Site icon Vistara News

Chetan Ahimsa: ಭ್ರಷ್ಟಾಚಾರ ಆರಂಭವಾದದ್ದೇ ಕಾಂಗ್ರೆಸ್‌ನಿಂದ: ನಟ ಚೇತನ್‌ ಅಹಿಂಸಾ ಆರೋಪ

Chetan Ahimsa

ಬೆಂಗಳೂರು: ಆಧುನಿಕ ಭಾರತದಲ್ಲಿ ಭ್ರಷ್ಟಾಚಾರವು (Corruption) ಪ್ರಾರಂಭವಾಗಿದ್ದೇ ಕಾಂಗ್ರೆಸ್ (Congress) ಪಕ್ಷದಿಂದ ಎಂದು ನಟ ಚೇತನ್ ಅಹಿಂಸಾ (Actor Chetan Ahimsa) ಗಂಭೀರ ಆರೋಪ ಮಾಡಿದ್ದಾರೆ. ಈ ಕುರೊತು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯ ಮದಲ್ಲಿ ಪೋಸ್ಟ್ ಮಾಡಿರುವ ಅವರು, ʼಭ್ರಷ್ಟಾ ಚಾರ ಆರಂಭವಾದದ್ದು ಜೆಡಿಎಸ್-ಬಿಜೆಪಿಯಿಂದ’ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇಂದಿರಾ ಗಾಂಧಿ 1970ರ ದಶಕದಲ್ಲಿ ಸರ್ಕಾರದ ಕ್ರೂರ ನೀತಿಗಳ ಮೂಲಕ ಕಾಂಗ್ರೆಸ್‌ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ತರುವ ಮೂಲಕ ಭ್ರಷ್ಟಾಚಾರವನ್ನು ಸಾಂಸ್ಥಿಕಗೊಳಿಸಿದರು. ಆಧುನಿಕ ಭಾರತದಲ್ಲಿ ಭ್ರಷ್ಟಾಚಾರವು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭವಾಯಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭ ಗಳಿಸಿದೆ. ಖಂಡ್ರೆ ಇತಿಹಾಸವನ್ನು ಅಧ್ಯಯನ ಮಾಡಬೇಕುʼ ಎಂದಿದ್ದಾರೆ.

ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

ನಟ ಚೇತನ್‌ ಅಹಿಂಸಾ (Chethan Kumar) ತಮ್ಮ ಹೇಳಿಕೆ ಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು. ಇದೀಗ ದರ್ಶನ್ ಬಂಧನ ಕುರಿತು ಮಾಧ್ಯಮದ ಜತೆ ಮಾತನಾಡಿದ್ದಾರೆ. ದರ್ಶನ್ ತಮಗೆ ಮನೆಯೂಟ ಬೇಕು ಎಂದು ಪಟ್ಟು ಹಿಡಿದ ಬೆನ್ನಲ್ಲಿಯೇ, ತಮ್ಮ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದಿದ್ದಾರೆ.

ಚೇತನ್‌ ಅಹಿಂಸಾ ಮಾತನಾಡಿ ʻʻನಾನು ದರ್ಶನ್‌ ಅವರನ್ನು ಹಲವು ಸಲ ಭೇಟಿಯಾಗಿದ್ದೇನೆ. ಅವರು ದೊಡ್ಡ ಸ್ಟಾರ್‌. ಕೋಟಿ ಕಲೆಕ್ಷನ್‌ ಮಾಡುವ ಹೀರೊ. ಆದರೆ ಸಿನಿಮಾ ರಂಗದಲ್ಲಿ ವಿಚಾರಣ, ನಡವಳಿಕೆ, ಅಲೋಚನೆ, ಪ್ರತಿಭೆ ಇದಕೆಲ್ಲ ಬೆಲೆ ಇಲ್ಲ. ಹಣಕ್ಕೆ ಮಾತ್ರ ಬೆಲೆ. ದರ್ಶನ್‌ ಈ ಕೊಲೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆರೋಪಿ ನಿಜ. ಆದರೆ ಅಪರಾಧಿ ಅಲ್ಲ. ಬಹಳ ಗಂಭೀರ ವಾದ ಆರೋಪ ಇದು. ಸುಮ್ಮನೆ ಪೊಲೀಸರು ಸಮಯ ವ್ಯರ್ಥ ಮಾಡಿಕೊಂಡು ಇಲ್ಲದೇ ಇರುವುದನ್ನು ಹುಟ್ಟು ಹಾಕುವುದಿಲ್ಲ. ನಿರ್ಧಾರ ಬರಲಿ. ದರ್ಶನ್‌ ಹಾಗೂ ರೇಣುಕಾ ಸ್ವಾಮಿ ಸಮಸ್ಯೆ ಅಲ್ಲʼʼಎಂದು ಮಾತು ಶುರು ಮಾಡಿದರು.

ʻʻಹೀರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ, ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಹಣ ಅವರ ಬಳಿ ಇರುತ್ತೆ. , ಚಿತ್ರರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ದು ನಂಬ್ತೀವಿ, ಆದರೆ ಅದೇ ದರ್ಶನ್ ಕೊಲೆ ಆರೋಪಿ ಅಂದ್ರೆ ನಂಬಲ್ಲ, ಹೀಗಾಗಿಯೇ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಚಿತ್ರರಂಗದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕ. ದರ್ಶನ್ ಆರೋಪಿಯಷ್ಟೇ ಅಪರಾಧಿಯಲ್ಲ ಆದರೆ ಅವರ ಮೇಲೆ ಗಂಭೀರ ಆರೋಪ ಇದೆʼʼ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Exit mobile version