ಚಿತ್ರದುರ್ಗ: ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜ್ಞಾನ ಭಾರತಿ ಶಾಲೆ ಮುಂಭಾಗ ಹಾಡಹಗಲೇ ಮುಸ್ಲಿಂ ಬಾಲಕಿಯನ್ನು ಕಿಡ್ನ್ಯಾಪ್‌ಗೆ (Kidnap case) ಯತ್ನಿಸಲಾಗಿದೆ. ಕಿರಾತಕರಿಬ್ಬರು ಬಾಲಕಿಯನ್ನು ಎಳೆದೊಯ್ಯುವಾಗ ಕಿರುಚಾಡಿದ್ದಾಳೆ. ಇದರಿಂದ ಬೆದರಿದ ಇಬ್ಬರು ಬಾಲಕಿಯನ್ನು ಬಿಟ್ಟು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಬಾಲಕಿ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಓರ್ವನನ್ನು ಹಿಡಿದು ಥಳಿಸಿದ್ದಾರೆ.
ಟಗರುಹಟ್ಟಿಯ ಆರೋಪಿ ಪಾರ್ಥ ಎಂಬಾತನನ್ನು ಹಿಡಿದು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇತ್ತ ಸ್ಥಳದಲ್ಲೇ ಇದ್ದ ಬಾಲಕಿ ಚಪ್ಪಲಿ ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ಬಳಿಕ ಆರೋಪಿಯನ್ನುಪೊಲೀಸರಿಗೆ ಒಪ್ಪಿಸಿದ್ದಾರೆ. 17 ವರ್ಷದ ಬಾಲಕಿಯನ್ನುಆರೋಪಿ ಆನಂದ್ ಮತ್ತು ಪಾರ್ಥ ಎಂಬುವವರಿಂದ ಕಿಡ್ನ್ಯಾಪ್ ನಡೆದಿದೆ.
ಸದ್ಯ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಿಡ್ನ್ಯಾಪ್ ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿಯಿಂದ ದೂರು ದಾಖಲಾಗಿದೆ. ಯಾಕಾಗಿ ಕಿಡ್ನ್ಯಾಪ್ ಮಾಡಲು ಯತ್ನಿಸಿದರು ಎಂಬುದು ತಿಳಿದುಬಂದಿದೆ.
ಹಾಡಹಗಲೇ ಬಾಲಕಿಯ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಆಗಮಿಸಿದರು. ಎಸ್ಪಿ ಸಮ್ಮುಖದಲ್ಲಿ ಆರೋಪಿಯ ತೀವ್ರ ವಿಚಾರಣೆ ನಡೆದಿದೆ. ಘಟನೆ ಸಂಬಂಧ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ಪಡೆದರು.
ಇದನ್ನೂ ಓದಿ: MLA Muniratna : ಲಂಚಕ್ಕಾಗಿ ಗುತ್ತಿಗೆದಾರನಿಗೆ ಜೀವ ಬೆದರಿಕೆ; ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು
ಕಾಮುಕನಾದ ಸರ್ಕಾರಿ ಶಾಲೆ ಶಿಕ್ಷಕ ಅರೆಸ್ಟ್
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಬಾಲಕಿಯೊರ್ವಳು ಲೈಂಗಿಕ ಕಿರುಕುಳ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ವೇಳೆ ವಿಚಾರಿಸಲು ಹೋದಾಗ ತಮಗೂ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಎಂದು 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ತಡರಾತ್ರಿ ಆರೋಪಿ ಶಿಕ್ಷಕ ಸಾದಿಕ ಬೇಗ್ ಎಂಬಾತನನ್ನು ಬಂಧಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ