿ ಗ್ರಾಮದಲ್ಲಿ ಜುಲೈ 15ರಂದು ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಬಿಸಿ ನೀರಿನ ಪಾತ್ರೆಗೆ ಬಿದ್ದಿದ್ದ 2 ವರ್ಷದ ಪುಟ್ಟ ಕಂದಮ್ಮ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (Child death) ಮೃತಪಟ್ಟಿದ್ದಾಳೆ.
ಪ್ರಕೃತಿ ಎಂಬ ೨ ವರ್ಷದ ಪುಟ್ಟ ಹೆಣ್ಣಮಗುವೇ ಮೃತ ದುರ್ದೈವಿ. ಜುಲೈ ೧೫ರಂದು ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಪ್ರಕೃತಿ ಆಕಸ್ಮಿಕವಾಗಿ ಬಿದ್ದು, ನಗರದ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ದಾಖಲು ಮಾಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಗುವಿಗೆ ಕಳೆದ 17 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಮೈಸೂರು ಸ್ಟಾರ್ಟಪ್ ಪೆವಿಲಿಯನ್ ಆಗಸ್ಟ್ 5-7ಕ್ಕೆ, ನವ್ಯೋದ್ಯಮಗಳ ಸಂಗಮ