Site icon Vistara News

Congress protest | ಪ್ರತಿಭಟನೆಗೆ ಬ್ರೇಕ್‌, ಮಧ್ಯಾಹ್ನ ಒಂದು ಗಂಟೆಗೆ ರಾಜಭವಕ್ಕೆ ತೆರಳಲು ಸಮಯ ನಿಗದಿ

ಕಾಂಗ್ರೆಸ್‌ ರಾಜಭವನ ಚಲೋ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಮುಖಂಡರು ನಡೆಸುತ್ತಿರುವ ರಾಜಭವನ ಚಲೋ(Congress protest )ಗೆ ಪೊಲೀಸರು ತಡೆಯೊಡ್ಡಿದ್ದಾರೆ. ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ಮತ್ತೊಂದು ತಂಡವನ್ನು ಕ್ವೀನ್ಸ್‌ ರಸ್ತೆಯಲ್ಲೇ ಬ್ಯಾರಿಕೇಡ್‌ ಅಳವಡಿಸಿ ತಡೆ ಹಿಡಿದು ಡಿಕೆಶಿಯವರನ್ನೂ ವಶಕ್ಕೆ ಪಡೆಯಲಾಗಿದೆ.

ಈ ನಡುವೆ ಮಧ್ಯಾಹ್ನ ಒಂದು ಗಂಟೆಗೆ ರಾಜಭವನಕ್ಕೆ ತೆರಳಲು ಕಾಂಗ್ರೆಸ್‌ ಮುಖಂಡರಿಗೆ ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯಪಾಲರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ತೆರಳಿರುವುದರಿಂದ ಅವರ ಕಾರ್ಯದರ್ಶಿಗೆ ಕಾಂಗ್ರೆಸ್‌ ನಾಯಕರು ಮನವಿ ಪತ್ರ ಸಲ್ಲಿಸಲಿದ್ದಾರೆ.

ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ (ಬಾಳೇಕುಂದ್ರಿ ) ಸರ್ಕಲ್‌ ಬಳಿ ತಡೆ ಹಿಡಿಯಲಾಯಿತು. ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಪರಮೇಶ್ವರ್‌, ವೀರಪ್ಪ ಮೊಯ್ಲಿ, ರಿಜ್ವಾನ್‌ ಅರ್ಷದ್‌ ಮುಂತಾದವರನ್ನು ಬಸ್‌ನಲ್ಲಿ ತುಂಬಿ ಪೊಲೀಸರು ಬೇರೆಡೆಗೆ ಕರೆದೊಯ್ದರು. ಇನ್ನೊಂದೆಡೆ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆದರು. ಉಳಿದಂತೆ ಎಲ್ಲ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡರು.

ಇದನ್ನೂ ಓದಿ: Congress protest | ಬೆಂಗಳೂರಲ್ಲಿ ಕಾಂಗ್ರೆಸಿಗರ ಪ್ರತಿಭಟನೆ ಕಿಚ್ಚು, ಟ್ರಾಫಿಕ್‌ ಜಾಮ್‌

Exit mobile version