Site icon Vistara News

Modi in Karnataka: ಮೋದಿ, ಮೋದಿ, ಮೋದಿ! 26 ಬಾರಿ ಮೋದಿ ಹೆಸರು ಹೇಳಿದ ಬೊಮ್ಮಾಯಿ!!

cm basavaraj bommai in modi programme

ಮಂಡ್ಯ: ಬಹು ಚರ್ಚಿತ ವಿಷಯವಾಗಿದ್ದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಹೆದ್ದಾರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ 13.5 ನಿಮಿಷಗಳ ಒಟ್ಟಾರೆ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬರೋಬ್ಬರಿ 26 ಬಾರಿ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಪ್ರಧಾನಿಗೆ (Modi in Karnataka) ಬಹುಪರಾಕ್‌ ಹೇಳಿದ್ದಾರೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ಭಾನುವಾರ (ಮಾ. 12) ಆಯೋಜನೆ ಮಾಡಿದ್ದ 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋ ಮೀಟರ್‌ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಅಂದರೆ ಇಂಡಿಯಾ ಎಂದು ಮಾತು ಪ್ರಾರಂಭಿಸಿದರು. ಇಂದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಇಡೀ ದೇಶಕ್ಕೆ ಸಂಪರ್ಕ ಸಾಧಿಸುವಂತೆ ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ನಂತರ ವಿಶ್ವ ನಾಯಕ ಎಂದು ಮೋದಿ ಅವರನ್ನು ಬಣ್ಣಿಸುವಾಗಂತೂ ಹಲವಾರು ಬಾರಿ ಮೋದಿ ಹೆಸರನ್ನು ಸಿಎಂ ಬೊಮ್ಮಾಯಿ ಪ್ರಸ್ತಾಪಿಸಿದರು.

ಇದನ್ನೂ ಓದಿ: Modi in Karnataka: ಕಾಂಗ್ರೆಸಿಗರು ನನಗೆ ಸಮಾಧಿ ತೋಡುತ್ತಿದ್ದಾರೆ; ನಾನು ಜನರಿಗೆ ಹೆದ್ದಾರಿ ಮಾಡುತ್ತಿದ್ದೇನೆ: ಪ್ರಧಾನಿ ನರೇಂದ್ರ ಮೋದಿ

ಪಾಕಿಸ್ತಾನದಲ್ಲಿ ಸಮಸ್ಯೆ ಬಗೆಹರಿಸಲು ನರೇಂದ್ರ ಮೋದಿ ಅವರೇ ಬೇಕು ಎಂಬ ಕೂಗು ಕೇಳಿಬರುತ್ತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲಷ್ಟೇ ಇದಕ್ಕೆ ಡಿಪಿಆರ್‌ ಆಗಿದೆ ಎಂದು ಮೋದಿ ಹೆಸರನ್ನು ಪ್ರಸ್ತಾಪಿಸಿದರು. ಈ ಯೋಜನೆಗೆ ಹೆಚ್ಚುವರಿ ಅನುದಾನ ಬೇಕು ಎಂದಾದಾಗ ಅದಕ್ಕೆ ಮೋದಿ ಅವರೇ ಅನುದಾನ ನೀಡಿದರು ಎಂದು ಈ ವಿಷಯ ಪ್ರಸ್ತಾಪದ ವೇಳೆ ಹಲವು ಬಾರಿ ಪ್ರಸ್ತಾಪಿಸಿದರು. ಹೀಗೆ ಒಟ್ಟು 26 ಬಾರಿ ನರೇಂದ್ರ ಮೋದಿ ಅವರ ಹೆಸರನ್ನು ಸಿಎಂ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

“ಡಬಲ್‌ ಎಂಜಿನ್‌” ಉಲ್ಲೇಖ

ಇದಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಬಲ್‌ ಎಂಜಿನ್‌ ಸರ್ಕಾರದ ಬಗ್ಗೆಯೂ ಹಲವು ಬಾರಿ ಪ್ರಸ್ತಾಪ ಮಾಡಿದರು. ಪದೇ ಪದೆ “ಡಬಲ್‌ ಎಂಜಿನ್‌” ಪದವನ್ನು ಉಲ್ಲೇಖ ಮಾಡಿದರು. ಈಗ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಏನು ಮಾಡಿದೆ ಎಂದು ಕೆಲವರು ಕೇಳುತ್ತಾರೆ. ಇಂದು ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಇದುವರೆಗೆ 53 ಲಕ್ಷ ರೈತರಿಗೆ 16500 ಕೋಟಿ ರೂಪಾಯಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ 4000 ಕೋಟಿ ರೂಪಾಯಿಯನ್ನು ನೀಡಿದ್ದೇವೆ. ಇದು ಸಾಧ್ಯವಾಗಿದ್ದು ನಮ್ಮ ಡಬಲ್‌ ಎಂಜಿನ್‌ ಸರ್ಕಾರದಿಂದ ಎಂದು ತಿಳಿಸಿದರು.

ಇದನ್ನೂ ಓದಿ: Modi in Karnataka: ಪಾಕ್‌, ಚೀನಾ ನಾಗರಿಕರಿಗೂ ಮೋದಿ ಅಂದರೆ ಅಚ್ಚುಮೆಚ್ಚು: ಸಿಎಂ ಬೊಮ್ಮಾಯಿ

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 17 ಲಕ್ಷ ಮನೆಗಳು ಇಂದು ಮಂಜೂರಾಗಿ ಕೆಲಸಗಳು ನಡೆಯುತ್ತಿವೆ. ಅಲ್ಲದೆ, 1.25 ಕೋಟಿ ಆಯುಷ್ಮಾನ್‌ ಕಾರ್ಡ್‌ ಅನ್ನು ಕರ್ನಾಟಕದಲ್ಲಿ ಕೊಡಲಾಗಿದೆ. ಇದು ಸಾಧ್ಯವಾಗಿದ್ದು ಡಬಲ್‌ ಎಂಜಿನ್‌ ಸರ್ಕಾರದಿಂದ ಎಂದು ಹೇಳಿದ ಸಿಎಂ, ಕಳೆದ 6 ವರ್ಷದಲ್ಲಿ 64 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಜನ ಕಲ್ಯಾಣ, ರಾಜ್ಯ ಕಲ್ಯಾಣ, ರಾಷ್ಟ್ರ ಕಲ್ಯಾಣವನ್ನು ಮಾಡಿದ್ದೇವೆ. ಇದಕ್ಕೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ. ಸಮೃದ್ಧಿಗಾಗಿ ನಮ್ಮ ಡಬಲ್‌ ಎಂಜಿನ್‌ ಸರ್ಕಾರದಿಂದ ನಿರಂತರ ಶ್ರಮವಹಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

Exit mobile version