ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ʻಕಚ್ಚೆ ಹರುಕʼ ವಿವಾದಕ್ಕೆ ಹೊಸ ತಿರುವೊಂದು ಸಿಗುವ ಸಾಧ್ಯತೆ ಕಡಿಮೆ ಬಂದಿದೆ.
ʻಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಕಚ್ಚೆ ಹರುಕ ಅಂತ ಕರೀತಾರೆ. ಇದನ್ನು ನಾನು ಹೇಳುತ್ತಿಲ್ಲ. ಮೈಸೂರಿನ ಜನ ಹೇಳುತ್ತಾರೆʼʼ ಎಂದು ಸಿ.ಟಿ. ರವಿ ಇತ್ತೀಚೆಗೆ ಹೇಳಿದ್ದರು. ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಯನ್ನು ಲೂಟಿ ರವಿ ಅಂತಾರೆ ಎಂಬ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯೆಯಾಗಿ ರವಿ ಈ ಟಾಂಗ್ ನೀಡಿದ್ದರು.
ರವಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅವರು, ಚಿಕ್ಕಮಗಳೂರು ಶಾಸಕರೂ ಆಗಿರುವ ಸಿ.ಟಿ ರವಿಗೆ ಹರಕು ಕಚ್ಚೆ ಪಾರ್ಸೆಲ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಕಿಸಾನ್ ಘಟಕದಿಂದ ಹರಕು ಕಚ್ಚೆ ಪಾರ್ಸೆಲ್ ಮಾಡಲಾಗುತ್ತದೆ ಎಂದಿದ್ದಾರೆ ಸಚಿನ್ ಮೀಗಾ.
ಸಿ.ಟಿ ರವಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡುತ್ತಿಲ್ಲ. ಬದಲಾಗಿ ಬೇಕಾಬಿಟ್ಟಿ ನಾಲಿಗೆ ಹರಿಬಿಡುತ್ತಿದ್ದಾರೆ. ಅವರಿಗೆ ಸಿದ್ದರಾಮಯ್ಯ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಭಯ ಶುರುವಾಗಿದೆ. ಈ ಹೆದರಿಕೆಯಿಂದ ಅವರು ಸಿದ್ದರಾಮಯ್ಯ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿರುವ ಸಚಿನ್ ಮೀಗಾ, ಸಿ.ಟಿ. ರವಿ ಸಿದ್ದರಾಮಯ್ಯ ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕ್ಷಮೆ ಕೇಳದೆ ಹೋದರೆ ಹರಕು ಕಚ್ಚೆ ಕಳುಹಿಸುವುದಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಕಚ್ಚೆಹರುಕ ಪದ ಬಳಕೆ ಸರಿಯಲ್ಲ: ಸಿ.ಟಿ. ರವಿಗೆ ವಿಶ್ವನಾಥ್, ಶಿವಲಿಂಗೇಗೌಡ ಕಿವಿಮಾತು