Site icon Vistara News

VISTARA TOP 10 NEWS : ಗ್ಯಾರಂಟಿಗಳ ಬಗ್ಗೆ ಸಿಎಂ ಹರ್ಷ, ಸಿಎಂ ತವರಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news 1

1. ರಾಜ್ಯದ ಶೇ.96 ಜನರಿಗೆ ಗ್ಯಾರಂಟಿಗಳಿಂದ ಪ್ರಯೋಜನ: ಸಿದ್ದರಾಮಯ್ಯ ಹರ್ಷ
ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳುಗಳು ಪೂರೈಸಿದೆ. ಈ 6 ತಿಂಗಳ ಅವಧಿಯಲ್ಲಿ ಸರ್ಕಾರ ಜಾರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳ ಪ್ರತಿಫಲ, ಮಹಿಳೆಯರು, ಮಕ್ಕಳು, ಯುವಜನರು, ರೈತರು, ಕಾರ್ಮಿಕರು, ಶೋಷಿತರನ್ನು ಕೇಂದ್ರೀಕರಿಸಿ ರೂಪಿಸಿರುವ ಕಾರ್ಯಕ್ರಮಗಳು, ವಿಶೇಷವಾಗಿ ಗ್ಯಾರಂಟಿ ಯೋಜನೆಗಳು (Congress Guarantee) ರಾಜ್ಯದ ಶೇ.96ಕ್ಕಿಂತ ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಮನೆಯೊಡತಿಯರೇ ನಿಮ್ಮ ಅಕೌಂಟ್‌ಗೆ ಬಂತಾ ₹ 2000; ಇಲ್ಲದಿದ್ದರೆ ಈ ರೀತಿ ಚೆಕ್‌ ಮಾಡಿ

2. ಸಿಎಂ ತವರಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ; ಹಳೆ ಮೈಸೂರೇ ಟಾರ್ಗೆಟ್‌
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ (BY Vijayendra) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ತವರಾದ ಮೈಸೂರಿಗೆ ಲಗ್ಗೆ ಇಟ್ಟಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ (CM Siddaramaiah) ಹಳೆ ಮೈಸೂರೇ ಮೈನ್‌ ಟಾರ್ಗೆಟ್‌ (Old Mysore Main Target) ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

3.  ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನು ಅಪ್ಪಿ ಸಂತೈಸಿದ ಪ್ರಧಾನಿ ಮೋದಿ
ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ಸೋಲು, ಗೆಲುವು, ಹತಾಶೆ ಮತ್ತು ಸಂತೋಷದಲ್ಲಿ ಜತೆಗಿರುತ್ತಾರೆ. ಅಂತೆಯೇ ಭಾರತ ತಂಡ ಭಾನುವಾರ (ನವೆಂಬರ್​ 19ರಂದು) ವಿಶ್ವ ಕಪ್​ ಫೈನಲ್​​ನಲ್ಲಿ (ICC World Cup 2023) ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಮೂರನೇ ವಿಶ್ವ ಕಪ್​​ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತು. ಈ ವೇಳೆ ಭಾರತ ತಂಡದ ಆಟಗಾರರು ದುಃಖದಲ್ಲಿದ್ದರು. ತಕ್ಷಣವೇ ಪ್ರಧಾನಿ ಮೋದಿ ಅವರು ಡ್ರೆಸಿಂಗ್ ರೂಮ್​ಗೆ ತೆರಳಿ ಅವರನ್ನು ಸಂತೈಸಿದ್ದಾರೆ. ಇದರ ವಿಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಆಸ್ಟ್ರೇಲಿಯಾ ಆಟಗಾರ! ಕ್ರಿಕೆಟ್ ಪ್ರೇಮಿಗಳ ಆಕ್ರೋಶ
IND vs AUS Final: ಭಾರತದ ಸೋಲಿಗೆ, ಆಸೀಸ್ ಗೆಲುವಿಗೆ 5 ಪ್ರಮುಖ ಕಾರಣಗಳು ಇಲ್ಲಿವೆ​

4. ಮುರುಘಾಶ್ರೀಗೆ ಬಿಗ್ ರಿಲೀಫ್; ಬಿಡುಗಡೆಗೆ ಹೈಕೋರ್ಟ್‌ ಆದೇಶ
ಬೆಂಗಳೂರು: 2ನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾಶ್ರೀಗಳಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಬಂಧನವಾದ ಕೆಲವೇ ನಿಮಿಷಗಳಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಉಚ್ಚ ನ್ಯಾಯಾಲಯ ಆದೇಶಿಸಿದೆ. ಮೊದಲ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಐದೇ ದಿನಗಳಲ್ಲಿ 2ನೇ ಪೋಕ್ಸೊ ಪ್ರಕರಣದಲ್ಲಿ ಶ್ರೀಗಳನ್ನು ಮತ್ತೆ ಬಂಧಿಸಲಾಗಿತ್ತು. ಚಿತ್ರದುರ್ಗ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಶ್ರೀಗಳ ಬಿಡುಗಡೆಗೆ ಹೈಕೋರ್ಟ್‌ ಸೂಚಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

5. ಅಕ್ರಮ ಸಂಪತ್ತು ಕೇಸ್; ಎಸಿಬಿ ತನಿಖೆ ರದ್ದು ಕೋರಿದ ಜಮೀರ್‌ಗೆ ಭಾರಿ ಹಿನ್ನಡೆ
ಬೆಂಗಳೂರು: ರಾಜ್ಯದ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌‌ (Zameer Ahmed Khan) ಅವರು ತಮ್ಮ ವಿರುದ್ಧದ ಎಸಿಬಿ ತನಿಖೆ (ACB Enquiry) ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ (Karnataka High Court) ವಜಾಗೊಳಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

6. ಸುರಂಗದಿಂದ 41 ಜನರ ರಕ್ಷಣೆಗೆ 5 ಪ್ಲಾನ್‌ ರೆಡಿ, ವಿದೇಶಿ ತಜ್ಞರ ಎಂಟ್ರಿ; ಕಂಪ್ಲೀಟ್‌ ಯೋಜನೆ ಹೀಗಿದೆ
ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi District) ಸುರಂಗ ಕುಸಿದು (Uttarakhand Tunnel Collapse) 8 ದಿನ ಕಳೆದಿವೆ. ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೈಗೊಳ್ಳುತ್ತಿರುವ ಕಾರ್ಯಾಚರಣೆಯು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟಾದರೂ ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗದ ಕಾರಣ ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರನ್ನು ಕರೆಸಲಾಗಿದೆ. ಅತ್ಯಾಧುನಿಕ ಉಪಕರಣಗಳನ್ನೂ ಬಳಸಲಾಗುತ್ತಿದೆ. ಇದರ ಜತೆಗೆ ಕಾರ್ಮಿಕರ ರಕ್ಷಣೆಗೆ ಐದು ಆಯ್ಕೆಗಳ ಪ್ಲಾನ್‌ ರೂಪಿಸಲಾಗಿದೆ. ಆಯ್ಕೆಗಳು ಯಾವವು ಎಂಬುದು ಸೇರಿ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

7. ಗಾಜಾ ಆಸ್ಪತ್ರೆಯಲ್ಲಿ ಮತ್ತೊಂದು ಸುರಂಗ ಪತ್ತೆ ಹಚ್ಚಿದ ಇಸ್ರೇಲ್;‌ ಹಮಾಸ್‌ ಕರಾಳ ಮುಖ ಬಯಲು
ಗಾಜಾ ನಗರ: ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಗೆ ಪ್ರತಿದಾಳಿ ಮಾಡುತ್ತಿರುವ ಇಸ್ರೇಲ್‌ ಸೇನೆಯು (Israel Palestine War0 ಗಾಜಾ ನಗರದಲ್ಲಿ ಹಮಾಸ್‌ ಕೈಗೊಳ್ಳುತ್ತಿರುವ ಉಗ್ರ ಚಟುವಟಿಕೆಗಳನ್ನೂ ಬಯಲು ಮಾಡುತ್ತಿದೆ. ಅಲ್‌ ಶಿಫಾ ಆಸ್ಪತ್ರೆ (Al Shifa Hospital) ಕೆಳಗೆ ಹಮಾಸ್‌ ಉಗ್ರರು (Hamas Terrorists) ಹೊಂದಿರುವ ಮತ್ತೊಂದು ಸುರಂಗವನ್ನು ಇಸ್ರೇಲ್‌ ಸೇನೆಯು ಪತ್ತೆ ಹಚ್ಚಿದೆ. ಅಲ್ಲದೆ, ವಿಡಿಯೊ ಸಾಕ್ಷ್ಯದ ಜತೆಗೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

8. Money Guide: ಸುಗಮ ಜೀವನಕ್ಕೆ ಆರ್ಥಿಕ ಶಿಸ್ತು ಹೀಗಿರಲಿ
ಬೆಂಗಳೂರು: ಉತ್ತಮ ಜೀವನಕ್ಕೆ ಆರ್ಥಿಕ ಶಿಸ್ತು ಬಹಳ ಮುಖ್ಯ. ಅನಿರೀಕ್ಷಿತ ಆಘಾತ, ಅನಾರೋಗ್ಯದಂತಹ ಸಂದರ್ಭದಲ್ಲಿ ಪರದಾಡುವುದುನ್ನು ಇದು ತಪ್ಪಿಸುತ್ತದೆ. ಉತ್ತಮ ಉಳಿತಾಯ ಮತ್ತು ಹೂಡಿಕೆಯ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. ಆದರೆ ಹಲವರು ಕೆಲವೊಂದು ತಪ್ಪು ಹೆಜ್ಜೆ ಇಡುವ ಮೂಲಕ ಆರ್ಥಿಕವಾಗಿ ದುರ್ಬಲರಾಗುತ್ತಾರೆ. ಹಾಗಾದರೆ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳೇನು? ಇದರಿಂದ ಹೊರ ಬರುವ ಮಾರ್ಗ ಯಾವುದು? ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

9. ಸಾರ್ವಜನಿಕವಾಗಿ ಲಾಂಗ್‌ ಹಿಡಿದು ಪೋಸ್‌; ಮತ್ತೊಂದು ವಿವಾದದಲ್ಲಿ ದರ್ಶನ್‌
ಬೆಂಗಳೂರು: ಚಿತ್ರ ನಟ ದರ್ಶನ್‌ (Actor Darshan) ಮತ್ತೊಮ್ಮೆ ಸುದಿದ ಮಾಡಿದ್ದಾರೆ. ಕಾಟೇರ ಸಿನಿಮಾದ (Katera Movie) ಪ್ರಮೋಷನ್‌ ಮತ್ತು ಇತ್ತೀಚೆಗೆ ನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಅವರನ್ನು ಈಗ ಮತ್ತೊಂದು ವಿವಾದ ಬೆನ್ನು ಹತ್ತಿದೆ. ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದರ್ಶನ್‌ ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ (Darshan poses with long in hand) ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.

10. Viral Video: ಹಾಡಹಗಲೇ ಪೆಟ್ರೋಲ್‌ ಪಂಪ್‌ನಿಂದ ಯುವತಿಯ ಕಿಡ್ನ್ಯಾಪ್!
ಗ್ವಾಲಿಯರ್, ಮಧ್ಯ ಪ್ರದೇಶ: ಅಪರಿಚಿತ ಮುಸುಕುಧಾರಿಗಳಿಬ್ಬರು ಹಾಡಹಗಲೇ ಪೆಟ್ರೋಲ್‌ ಬಂಕ್‌ನಿಂದ (Petrol Pump) 19 ವರ್ಷದ ಯುವತಿಯನ್ನು ಅಪಹರಣ (Girl Kidnapped) ಮಾಡಿದ ಘಟನೆಯು ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ಸೋಮವಾರ ನಡೆದಿದೆ. ಈ ಘಟನೆಯು ಸಿಸಿಟಿವಿ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version