Site icon Vistara News

Comedk| ತಮಿಳುನಾಡಿನ ವೆಂಕಟ್‌. ಕೆ ಫಸ್ಟ್‌ ರ‍್ಯಾಂಕ್‌: ಕಾಮೆಡ್‌ ಕೆ ಫಲಿತಾಂಶ ಪ್ರಕಟ

CBSE Exam

ಬೆಂಗಳೂರು: ಕಾಮೆಡ್‌ ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ತಮಿಳುನಾಡು ಮೂಲದ ವೆಂಕಟ್‌. ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕಾಮೆಡ್‌ಕೆ www.comedk.org ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ 5 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ.

ಇದನ್ನೂ ಓದಿ : ನೀಟ್‌ ಪರೀಕ್ಷೆ ಮಂದೂಡಲು ಆಗ್ರಹಿಸಿ ಪ್ರತಿಭಟನೆ ತೀವ್ರ; ಟ್ರೆಂಡ್‌ ಆಗ್ತಿದೆ ಚಲೋ ಮೋದಿ ಆವಾಸ್

2022-23ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ 19 ಜೂನ್ 2022ರಂದು ಭಾನುವಾರ ಪರೀಕ್ಷೆ ನಡೆದಿತ್ತು. ದೇಶಾದ್ಯಂತ 154 ನಗರಗಳ 230 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆನ್ಲೈನ್ ಮೂಲಕ ನಡೆಸಲಾಗಿತ್ತು. ಎಂಜಿನಿಯರಿಂಗ್ ಸೀಟುಗಾಗಿ ಸುಮಾರು 61,635 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 21,108 ಕರ್ನಾಟಕ ಮತ್ತು 36,278 ಕರ್ನಾಟಕೇತರ ಅಭ್ಯರ್ಥಿಗಳಾಗಿದ್ದು, ಮಂಗಳವಾರ ಇವರೆಲ್ಲ ಫಲಿತಾಂಶ ಪ್ರಕಟಗೊಂಡಿದೆ.

ಕಾಮೆಡ್‌ ಕೆ ಫಲಿತಾಂಶ ಪ್ರಕಟ

ಅಭ್ಯರ್ಥಿಗಳ ಶೇಕಡವಾರು ಅಂಕ ಹಾಗೂ ರ‍್ಯಾಂಕ್‌ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಕೌನ್ಸಿಲಿಂಗ್‌ ನಡೆಸುವುದಾಗಿ ಕಾಮೆಡ್‌ಕೆ ತಿಳಿಸಿದೆ. ಕಳೆದ ವರ್ಷದಂತೆ ಈ ವರ್ಷವೂ ಕಾಮೆಡ್‌ಕೆ ಕೌನ್ಸೆಲಿಂಗ್ ಆನ್‌ಲೈನ್‌ನಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಣಿತ ಪರಿಶೀಲನಾ ಅಧಿಕಾರಿಗಳ ಸಮಿತಿಯಿಂದ ಪರಿಶೀಲಿಸಲಾಗುತ್ತದೆ.

ಟಾಪ್‌ 10 ರ‍್ಯಾಂಕ್‌ ಪಡೆದವರು

  1. ಎ ವೆಂಕಟ್- ತಮಿಳುನಾಡು
  2. ವಿಶಾಲ್ ಬೈಸಾನಿ- ಬೆಂಗಳೂರು
  3. ಅಪೂರ್ವ ಟಂಡನ್- ಬೆಂಗಳೂರು
  4. ಕನಿಷ್ಕ್ ಶರ್ಮಾ – ಉತ್ತರಪ್ರದೇಶ
  5. ಸಿದ್ಧಾರ್ಥ ಸಿಂಗ್- ಬೆಂಗಳೂರು
  6. ಬೋಯಾಹರೆನ್ ಸಾಥ್ವಿಕ್- ಬೆಂಗಳೂರು
  7. ಆರವಗಿರಿ- ಬೆಂಗಳೂರು
  8. ಸ್ನೇಹಪರೀಕ್ – ಗುವಾಹಟಿ
  9. ವಿಶಾಖ ಅಗರ್ವಾಲ್- ಜೈಪುರ
  10. ಶ್ರೀಜನ್ ರಂಜನ್ – ಜಾರ್ಖಂಡ್

ಇದನ್ನೂ ಓದಿ | ವಿಶ್ವವಿದ್ಯಾಲಯಗಳಿಗೆ ಬೋಧಕರ ನೇಮಕಕ್ಕೆ ಕೆಇಎ ಮೂಲಕ ಪರೀಕ್ಷೆ

Exit mobile version