Money Guide: ಸುಗಮ ಜೀವನಕ್ಕೆ ಆರ್ಥಿಕ ಶಿಸ್ತು ಹೀಗಿರಲಿ Vistara News

ಮನಿ-ಗೈಡ್

Money Guide: ಸುಗಮ ಜೀವನಕ್ಕೆ ಆರ್ಥಿಕ ಶಿಸ್ತು ಹೀಗಿರಲಿ

Money Guide: ಉತ್ತಮ ಜೀವನಕ್ಕೆ ಆರ್ಥಿಕ ಶಿಸ್ತು ಬಹಳ ಮುಖ್ಯ. ಅದಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

saving
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉತ್ತಮ ಜೀವನಕ್ಕೆ ಆರ್ಥಿಕ ಶಿಸ್ತು ಬಹಳ ಮುಖ್ಯ. ಅನಿರೀಕ್ಷಿತ ಆಘಾತ, ಅನಾರೋಗ್ಯದಂತಹ ಸಂದರ್ಭದಲ್ಲಿ ಪರದಾಡುವುದುನ್ನು ಇದು ತಪ್ಪಿಸುತ್ತದೆ. ಉತ್ತಮ ಉಳಿತಾಯ ಮತ್ತು ಹೂಡಿಕೆಯ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. ಆದರೆ ಹಲವರು ಕೆಲವೊಂದು ತಪ್ಪು ಹೆಜ್ಜೆ ಇಡುವ ಮೂಲಕ ಆರ್ಥಿಕವಾಗಿ ದುರ್ಬಲರಾಗುತ್ತಾರೆ. ಹಾಗಾದರೆ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳೇನು? ಇದರಿಂದ ಹೊರ ಬರುವ ಮಾರ್ಗ ಯಾವುದು? ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ನಿಯಮಿತವಾಗಿ ಉಳಿತಾಯ ಮಾಡಿ

ಆರ್ಥಿಕ ಸಮಸ್ಯೆಗೆ ಬಹು ಮುಖ್ಯ ಕಾರಣ ನಿಯಮಿತವಾಗಿ ಉಳಿತಾಯ ಮಾಡದಿರುವುದು. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಉಳಿತಾಯ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ನಿಯಮಿತ ಉಳಿತಾಯವು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೆ ಅನಿರೀಕ್ಷಿತ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಲು ಸಹಾಯ ಮಾಡುತ್ತದೆ. ಪ್ರತಿ ತಿಂಗಳು ಕನಿಷ್ಠ ಪಕ್ಷ ಸಂಬಳದ ಶೇ. 20ರಷ್ಟನ್ನಾದರೂ ಉಳಿತಾಯ ಮಾಡುವತ್ತ ಗಮನ ಹರಿಸಿ. ಉಳಿತಾಯಕ್ಕಾಗಿ ಬೇಕಿದ್ದರೆ ನೀವು ಇನ್ನೊಂದು ಬ್ಯಾಂಕ್‌ ಅಕೌಂಟ್‌ ತೆರೆಯಬಹುದು.

ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಿ

ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸದಿರುವುದು ಕೂಡ ಮುಂದೊಂದು ದಿನ ಸಮಸ್ಯೆಗೆ ಕಾರಣವಾಗಬಲ್ಲದು. ಅದು ಚಿಕ್ಕ ಮೊತ್ತದ ಬಿಲ್‌ ಆಗಿರಲಿ ಅಥವಾ ದೊಡ್ಡದಾಗಿರಲಿ, ಸೂಕ್ತ ಸಮಯಕ್ಕೆ ಪಾವತಿಸುವುದನ್ನು ರೂಢಿಸಿಕೊಳ್ಳಿ. ಇತ್ತೀಚೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ ಬಳಸುವುದು ಸಾಮಾನ್ಯವಾಗಿದೆ. 40-50 ದಿನಗಳ ಬಡ್ಡಿರಹಿತ ಕ್ರೆಡಿಟ್, ರಿವಾರ್ಡ್ ಮತ್ತು ಕ್ಯಾಶ್ ಬ್ಯಾಕ್‌ನಂತಹ ಪ್ರಯೋಜನಗಳನ್ನು ಇದು ನೀಡುತ್ತದೆ. ಆದಾಗ್ಯೂ ಕ್ರೆಡಿಟ್ ಕಾರ್ಡ್‌ಗಳು ಕೆಲವೊಮ್ಮೆ ದುಬಾರಿಯಾಗುತ್ತವೆ. ಬಿಲ್‌ ಸರಿಯಾಗಿ ಪಾವತಿಸದಿದ್ದರೆ ಅದರ ಮೇಲಿನ ಬಡ್ಡಿದರಗಳು ತುಂಬಾ ಹೆಚ್ಚಾಗಿರುತ್ತವೆ. ಹೀಗಾಗಿ ಈ ಅಂಶದತ್ತ ಗಮನ ಹರಿಸಿ.

ವಿಮೆ ಮಾಡಿಸಿ

ನಾವು ಅಂದುಕೊಂಡಂತೆಯೇ ಜೀವನ ಸಾಗಬೇಕು ಎಂದಿಲ್ಲ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡಬಹುದು. ಹೀಗಾಗಿ ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸುವುದು ಮುಖ್ಯ. ಆರೋಗ್ಯ, ಜನರಲ್‌ ಇನ್ಶೂರೆನ್ಸ್‌ ಮುಂತಾದವು ನಿಮ್ಮ ಜೀವನಕ್ಕೆ ರಕ್ಷಣೆ ನೀಡುತ್ತವೆ. ಹಣವನ್ನು ಉಳಿಸುವ ಸಲುವಾಗಿ ವಿಮೆ ಪಡೆಯದಿರಲು ಹಲವರು ನಿರ್ಧರಿಸುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಒಟ್ಟಿನಲ್ಲಿ ವಿಮೆ ಆಯ್ಕೆಯಲ್ಲ; ಅದು ಒಂದು ಆವಶ್ಯಕತೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

ಬಜೆಟ್‌/ಪ್ಲ್ಯಾನ್‌ ಮಾಡಿ

ಆರ್ಥಿಕ ಶಿಸ್ತು ಬೆಳೆಸಿಕೊಳ್ಳಲು ಬಜೆಟ್‌ ಅತೀ ಮುಖ್ಯ. ಬಜೆಟ್‌ ತಯಾರಿಕೆಯಿಂದ ನೀವು ಸಾಕಷ್ಟು ಹಣವನ್ನು ಉಳಿಸಬಹುದು. ಅದರಲ್ಲೂ ಮುಖ್ಯವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಆದಾಯದೊಳಗೆ ಬದುಕುವುದು, ನಿವೃತ್ತಿಗಾಗಿ ಉಳಿತಾಯ ಮಾಡುವುದು, ತುರ್ತು ನಿಧಿಯನ್ನು ರಚಿಸುವುದು ಮತ್ತು ನಿಮ್ಮ ಖರ್ಚು ಮಾದರಿಗಳನ್ನು ಟ್ರ್ಯಾಕ್ ಮಾಡುವುದು ಮುಂತಾದ ಇತರ ಹಣಕಾಸಿನ ಉದ್ದೇಶಗಳನ್ನು ತಲುಪಲು ಬಜೆಟ್ ಸಹಾಯ ಮಾಡುತ್ತದೆ. ಕೊಡುಗೆ ಇದೆ ಎನ್ನುವ ಕಾರಣದಿಂದ ಅನಗತ್ಯ ವಸ್ತುಗಳನ್ನು ಖರೀದಿಸಿ ಗುಡ್ಡೆ ಹಾಕುವುದನ್ನು ತಪ್ಪಿಸಿ.

ಇದನ್ನೂ ಓದಿ: Money Guide: ಪಿಎಫ್ ಮೊತ್ತವನ್ನು ಹಿಂಪಡೆಯಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಿವೃತ್ತಿ ಜೀವನದ ಯೋಜನೆ ರೂಪಿಸಿ

ಈಗಿನಿಂದಲೇ ನಿವೃತ್ತಿ ನಂತರದ ಜೀವನಕ್ಕಾಗಿ ತಯಾರಾಗುವುದು ಮುಖ್ಯ. ಯಾವುದೇ ಆದಾಯ ಮಾರ್ಗ ಇಲ್ಲದಾಗ ಒತ್ತಡ ರಹಿತವಾಗಿ ಬದುಕಲು ಮತ್ತು ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿವೃತ್ತಿ ಖಾತೆಗಳಿಗೆ ಜಮೆ ಮಾಡಿ. ಸ್ವಯಂಪ್ರೇರಿತ ನಿವೃತ್ತಿ ನಿಧಿ ಎಂದೂ ಕರೆಯಲ್ಪಡುವ ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಮೂಲಕ ELSS ಅಥವಾ PFನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಒಟ್ಟಿನಲ್ಲಿ ನಿಮ್ಮ ಇಂದಿನ ಸ್ಥಿತಿಗೆ ಅನುಗುಣವಾಗಿ ನಿಮ್ಮ ಆರ್ಥಿಕ ಭವಿಷ್ಯ ಇರುತ್ತದೆ ಎನ್ನುವುದನ್ನು ಮರೆಯಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮನಿ-ಗೈಡ್

Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

Money Guide: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಲು ಆರ್ಥಿಕ ಸದೃಢತೆ ಬಹಳ ಮುಖ್ಯ. ಅದಕ್ಕಾಗಿ ಇಲ್ಲಿದೆ ಟಿಪ್ಸ್‌.

VISTARANEWS.COM


on

money guide
Koo

ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಬೆಳಗ್ಗೆ ಬೇಗ ಗಡಿಬಿಡಿಯಲ್ಲಿ ಎದ್ದು ಆಫೀಸ್‌ಗೆ ಹೋಗುವ ಅಗತ್ಯವಿಲ್ಲದೆ ತಮ್ಮಿಷ್ಟದ ಚಟುವಟಿಕೆ ನಡೆಸಿಕೊಂಡು, ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬೇಕು ಎನ್ನುವುದು ಹಲವರ ಲೆಕ್ಕಾಚಾರ. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಭಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಒಂದಷ್ಟು ಉಳಿತಾಯ ಮಾಡಿಕೊಂಡರೆ, ಸೂಕ್ತವಾಗಿ ಹೂಡಿಕೆ ಮಾಡಿದರೆ ನಿವೃತ್ತಿಯ ಬಳಿಕ ಹಾಯಾಗಿರಬಹುದು. ಅದಕ್ಕಾಗಿ ಇಲ್ಲಿದೆ ಉಳಿತಾಯದ ಒಂದಷ್ಟು ಟಿಪ್ಸ್‌ (Money Guide).

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ (Senior Citizens’ Savings Scheme-SCSS)

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಇತ್ತೀಚೆಗೆ ಇದರ ಬಡ್ಡಿ ದರ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. 

ಪೋಸ್ಟ್‌ ಆಫೀಸ್‌ ಮಂತ್ಲಿ ಇನ್‌ಕಮ್‌ ಸ್ಕೀಮ್‌ (Post Office Monthly Income Scheme-POMIS)

ಅಪಾಯವನ್ನು ಇಷ್ಟಪಡದ ಹೂಡಿಕೆದಾರರಿಗೆ ಪರಿಪೂರ್ಣ ಆಯ್ಕೆ ಇದು. ಪಿಒಎಂಐಎಸ್ ಸ್ಥಿರ ಮಾಸಿಕ ಆದಾಯ ಒದಗಿಸುತ್ತದೆ. ಈ ಐದು ವರ್ಷಗಳ ಹೂಡಿಕೆ ಯೋಜನೆ ಹಿರಿಯ ನಾಗರಿಕರಿಗೆ ತಮ್ಮ ನಿವೃತ್ತಿ ನಿಧಿಯನ್ನು ಹೂಡಿಕೆ ಮಾಡಲು ಮತ್ತು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನು ಪಡೆಯಲು ಅತ್ಯುತ್ತಮ ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರಧಾನ್‌ ಮಂತ್ರಿ ವಯಾ ವಂದನಾ ಯೋಜನೆ (Pradhan Mantri Vaya Vandana Yojana-PMVVY)

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪಿಎಂವಿವಿವೈ ಪಿಂಚಣಿ ಯೋಜನೆ ಆದಾಯದ ಭದ್ರತೆಯನ್ನು ಖಾತರಿಪಡಿಸುತ್ತದೆ.

ಬ್ಯಾಂಕ್‌ ಫಿಕ್ಸಡ್‌ ಡೆಪಾಸಿಟ್ಸ್‌ (Bank Fixed Deposits-FDs)

ಬ್ಯಾಂಕ್ ಎಫ್‌ಡಿ ಹಿರಿಯ ನಾಗರಿಕರ ಅತ್ಯಂತ ಜನಪ್ರಿಯ ಉಳಿತಾಯ ಆಯ್ಕೆಗಳಲ್ಲಿ ಒಂದು. ಇದು ಹಿರಿಯರಿಗೆ ತಮ್ಮ ಠೇವಣಿಯ ಅವಧಿಯನ್ನು ಆಯ್ಕೆ ಮಾಡುವ ಸ್ವತಂತ್ರ ನೀಡುವುದಲ್ಲದೆ, ಅವರಿಗೆ ಸ್ಥಿರ ಬಡ್ಡಿದರವನ್ನು ಖಾತರಿಪಡಿಸುತ್ತದೆ. ಇದರಲ್ಲಿನ ಬಡ್ಡಿದರ ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಹೆಚ್ಚು.

ಮ್ಯೂಚುವಲ್‌ ಫಂಡ್‌ (Mutual Funds)

ಮ್ಯೂಚುವಲ್‌ ಫಂಡ್‌ ಎಂದರೆ ಹಲವರು ಒಟ್ಟಾಗಿ ಮಾಡುವ ಹಣದ ಹೂಡಿಕೆ. ಈ ಹೂಡಿಕೆಯನ್ನು ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ನಿರ್ವಹಣೆ ಮಾಡುತ್ತಾರೆ. ಈ ರೀತಿ ಸಂಗ್ರಹಿಸುವ ಹಣವನ್ನು ಷೇರು, ಬಾಂಡ್‌, ಹಣಕಾಸು ಮಾರುಕಟ್ಟೆಯ ಸಾಧನಗಳು, ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ‌ಅದರಲ್ಲಿ ಬರುವ ಆದಾಯ ಹೂಡಿಕೆದಾರರಿಗೆ ಸಿಗುತ್ತದೆ.  ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣದ ಕೊರತೆ ಇರುವವರು, ಮಾರುಕಟ್ಟೆ ಸಂಶೋಧನೆಗೆ ಸಮಯದ ಅಭಾವ ಇರುವವರು, ತಮ್ಮ ಸಂಪತ್ತನ್ನು ಬೆಳೆಸಲು ಬಯಸುವವರು ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಾಗಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಪ್ರೊಫೆಷನಲ್‌ ಫಂಡ್‌ ಮ್ಯಾನೇಜರ್‌ಗಳು ಯೋಜನೆಯ ಉದ್ದೇಶಕ್ಕೆನುಗುಣವಾಗು ಹೂಡಿಕೆ ಮಾಡುತ್ತಾರೆ. ಇದು ಕೂಡ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು.

ಇದನ್ನೂ ಓದಿ: Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ

Continue Reading

ಮನಿ-ಗೈಡ್

Money Guide: ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದೀರಾ? ಇಲ್ಲಿದೆ ವಿಫುಲ ಅವಕಾಶ

Money Guide: ಆರ್ಥಿಕವಾಗಿ ಸದೃಢರಾಗಲು ಪಾರ್ಟ್‌ ಟೈಮ್‌ ಜಾಬ್‌ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನೀವು ಮನೆಯಲ್ಲೇ ಕೂತು ಮಾಡಬಹುದಾದ ಅಂತಹ ಉದ್ಯೋಗಗಳ ಕುರಿತಾದ ಮಾಹಿತಿ ಇಲ್ಲಿದೆ.

VISTARANEWS.COM


on

work from home
Koo

ಬೆಂಗಳೂರು: ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ದುಬಾರಿಯಾಗಿದೆ. ಉತ್ತಮ ಜೀವನ ಸಾಗಿಸಲು ಆರ್ಥಿಕವಾಗಿ ಸದೃಢವಾಗುವುದು ಅನಿವಾರ್ಯ ಎನಿಸಿಕೊಂಡಿದೆ. ಅದಕ್ಕಾಗಿ ಬಹುತೇಕರು ಉದ್ಯೋಗದ ಜತೆಗೆ ಪಾರ್ಟ್‌ ಟೈಂ ಜಾಬ್‌ನತ್ತ ಗಮನ ಹರಿಸುತ್ತಾರೆ. ಇಂದಿನ ಮನಿಗೈಡ್‌ (Money Guide) ಮನೆಯಲ್ಲೇ ಕೂತು ಮಾಡಬಹುದಾದ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಲಿದೆ.

ಫ್ರೀಲಾನ್ಸಿಂಗ್: ಕೌಶಲ್ಯಗಳನ್ನು ಆದಾಯವಾಗಿ ಪರಿವರ್ತಿಸಿ

ಮನೆಯಿಂದಲೇ ಹಣವನ್ನು ಗಳಿಸುವ ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ ಫ್ರೀಲಾನ್ಸಿಂಗ್ ಪ್ರಮುಖವಾದುದು. ಅಪ್‌ವರ್ಕ್‌, ಫ್ರೀಲಾನ್ಸರ್ ಮತ್ತು ಫೈವರ್‌ (Upwork, Freelancer, and Fiverr)ನಂತಹ ಪ್ಲಾಟ್‌ಫಾರ್ಮ್‌ಗಳು ನುರಿತ ವೃತ್ತಿಪರರನ್ನು ಪ್ರಪಂಚದಾದ್ಯಂತದ ಗ್ರಾಹಕರೊಂದಿಗೆ ಸಂಪರ್ಕಿಸುತ್ತವೆ. ಬರವಣಿಗೆ, ಗ್ರಾಫಿಕ್ ವಿನ್ಯಾಸ, ಪ್ರೋಗ್ರಾಮಿಂಗ್ ಅಥವಾ ಡಿಜಿಟಲ್ ಮಾರ್ಕೆಟಿಂಗ್ ಹೀಗೆ ನಿಮ್ಮ ಕೌಶಲ್ಯ ಯಾವುದೇ ಆಗಿರಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.

ಆನ್‌ಲೈನ್‌ ಟ್ಯೂಷನ್‌: ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ

ಶಿಕ್ಷಣವು ಡಿಜಿಟಲ್‌ನತ್ತ ಹೊರಳಿರುವುದರಿಂದ ಆನ್‌ಲೈನ್‌ ಬೋಧನೆಗೆ ಬೇಡಿಕೆ ಹೆಚ್ಚಾಗಿದೆ. ನೀವು ನಿರ್ದಿಷ್ಟ ವಿಷಯ ಅಥವಾ ಕೌಶಲ್ಯದಲ್ಲಿ ಪರಿಣತಿಯನ್ನು ಹೊಂದಿದ್ದರೆ ಆನ್‌ಲೈನ್‌ ಬೋಧಕರಾಗಬಹುದು. ಉದಾಹರಣೆಗೆ ನೀವು ಯೋಗದಲ್ಲಿ ಪರಿಣಿತಿ ಹೊಂದಿದ್ದರೆ ಆನ್‌ಲೈನ್‌ ಮೂಲಕ ತರಗತಿ ನಡೆಸಬಹುದು. ಚೆಗ್ ಟ್ಯೂಟರ್ಸ್, ಟ್ಯೂಟರ್‌.ಕಾಮ್‌ ಮತ್ತು ವೇದಾಂತು(Chegg Tutors, Tutor.com, Vedantu)ನಂತಹ ವೆಬ್‌ಸೈಟ್‌ಗಳು ವಿವಿಧ ವಯಸ್ಸಿನ ಮತ್ತು ವಿವಿಧ ಕಡೆಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಪಡಿಸಬಹುದು ಮತ್ತು ದರವನ್ನು ನೀವೇ ನಿರ್ಧರಿಸಬಹುದು.

ಅಫಿಲಿಯೇಟ್‌ ಮಾರ್ಕೆಟಿಂಗ್‌ (Affiliate Marketing)

ಅಫಿಲಿಯೇಟ್‌ ಮಾರ್ಕೆಟಿಂಗ್‌ನಿಂದಲೂ ನೀವು ಆದಾಯ ಗಳಿಸಬಹುದು. ಬ್ಲಾಗ್, ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚುರ ಪಡಿಸಬಹುದು. ನೀವು ಹಂಚಿಕೊಳ್ಳುವ ಲಿಂಕ್ ಮೂಲಕ ಖರೀದಿ ಮಾಡಿದಾಗ, ನೀವು ಕಮಿಷನ್ ಗಳಿಸುತ್ತೀರಿ. ನೀವು ಗಣನೀಯ ಪ್ರಮಾಣದ ಆನ್‌ಲೈನ್‌ ಫಾಲೋವರ್ಸ್‌ ಹೊಂದಿದ್ದರೆ ಮತ್ತು ಆನ್‌ಲೈನ್ ಮಾರ್ಕೆಟಿಂಗ್‌ನಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಗಳಿಸಬಹುದು.

ಆನ್‌ಲೈನ್ ಸಮೀಕ್ಷೆ

ಆನ್‌ಲೈನ್ ಸಮೀಕ್ಷೆಗಳಲ್ಲಿ ಭಾಗವಹಿಸುವುದು ಮತ್ತು ಉತ್ಪನ್ನಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವುದರಿಂದಲೂ ಸ್ವಲ್ಪ ಮಟ್ಟಿನ ದುಡ್ಡು ಸಂಪಾದಿಸಬಹುದು. ಸ್ವಾಗ್ ಬಕ್ಸ್, ಸರ್ವೇ ಜಂಕಿ ಮತ್ತು ಅಮೆಜಾನ್ ಮೆಕ್ಯಾನಿಕಲ್ ಟರ್ಕ್ (Swagbucks, Survey Junkie, Amazon Mechanical Turk)ನಂತಹ ವೆಬ್‌ಸೈಟ್‌ಗಳು ನಿಮ್ಮ ಸಮಯ ಮತ್ತು ಪ್ರತಿಕ್ರಿಯೆಗೆ ಒಂದಷ್ಟು ಹಣವನ್ನು ಪಾವತಿಸುತ್ತವೆ.

ಇ-ಕಾಮರ್ಸ್‌: ಆನ್‌ಲೈನ್‌ ಮಾರಾಟ ಜಾಲ ಆರಂಭಿಸಿ

ನಿಮ್ಮದೇ ಸ್ವಂತ ಆನ್‌ಲೈನ್ ಸ್ಟೋರ್ ಪ್ರಾರಂಭಿಸುವುದು ಕೂಡ ಲಾಭದಾಯಕ ಉದ್ಯಮ. ಶಾಪಿಫೈ, ವೂಕಾಮರ್ಸ್ ಮತ್ತು ಅಮೆಜಾನ್ (Shopify, WooCommerce Amazon)ನಂತಹ ಫ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ನಿಮಗೆ ಅನುಮತಿ ನೀಡುತ್ತದೆ.

ಒಟ್ಟಿನಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶಗಳ ಕ್ಷೇತ್ರ ವಿಶಾಲವಾಗಿದೆ ಮತ್ತು ನಿರಂತರವಾಗಿ ವಿಸ್ತಾರವಾಗುತ್ತಲೇ ಇದೆ. ಅಂತರ್ಜಾಲದ ಶಕ್ತಿ ಮತ್ತು ನಿಮ್ಮ ಪ್ರತಿಭೆಗಳನ್ನು ಬಳಸಿಕೊಳ್ಳುವ ಮೂಲಕ ಆದಾಯವನ್ನು ಗಳಿಸಲು ನೀವು ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೌಶಲ್ಯ ಮತ್ತು ಜೀವನಶೈಲಿಗೆ ಯಾವುದು ಸೂಕ್ತ ಎಂಬುದನ್ನು ಮೊದಲೇ ನಿರ್ಧರಿಸುವುದು ಮುಖ್ಯ.

ಇದನ್ನೂ ಓದಿ: Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ

Money Guide: ನಿವೃತ್ತಿಯ ನಂತರ ನೆಮ್ಮದಿಯ ಜೀವನ ಎಲ್ಲರಿಗೂ ಬೇಕು. ಆದರೆ ತಯಾರಾಗಬೇಕು. ಆರೋಗ್ಯ ಸಮಸ್ಯೆ ಹೊರೆಯಾಗದಂತೆ ಈಗಲೇ ಯೋಜನೆ ರೂಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

VISTARANEWS.COM


on

pention
Koo

ಬೆಂಗಳೂರು: ನಿವೃತ್ತಿ ಜೀವನವನ್ನು ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯಿಂದ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಆದರೆ ಈ ಸಮಯದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳು ಅಥವಾ ಅನಾರೋಗ್ಯ ಈ ಕನಸನ್ನು ಭಗ್ನಗೊಳಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಎದುರಾಗುವ ಆರ್ಥಿಕ ಹೊರೆ ಖಂಡಿತವಾಗಿಯೂ ನಿಮ್ಮನ್ನು ವಿಚಲಿತಗೊಳಿಸಲಿದೆ. ಮಾತ್ರವಲ್ಲ ಆ ಸಮಯದಲ್ಲಿ ವೈದ್ಯಕೀಯ ವೆಚ್ಚಗಳೂ ತುಲನಾತ್ಮಕವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮೊದಲೇ ಉತ್ತಮ ಯೋಜನೆ ರೂಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆರೋಗ್ಯ ವಿಮೆ (Health Insurance) ಮಾಡಿಸುವುದು, ಬಜೆಟ್‌ ತಯಾರಿಸುವುದು ಮುಂತಾದ ಮಾರ್ಗಗಳನ್ನು ಅನುಸರಿಸಬೇಕು. ಈ ಬಗ್ಗೆ ಇಂದಿನ ಮನಿಗೈಡ್‌(Money Guide) ವಿವರಿಸಲಿದೆ.

ನಿವೃತ್ತಿಯ ಸಮಯದಲ್ಲಿ ವಾಡಿಕೆಯ ಆರೋಗ್ಯ ವೆಚ್ಚಗಳು ಹೊರೆಯಾಗುತ್ತವೆ. ನಿಯಮಿತ ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆಗಳು ಮತ್ತು ಪ್ರಿಸ್ಕ್ರಿಪ್ಷನ್ ಔಷಧಗಳು ಆರ್ಥಿಕವಾಗಿ ಬಹು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಮಾತ್ರವಲ್ಲ ವಯಸ್ಸಾದ ಬಳಿಕ ಸಹಜವಾಗಿಯೇ ಕಾಡುವ ಆರೋಗ್ಯ ಸಮಸ್ಯೆಗೆ ತಜ್ಞರ ಸಮಾಲೋಚನೆ (Specialist consultations) ಬೇಕಾಗಬಹುದು. ಆಗ ಅದು ದುಬಾರಿಯಾಗಬಹುದು. ಸ್ಕ್ರೀನಿಂಗ್‌ಗಳು, ರಕ್ತ ಪರೀಕ್ಷೆಗಳು, ಎಕ್ಸ್-ರೇಗಳು ಮತ್ತು ಎಂಆರ್ ಐಗಳಂತಹ ವಾಡಿಕೆಯ ರೋಗನಿರ್ಣಯ ಪರೀಕ್ಷೆಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಇವೆಲ್ಲ ಸಾಮಾನ್ಯವಾಗಿ ಸಾಂಪ್ರದಾಯಿಕ ಆರೋಗ್ಯ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ. ಇದಲ್ಲದೆ ದಂತ ಮತ್ತು ಕಣ್ಣಿನ ಆರೋಗ್ಯದ ಕಡೆಗೂ ಗಮನ ಹರಿಸುವುದು ಅನಿವಾರ್ಯ.

ಬಜೆಟ್‌ ತಯಾರಿಸಿ

ನಿಮ್ಮ ನಿವೃತ್ತಿ ಜೀವನದ ಹಣಕಾಸು ಸ್ಥಿತಿಯನ್ನು ಭದ್ರಪಡಿಸಲಿರುವ ಇನ್ನೊಂದು ಪ್ರಮುಖ ಮಾರ್ಗ ಎಂದರೆ ನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುವ ಬಜೆಟ್ ರಚಿಸುವುದು. ಈ ವೆಚ್ಚಗಳಿಗಾಗಿ ನೀವು ಆರಂಭದಿಂದಲೇ ನಿರ್ದಿಷ್ಟ ಮೊತ್ತವನ್ನು ತೆಗೆದಿರಿಸಬೇಕು. ಆರೋಗ್ಯಕ್ಕಾಗಿ ವೆಚ್ಚಗಳು ಹೆಚ್ಚಾದಷ್ಟೂ ನಿಮ್ಮ ನಿವೃತ್ತಿಯ ಉಳಿತಾಯವು ವೇಗವಾಗಿ ಕರಗುತ್ತದೆ ಎನ್ನುವುದು ಗಮನದಲ್ಲಿರಲಿ. ಹೀಗಾಗದಿರಲು ನೀವು ಆರೋಗ್ಯ ಉಳಿತಾಯ ಖಾತೆ(Health Savings Accounts-HSA)ಗಳಲ್ಲಿ ಹೂಡಿಕೆ ಮಾಡುವುದು ಒಂದು ಉಪಯುಕ್ತ ಆಯ್ಕೆಯಾಗಲಿದೆ. ಈ ಹಣವನ್ನು ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆಗಳು ಮತ್ತು ನಿವೃತ್ತಿಯ ಸಮಯದಲ್ಲಿ ಪ್ರಿಸ್ಕ್ರಿಪ್ಷನ್ ಔಷಧಗಳಿಗೆ ಬಳಸಿಕೊಳ್ಳಬಹುದು.

ಸೂಕ್ತ ಆರೋಗ್ಯ ವಿಮೆ ಆಯ್ಕೆ ಮಾಡಿ

ಆರೋಗ್ಯ ವಿಮೆ ಅಥವಾ ಆರೋಗ್ಯ ಹಣಕಾಸು ಆಯ್ಕೆಗಳನ್ನು (Health financing options) ಆರಿಸುವಾಗ ಒಪಿಡಿ ವೆಚ್ಚಗಳನ್ನು (OPD Expenses) ಅದು ಒಳಗೊಂಡಿದೆಯಾ ಎನ್ನುವುದನ್ನು ಗಮನಿಸಿ. ಇವುಗಳಲ್ಲಿ ವೈದ್ಯರ ಭೇಟಿ, ರೋಗನಿರ್ಣಯ ಪರೀಕ್ಷೆ ಮತ್ತು ಪ್ರಿಸ್ಕ್ರಿಪ್ಷನ್ ಔಷಧ ಸೇರಿರಬೇಕು. ಯಾಕೆಂದರೆ ಇವು ನಿವೃತ್ತಿಯ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅತಿ ಮುಖ್ಯವಾದ ಘಟಕ ಎಂದು ಪರಿಗಣಿಸಲಾಗುತ್ತದೆ. ಜತೆಗೆ ದಂತ ಮತ್ತು ದೃಷ್ಟಿ ಆರೈಕೆಯ ಸಮಗ್ರ ವ್ಯಾಪ್ತಿಯನ್ನು ಒದಗಿಸುವ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿ. ಇದಕ್ಕಾಗಿ ವಿವಿಧ ವಿಮಾ ಯೋಜನೆಗಳನ್ನು ಪರಸ್ಪರ ಹೋಲಿಸಿ ನೋಡುವುದನ್ನು ಮರೆಯಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Money Guide: ಡಿಮ್ಯಾಟ್ ಖಾತೆದಾರರ ಗಮನಕ್ಕೆ; ವರ್ಷಾಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್‌ ಸ್ಥಗಿತ!

Continue Reading

ಮನಿ-ಗೈಡ್

Money Guide: ತೆರಿಗೆ ಕಡಿತ ಇಲ್ಲದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಇದರಲ್ಲಿ ಹೂಡಿಕೆ ಮಾಡಿದರೆ ಯಾವುದೇ ತೆರಿಗೆ ಕಡಿತವಾಗುವುದಿಲ್ಲ ಎನ್ನುವುದೇ ಇದರ ಪ್ಲಸ್‌ ಪಾಯಿಂಟ್.

VISTARANEWS.COM


on

ppf
Koo

ಬೆಂಗಳೂರು: ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಯೋಜನೆ ಪಿಪಿಎಫ್‌. ಅಂದರೆ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (Public Provident Fund). ಇದು ಹಲವು ಹೂಡಿಕೆದಾರ ಸ್ನೇಹಿ ಫೀಚರ್‌ಗಳನ್ನು ಒಳಗೊಂಡಿದೆ. ದೀರ್ಘಕಾಲೀನ ಹೂಡಿಕೆಯ ಯೋಜನೆಯಾದ ಇದನ್ನು ಲಾಂಗ್‌ ಟರ್ಮ್‌ಗೆ ಸ್ಥಿರವಾದ ಸಂಪತ್ತು ಸೃಷ್ಟಿಸಿಕೊಳ್ಳಲು, ದೀರ್ಘಾವಧಿಯಲ್ಲಿ ಸಂಪತ್ತನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಪಿಪಿಎಫ್‌ ಕುರಿತದ ಹೆಚ್ಚಿನ ವಿವರ ಇಲ್ಲಿದೆ (Money Guide).

ಕಡಿಮೆ ರಿಸ್ಕ್‌ ಬಯಸುವ ಸಣ್ಣ ಹೂಡಿಕೆದಾರರಿಗೆ ಪಿಪಿಎಫ್‌ ಸೂಕ್ತ. ಸರ್ಕಾರವೇ ಇದನ್ನು ನಿರ್ವಹಿಸುತ್ತದೆ. ಖಾತರಿಯ ಆದಾಯ ನೀಡುತ್ತದೆ ಎನ್ನುವುದೇ ಇದರ ವಿಶೇಷತೆ. ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿದರಗಳನ್ನು ನಿರ್ಧರಿಸಲಾಗುತ್ತದೆ.

ವೈಶಿಷ್ಟ್ಯ

ನೀವು ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಮಾರ್ಗಸೂಚಿಗಳ ಪ್ರಕಾರ, ನೀವು ಹಣವನ್ನು ಪಿಪಿಎಫ್ ಖಾತೆಯಲ್ಲಿ ಸತತ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಒಂದು ವೇಳೆ 15 ವರ್ಷಗಳ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ ಪಿಪಿಎಫ್ ಖಾತೆಯ ಅವಧಿಯನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ವಿಸ್ತರಿಸಬಹುದಾದ ಆಯ್ಕೆಯೂ ಇದೆ. ಇದಕ್ಕಾಗಿ ಪಿಪಿಎಫ್ ಖಾತೆ ವಿಸ್ತರಣೆ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಇದು ಸಂಪೂರ್ಣ ತೆರಿಗೆ ಮುಕ್ತ ಉಳಿತಾಯ ಯೋಜನೆ ಎನ್ನುವುದು ವಿಶೇಷ. ಅಂದರೆ ಅಸಲು, ಲಾಭ ಮತ್ತು ಹಿಂಪಡೆಯುವಾಗ ಸಂಗ್ರಹವಾದ ಮೊತ್ತದ ಮೇಲೆ ಯಾವುದೇ ತೆರಿಗೆ ಕಡಿತ ಇರುವುದಿಲ್ಲ.

ಯಾರೆಲ್ಲ ತೆರೆಯಬಹುದು?

ಯಾವುದೇ ಭಾರತೀಯ ನಾಗರಿಕ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಅಪ್ರಾಪ್ತ / ಮಾನಸಿಕ ಅಸ್ವಸ್ಥ ವ್ಯಕ್ತಿಯ ಪರವಾಗಿ ಪೋಷಕರು ಸಹ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಬಡ್ಡಿಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈಗ 7.1% ಬಡ್ಡಿ ಇದೆ. 

ಪಿಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?

ಮೊದಲೇ ಹೇಳಿದಂತೆ ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 15 ವರ್ಷಗಳ ನಂತರ, ಪಿಪಿಎಫ್ ಚಂದಾದಾರರು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ಖಾತೆ ಮುಕ್ತಾಯ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಮೆಚ್ಯೂರಿಟಿ ಪಾವತಿಯನ್ನು ಹಿಂಪಡೆಯಬಹುದು. ಸಂಬಂಧಿತ ಅಂಚೆ ಕಚೇರಿಯಲ್ಲಿ ನಿಗದಿತ ವಿಸ್ತರಣಾ ನಮೂನೆಯನ್ನು ಸಲ್ಲಿಸುವ ಮೂಲಕ ಚಂದಾದಾರರು ತಮ್ಮ ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು (ಗಮನಿಸಿ ಇದನ್ನು ಮೆಚ್ಯೂರಿಟಿಯ ಒಂದು ವರ್ಷದೊಳಗೆ ಸಲ್ಲಿಸಬೇಕು).

ಇದನ್ನೂ ಓದಿ: Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

ಸಾಲ ಪಡೆಯಬಹುದು

ಪಿಪಿಎಫ್ ಹೂಡಿಕೆಯ ಮೇಲೆ ನೀವು ಸಾಲವನ್ನು ಪಡೆಯುವ ಸೌಲಭ್ಯವೂ ಇದೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು ಮಾತ್ರ. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೇಮ್‌ ಮಾಡಿಕೊಳ್ಳಬಹುದು.‌

ಇನ್ನಷ್ಟು ಮನಿಗೈಡ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

Continue Reading
Advertisement
Naveen Ammembala
ದಕ್ಷಿಣ ಕನ್ನಡ6 mins ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ25 mins ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ42 mins ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್43 mins ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Reliance Retail launches beauty retail store 'Tira' in Bengaluru
ದೇಶ58 mins ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್1 hour ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Shri Ram Janmabhoomi Mandir carvings are wonderful
ದೇಶ1 hour ago

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Bus-jeep accident
ಉಡುಪಿ1 hour ago

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Killers who killed lawyer for property in kalaburagi
ಕರ್ನಾಟಕ2 hours ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ2 hours ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ5 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ7 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌