Chetan Ahimsa: ಭ್ರಷ್ಟಾಚಾರ ಆರಂಭವಾದದ್ದೇ ಕಾಂಗ್ರೆಸ್‌ನಿಂದ: ನಟ ಚೇತನ್‌ ಅಹಿಂಸಾ ಆರೋಪ - Vistara News

ಕರ್ನಾಟಕ

Chetan Ahimsa: ಭ್ರಷ್ಟಾಚಾರ ಆರಂಭವಾದದ್ದೇ ಕಾಂಗ್ರೆಸ್‌ನಿಂದ: ನಟ ಚೇತನ್‌ ಅಹಿಂಸಾ ಆರೋಪ

ಇಂದಿರಾ ಗಾಂಧಿ 1970ರ ದಶಕದಲ್ಲಿ ಸರ್ಕಾರದ ಕ್ರೂರ ನೀತಿಗಳ ಮೂಲಕ ಕಾಂಗ್ರೆಸ್‌ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ತರುವ ಮೂಲಕ ಭ್ರಷ್ಟಾಚಾರವನ್ನು ಸಾಂಸ್ಥಿಕಗೊಳಿಸಿದರು ಎಂದು ನಟ ಚೇತನ್ ಅಹಿಂಸಾ (Actor Chetan Ahimsa) ಗಂಭೀರ ಆರೋಪ ಮಾಡಿದ್ದಾರೆ.

VISTARANEWS.COM


on

Chetan Ahimsa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಧುನಿಕ ಭಾರತದಲ್ಲಿ ಭ್ರಷ್ಟಾಚಾರವು (Corruption) ಪ್ರಾರಂಭವಾಗಿದ್ದೇ ಕಾಂಗ್ರೆಸ್ (Congress) ಪಕ್ಷದಿಂದ ಎಂದು ನಟ ಚೇತನ್ ಅಹಿಂಸಾ (Actor Chetan Ahimsa) ಗಂಭೀರ ಆರೋಪ ಮಾಡಿದ್ದಾರೆ. ಈ ಕುರೊತು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯ ಮದಲ್ಲಿ ಪೋಸ್ಟ್ ಮಾಡಿರುವ ಅವರು, ʼಭ್ರಷ್ಟಾ ಚಾರ ಆರಂಭವಾದದ್ದು ಜೆಡಿಎಸ್-ಬಿಜೆಪಿಯಿಂದ’ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇಂದಿರಾ ಗಾಂಧಿ 1970ರ ದಶಕದಲ್ಲಿ ಸರ್ಕಾರದ ಕ್ರೂರ ನೀತಿಗಳ ಮೂಲಕ ಕಾಂಗ್ರೆಸ್‌ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ತರುವ ಮೂಲಕ ಭ್ರಷ್ಟಾಚಾರವನ್ನು ಸಾಂಸ್ಥಿಕಗೊಳಿಸಿದರು. ಆಧುನಿಕ ಭಾರತದಲ್ಲಿ ಭ್ರಷ್ಟಾಚಾರವು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭವಾಯಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭ ಗಳಿಸಿದೆ. ಖಂಡ್ರೆ ಇತಿಹಾಸವನ್ನು ಅಧ್ಯಯನ ಮಾಡಬೇಕುʼ ಎಂದಿದ್ದಾರೆ.

ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

ನಟ ಚೇತನ್‌ ಅಹಿಂಸಾ (Chethan Kumar) ತಮ್ಮ ಹೇಳಿಕೆ ಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು. ಇದೀಗ ದರ್ಶನ್ ಬಂಧನ ಕುರಿತು ಮಾಧ್ಯಮದ ಜತೆ ಮಾತನಾಡಿದ್ದಾರೆ. ದರ್ಶನ್ ತಮಗೆ ಮನೆಯೂಟ ಬೇಕು ಎಂದು ಪಟ್ಟು ಹಿಡಿದ ಬೆನ್ನಲ್ಲಿಯೇ, ತಮ್ಮ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದಿದ್ದಾರೆ.

ಚೇತನ್‌ ಅಹಿಂಸಾ ಮಾತನಾಡಿ ʻʻನಾನು ದರ್ಶನ್‌ ಅವರನ್ನು ಹಲವು ಸಲ ಭೇಟಿಯಾಗಿದ್ದೇನೆ. ಅವರು ದೊಡ್ಡ ಸ್ಟಾರ್‌. ಕೋಟಿ ಕಲೆಕ್ಷನ್‌ ಮಾಡುವ ಹೀರೊ. ಆದರೆ ಸಿನಿಮಾ ರಂಗದಲ್ಲಿ ವಿಚಾರಣ, ನಡವಳಿಕೆ, ಅಲೋಚನೆ, ಪ್ರತಿಭೆ ಇದಕೆಲ್ಲ ಬೆಲೆ ಇಲ್ಲ. ಹಣಕ್ಕೆ ಮಾತ್ರ ಬೆಲೆ. ದರ್ಶನ್‌ ಈ ಕೊಲೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆರೋಪಿ ನಿಜ. ಆದರೆ ಅಪರಾಧಿ ಅಲ್ಲ. ಬಹಳ ಗಂಭೀರ ವಾದ ಆರೋಪ ಇದು. ಸುಮ್ಮನೆ ಪೊಲೀಸರು ಸಮಯ ವ್ಯರ್ಥ ಮಾಡಿಕೊಂಡು ಇಲ್ಲದೇ ಇರುವುದನ್ನು ಹುಟ್ಟು ಹಾಕುವುದಿಲ್ಲ. ನಿರ್ಧಾರ ಬರಲಿ. ದರ್ಶನ್‌ ಹಾಗೂ ರೇಣುಕಾ ಸ್ವಾಮಿ ಸಮಸ್ಯೆ ಅಲ್ಲʼʼಎಂದು ಮಾತು ಶುರು ಮಾಡಿದರು.

ʻʻಹೀರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ, ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಹಣ ಅವರ ಬಳಿ ಇರುತ್ತೆ. , ಚಿತ್ರರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ದು ನಂಬ್ತೀವಿ, ಆದರೆ ಅದೇ ದರ್ಶನ್ ಕೊಲೆ ಆರೋಪಿ ಅಂದ್ರೆ ನಂಬಲ್ಲ, ಹೀಗಾಗಿಯೇ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಚಿತ್ರರಂಗದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕ. ದರ್ಶನ್ ಆರೋಪಿಯಷ್ಟೇ ಅಪರಾಧಿಯಲ್ಲ ಆದರೆ ಅವರ ಮೇಲೆ ಗಂಭೀರ ಆರೋಪ ಇದೆʼʼ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Assault Case : ಕಾರು ಚಾಲಕನ ಮುಖಕ್ಕೆ‌ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್‌

Assault Case : ಕ್ಷುಲ್ಲಕ ವಿಚಾರಕ್ಕೆ ಕಿರಿಕ್‌ ಮಾಡಿಕೊಂಡ ಆಟೋ ಡ್ರೈವರ್‌, ಕಾರು ಚಾಲಕನ ಮುಖಕ್ಕೆ ಉಗಿದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮುಂದುವರಿದು ಕಾರಿನ ಮಿರರ್‌ ಕಿತ್ತು ಹಾಕಿದ್ದಾನೆ. ಸದ್ಯ ಈತನನ್ನು ಪತ್ತೆ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

VISTARANEWS.COM


on

By

Assault Case
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಗೂಂಡಾಗಿರಿ (Assault Case) ತೋರಿಸಿದ್ದಾನೆ. ಕಾರು ಚಾಲಕನ ಮುಖಕ್ಕೆ ಉಗಿದು ಬಳಿಕ ಕಾರಿನ ಮಿರರ್‌ ಹೊಡೆದು ಹಾಕಿದ್ದಾನೆ. ಬೆಂಗಳೂರಿನ ಮಾರತಹಳ್ಳಿಯ ಯಮಲೂರು ಸಿಗ್ನಲ್ ಬಳಿ ಆಗಸ್ಟ್ 5ರಂದು ಈ ಘಟನೆ ನಡೆದಿದೆ.

ಕ್ಷುಲ್ಲಕ ವಿಚಾರಕ್ಕೆ ಕಾರು ಚಾಲಕ ಹಾಗೂ ಆಟೋ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕಾರು ಚಾಲಕ ವಿಡಿಯೊ ರೆಕಾರ್ಡ್‌ ಮಾಡುತ್ತಿರುವುದನ್ನು ನೋಡಿದ ಆತ ಆಟೋದಿಂದ ಇಳಿದು ಬಂದವನೇ ಅವಾಚ್ಯ ಶಬ್ಧಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಬಳಿಕ ಕಾರು ಚಾಲಕ ಮುಖಕ್ಕೆ ಉಗಿದು, ಕಾರಿಗೆ ಹೊಡೆದು, ಮಿರರ್‌ ಕಿತ್ತು ಹಾಕಿದ್ದಾನೆ.

ಕಾರು ಚಾಲಕ ಅಲೆಕ್ಸ್ ಬೋಬಿ ವೆಂಪಲ ಎಂಬಾತ ಈ ಸಂಬಂಧ ದೂರು ನೀಡಿದ್ದರು. ಆಟೋ ಚಾಲಕನ ಅನುಚಿತ ವರ್ತನೆ ಬಗ್ಗೆ ಎಚ್ಎಲ್‌ಎಲ್ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು. ಕಾರು ಚಾಲಕ‌ ದೂರಿನ ಮೇಲೆ ಆಟೋ ಚಾಲಕನ ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ. ಚಾಲಕನ ವಿರುದ್ಧ ಬಿ.ಎನ್.ಎಸ್ ಸೆಕ್ಷನ್ 126(2), 324(4), 351(2), 352 ಅಡಿ ಎಫ್.ಐ.ಆರ್ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳದ ಕೃಷ್ಣಾ ನದಿ ಹಿನ್ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಹುಲುಗಬಾಳ ಗ್ರಾಮದ ಬಾಳು ಚೌಹಾಣ್ (49) ನಿನ್ನೆ ಬುಧವಾರ ಮಧ್ಯಾಹ್ನ ಕೃಷ್ಣ ನದಿಯಲ್ಲಿ ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್‌ ತಂಡ ಹಾಗೂ ಅಥಣಿ ಪೊಲೀಸರು ಅಗ್ನಿಶಾಮಕ ದಳ ನಿನ್ನೆಯಿಂದಲೂ ಹುಡುಕಾಟ ನಡೆಸಿದ್ದರು.

ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ನದಿಯ ಹಿನ್ನೀರನ್ನು ದಾಟಿ ನಿವಾಸಕ್ಕೆ ಹೋದಾಗ ದುರ್ಘಟನೆ ಸಂಭವಿಸಿತು. ಇಬ್ಬರು ಜತೆಯಾಗಿ ಹೋಗುವಾಗ ಬಾಳು ಚೌಹಾಣ್‌ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಅಥಣಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಹಿಂದೂ ಹುಡುಗನನ್ನು ಪ್ರೀತಿಸಿದ್ದಕ್ಕೆ ನಡುರಸ್ತೆಯಲ್ಲಿ ಎಲ್ಲರೆದುರೇ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣ!

ಮೊದಲ ರಾತ್ರಿಯೇ ಮಚ್ಚಿನಲ್ಲಿ ಹೊಡೆದಾಟ, ವಧುವಿನ ಜೊತೆಗೆ ವರನೂ ಸಾವು

ಕೋಲಾರ: ಮದುವೆಯ (Marriage) ಮೊದಲ ರಾತ್ರಿಯೇ ಜಗಳ (Quarrel) ತಾರಕಕ್ಕೇರಿ ಮಚ್ಚಿನಲ್ಲಿ ಪರಸ್ಪರ ಕೊಚ್ಚಿಕೊಂಡಿದ್ದ ವಧು- ವರ ಪ್ರಕರಣದಲ್ಲಿ, ವಧುವಿನ ಜೊತೆಗೆ ವರನೂ (Couple Death) ಮೃತಪಟ್ಟಿದ್ದಾನೆ. ನಿನ್ನೆ ಕೋಲಾರದ (Kolar news) ಕೆಜಿಎಫ್‌ನ ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿತ್ತು.

ನಿನ್ನೆ ಕೆಜಿಎಫ್ ಆಸ್ಪತ್ರೆಯಲ್ಲಿ ವಧು ಲಿಖಿತಶ್ರೀ (20) ಸಾವನ್ನಪ್ಪಿದ್ದಳು. ಆಸ್ಪತ್ರೆ ಸೇರಿದ್ದ ವರ ನವೀನ್ (28) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿದ್ದ ನವೀನ್ ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು.

ನಿನ್ನೆ ಬೆಳಗ್ಗೆ ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಕೆಲ‌ಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ‌ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಮಚ್ಚು ಹಿಡಿದು ಕೊಚ್ಚಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ವಧು ನಿನ್ನೆಯೇ ಕೊನೆಯುಸಿರೆಳೆದಿದ್ದಳು. ಸ್ಥಳಕ್ಕೆ ಆ್ಯಂಡರ್‌ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ಹುಟ್ಟಿಕೊಂಡಿದೆ ಎಂಬುದು ಗೊತ್ತಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Prajwal Revanna Case: ರೇವಣ್ಣ, ಪ್ರಜ್ವಲ್‌ ರೇವಣ್ಣ ಅರ್ಜಿಗಳ ವಿಚಾರಣೆ ಆ.29ಕ್ಕೆ ಮುಂದೂಡಿಕೆ

ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ (Karnataka High Court) ಆಗಸ್ಟ್ 29ಕ್ಕೆ ಮುಂದೂಡಿದೆ.

VISTARANEWS.COM


on

Prajwal Revanna Case HD Revanna bail plea arguments and counter arguments
Koo

ಬೆಂಗಳೂರು: ಲೈಂಗಿಕ ಕಿರುಕುಳ (Physical abuse) ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಕುರಿತ ಎಫ್‌ಐಆರ್‌ ರದ್ದುಪಡಿಸಲು ಕೋರಿ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ (Karnataka High Court) ಆಗಸ್ಟ್ 29ಕ್ಕೆ ಮುಂದೂಡಿದೆ.

ಇದರೊಂದಿಗೆ, ಆಗಸ್ಟ್ 29ರವರೆಗೂ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿ ಇರುವುದು ನಿಶ್ಚಿತ. ಪ್ರತ್ಯೇಕ ಅರ್ಜಿಗಳನ್ನು ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿತ್ತು. ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ದೂರುಗಳ ಎಫ್‌ಐಆರ್‌ ರದ್ದುಪಡಿಸಲು ಅರ್ಜಿಗಳಲ್ಲಿ ಕೋರಲಾಗಿತ್ತು.

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಅಸಲಿ; ಎಫ್‌ಎಸ್‌ಎಲ್‌ ವರದಿ ಬಹಿರಂಗ

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ, ಪ್ರಜ್ವಲ್‌ ರೇವಣ್ಣ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೊಗಳು ಅಸಲಿಯಾಗಿವೆ. ವಿಡಿಯೊಗಳನ್ನು ತಿರುಚಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು (FSL Report) ತಿಳಿಸಿದೆ. ಇದರಿಂದಾಗಿ ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲು ಎಸ್‌ಐಟಿಗೆ ಆನೆ ಬಲ ಬಂದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗಳು ಅಸಲಿ ಎಂಬುದು ಎಫ್‌ಎಸ್‌ಎಲ್‌ ವರದಿಯಿಂದ ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದ ವಿಡಿಯೊಗಳನ್ನು ಎಡಿಟ್‌ ಅಥವಾ ಮಾರ್ಫ್‌ ಮಾಡಿಲ್ಲ. ಯಾವುದೇ ರೀತಿಯಲ್ಲಿ ಎನಿಮೇಷನ್‌, ಗ್ರಾಫಿಕ್ಸ್‌ಗಳನ್ನು ಬಳಸಿಲ್ಲ. ಎಲ್ಲ ವಿಡಿಯೊಗಳು ಅಸಲಿಯಾಗಿವೆ ಎಂಬುದಾಗಿ ಎಸ್‌ಎಫ್‌ಎಲ್‌ ವರದಿ ಸಲ್ಲಿಸಿದ್ದು, ವರದಿ ಈಗ ಎಸ್‌ಐಟಿ ತಂಡದ ಕೈಸೇರಿದೆ. ಇದರಿಂದಾಗಿ ಎಸ್‌ಐಟಿ ಇನ್ನು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದೆ ಎಂದು ತಿಳಿದುಬಂದಿದೆ.

ವಿಡಿಯೊದಲ್ಲಿರುವುದು ಪ್ರಜ್ವಲ್‌ ರೇವಣ್ಣ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳಲ್ಲಿ ಪುರುಷನ ಮುಖವನ್ನು ತೋರಿಸಿಲ್ಲ. ಹಾಗಾಗಿ, ಅಶ್ಲೀಲ ವಿಡಿಯೊದಲ್ಲಿರುವುದು ಪ್ರಜ್ವಲ್‌ ರೇವಣ್ಣ ಹೌದೋ, ಅಲ್ಲವೋ ಎಂಬುದು ಇದುವರೆಗೆ ದೃಢವಾಗಿಲ್ಲ. ಈಗ ವಿಡಿಯೊಗಳು ಅಸಲಿಯಾಗಿವೆ ಎಂಬುದು ಮಾತ್ರ ವರದಿಯಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣ ಹೌದೋ, ಅಲ್ಲವೋ ಎಂಬುದು ಕೂಡ ಬಯಲಾಗಿದೆ. ಎಫ್‌ಎಸ್‌ಎಲ್‌ ವರದಿ ಬಳಿಕ ಎಸ್‌ಐಟಿ ಅಧಿಕಾರಿಗಳ ತನಿಖೆಯು ಚುರುಕುಗೊಂಡಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸುತ್ತಾರೆ. ಅದರಲ್ಲಿ, ಎಫ್‌ಎಸ್‌ಎಲ್‌ ವರದಿಯ ಕುರಿತು ಕೂಡ ಉಲ್ಲೇಖಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್‌ ರೇವಣ್ಣ, ವಿಡಿಯೊ ವೈರಲ್‌ ಆಗುತ್ತಲೇ ವಿದೇಶಕ್ಕೆ ಪರಾರಿಯಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಅವರು ಭಾರತಕ್ಕೆ ವಾಪಸ್‌ ಬಂದಿದ್ದರು. ಭಾರತಕ್ಕೆ ವಾಪಸಾಗುತ್ತಲೇ ಅವರನ್ನು ಬಂಧಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯ ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ತಂದೆ ಎಚ್‌.ಡಿ.ರೇವಣ್ಣ ಅವರು ಕೂಡ ಜೈಲು ಸೇರಿದ್ದರು. ಅವರು ಈಗ ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ಪ್ರಕರಣವು ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೂ ಮುಳುವಾಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಎಫ್‌ಐಆರ್‌; ಪ್ರೀತಂ ಗೌಡ ಮೇಲೂ ದೂರು

Continue Reading

ಮೈಸೂರು

CM Siddaramaiah: ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಬ್ಬರ; ʼಜನಾಂದೋಲನ ಸಮಾವೇಶʼ ಮೂಲಕ ದೋಸ್ತಿ ಪಾದಯಾತ್ರೆಗೆ ಟಕ್ಕರ್‌

CM Siddaramaiah: ನಾಳೆ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಜನಾಂದೋಲನ ಸಮಾವೇಶದ ಮೂಲಕ ಪ್ರತಿಪಕ್ಷಗಳ ಆಪಾದನೆಗಳಿಗೆ ಉತ್ತರ ನೀಡಲು ಸಿದ್ದರಾಮಯ್ಯ ಮುಂದಾಗಿದ್ದು, ಹೆಚ್ಚು ಜನ ಸೇರಿಸಲು ಪ್ರಮುಖವಾಗಿ 6 ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

cm siddaramaiah
Koo

ಮೈಸೂರು: ಬಿಜೆಪಿ- ಜೆಡಿಎಸ್‌ ಪಾದಯಾತ್ರೆ (BJP-JDS Padayatra) ಮೈಸೂರು (Mysore) ತಲುಪುವ ಒಂದು ದಿನ ಮೊದಲೇ ಭಾರಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ದೋಸ್ತಿಗಳಿಗೆ ಟಕ್ಕರ್‌ ಕೊಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಸಜ್ಜಾಗಿದ್ದಾರೆ. ನಾಳೆ ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್‌ನ (Congress) ʼಜನಾಂದೋಲನ ಸಮಾವೇಶʼಕ್ಕೆ ಸುಮಾರು 2 ಲಕ್ಷ ಜನ ಸೇರಿಸಲು ಕೈ ಪಡೆ ಚಿಂತಿಸಿದೆ.

ನಾಳೆ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಜನಾಂದೋಲನ ಸಮಾವೇಶದ ಮೂಲಕ ಪ್ರತಿಪಕ್ಷಗಳ ಆಪಾದನೆಗಳಿಗೆ ಉತ್ತರ ನೀಡಲು ಸಿದ್ದರಾಮಯ್ಯ ಮುಂದಾಗಿದ್ದು, ಹೆಚ್ಚು ಜನ ಸೇರಿಸಲು ಪ್ರಮುಖವಾಗಿ 6 ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಗಳಿಗೆ ಸೂಚನೆ ಕೊಡಲಾಗಿದೆ. ಜೊತೆಗೆ ರಾಜ್ಯದ ವಿವಿಧೆಡೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಲಿದ್ದಾರೆ.

ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲಿದ್ದು, ಬಿಜೆಪಿ-ಜೆಡಿಎಸ್ ಕಾಲದ ಹಗರಣಗಳ ಕುರಿತು ಪ್ರಸ್ತಾಪ ಮಾಡಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ಭ್ರಷ್ಟಾಚಾರ ಪ್ರಕರಣಗಳ ಪ್ರಸ್ತಾಪ ಮಾಡಲಿದ್ದಾರೆ.

ಇದಕ್ಕೂ ಮೊದಲು ರಾಜ್ಯ ರಾಜಕೀಯ ಇತಿಹಾಸದಲ್ಲಿ ಬಿಎಸ್‌ವೈ- ಎಚ್‌ಡಿಕೆ ನಡುವೆ ನಡೆದ ಟಾಕ್ ಫೈಟ್ ವಿಡಿಯೋ ತುಣುಕುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಬಿಜೆಪಿ ಆಡಳಿತ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟ ಹೇಳಿಕೆಗಳನ್ನೂ ಪ್ರದರ್ಶಿಸಲಾಗುತ್ತದೆ.

ಹಿಂದೆ ಹೆಚ್‌ಡಿಕೆ ಕುಟುಂಬದ ವಿರುದ್ಧ ಬಿಎಸ್‌ವೈ ಮಾಡಿದ್ದ ಆರೋಪಗಳನ್ನು, ಹೆಚ್‌ಡಿಕೆ ಕುಟುಂಬಕ್ಕೆ ಸಂಬಂಧಿಸಿದ 42 ಸೈಟ್‌ಗಳ ಕುರಿತು ಬಿಜೆಪಿ ನೀಡಿದ್ದ ಜಾಹೀರಾತನ್ನು ಕೈ ಪಡೆ ದೊಡ್ಡ ದೊಡ್ಡ ಫ್ಲೆಕ್ಸ್ ಮಾಡಿ ಹಾಕಲಿದೆ ಎನ್ನಲಾಗಿದೆ. ನಾಳೆ ಮೈಸೂರು ನಗರದ ಉದ್ದಕ್ಕೂ ಬಿಜೆಪಿ ನೀಡಿದ್ದ ಜಾಹೀರಾತಿನ ಪ್ರತಿಯನ್ನು ಬ್ಯಾನರ್ಸ್ ಮಾಡಿ ಕಾಂಗ್ರೆಸ್‌ ಹಾಕಲಿದೆ ಎಂದು ತಿಳಿದುಬಂದಿದೆ. ಆ ಮೂಲಕ ಜೆಡಿಎಸ್- ಬಿಜೆಪಿ ನಾಯಕರಿಗೆ ಮುಜುಗರ ಸೃಷ್ಟಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಒಂದಾದ್ರಾ ಸಿದ್ದರಾಮಯ್ಯ- ಬಿಕೆ ಹರಿಪ್ರಸಾದ್?‌

ಪಕ್ಷದೊಳಗೆ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಭಿನ್ನಮತ ಹೊಂದಿದ್ದ ಮುಖಂಡ ಬಿಕೆ ಹರಿಪ್ರಸಾದ್‌ ನಿನ್ನೆ ರಾತ್ರಿ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಹಿಂದೆ ಅಸಮಾಧಾನಗೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಬಿಕೆಹೆಚ್ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿಎಂ ಅವರನ್ನು ದಿಢೀರ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಸುದೀರ್ಘ ಒಂದುವರೆ ಗಂಟೆಗಳ ಕಾಲ ಸಿಎಂ ಹಾಗೂ ಹರಿಪ್ರಸಾದ್ ಮಾತುಕತೆ ನಡೆಸಿದರು. ಸಚಿವ ಮಹದೇವಪ್ಪ ಕರೆ ಮಾಡಿ ಬಿಕೆ ಹರಿಪ್ರಸಾದ್‌ಗೆ ಆಹ್ವಾನ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಬಳಿಗೆ ಹರಿಪ್ರಸಾದ್ ಅವರನ್ನು ಆರ್.ಎಲ್ ಜಾಲಪ್ಪ ಅವರ ಅಳಿಯ ನಾಗರಾಜ್ ಕರೆದುಕೊಂಡು ಹೋದರು. ಮೈಸೂರಿನ ಜನಾಂದೋಲನ ಸಮಾವೇಶಕ್ಕೆ ಬರುವಂತೆ ಬಿಕೆ ಹರಿಪ್ರಸಾದ್‌ಗೆ ಸಿದ್ದರಾಮಯ್ಯ ಖುದ್ದು ಆಹ್ವಾನಿಸಿದರು.

ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ಹಿನ್ನೆಲೆಯಲ್ಲಿ ಯಾವೆಲ್ಲ ಷಡ್ಯಂತ್ರ ತಮ್ಮ ವಿರುದ್ಧ ನಡೆದಿದೆ ಎಂಬ ಅಭಿಪ್ರಾಯವನ್ನು ಹರಿಪ್ರಸಾದ್‌ ಜೊತೆ ಸಿಎಂ ಹಂಚಿಕೊಂಡಿದ್ದಾರೆ. ಇದೀಗ ಮೈಸೂರಿನ ಜನಾಂದೋಲನ ಸಮಾವೇಶಕ್ಕೆ ಬಿಕೆಎಚ್‌ ಹೋಗ್ತಾರಾ ಇಲ್ಲವಾ ಎಂಬ ಕುತೂಹಲ ಮೂಡಿದೆ. ಹೈಕಮಾಂಡ್ ನಾಯಕರ ನಡೆ ನೋಡಿ ಅವರು ತೀರ್ಮಾನ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ‌ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್‌!

Continue Reading

ಬೆಂಗಳೂರು

Self Harming : ನನ್ನಿಂದ ನನ್ನ ಹೆಂಡ್ತಿನಾ ದೂರ ಮಾಡಿದ್ರು ಅಂತ ಆತ್ಮಹತ್ಯೆಗೆ ಯತ್ನಿಸಿದ ಯುವಕ

Self Harming: ಆಸ್ತಿಗಾಗಿ ಕಿರುಕುಳ ಕೊಟ್ಟಿದ್ದಲ್ಲದೇ, ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಆಸ್ಪತ್ರೆಗೆ ಸೇರಿದ್ದಾರೆ ಎಂದು ಮನನೊಂದ ಯುವಕನೊರ್ವ ಕಟ್ಟಡವೇರಿ ಆತ್ಮಹತ್ಯೆಗೆ ಯತ್ನಿಸಿದ್ದ. ಸತತ ಮೂರು ಗಂಟೆಗಳ ಕಾರ್ಯಾಚರಣೆಯಲ್ಲಿ ಮನವೊಲಿಸಿ ಪೊಲೀಸರು ರಕ್ಷಿಸಿದ್ದಾರೆ.

VISTARANEWS.COM


on

By

Self harming
Koo

ಬೆಂಗಳೂರು: ಹೊಸದಾಗಿ ನಿರ್ಮಾಣವಾಗಿದ್ದ ನಾಲ್ಕಂತಸ್ತಿನ ಕಟ್ಟಡವೇರಿದ ಯುವಕನೊರ್ವ ಆತ್ಮಹತ್ಯೆಗೆ (Self Harming)‌ ಯತ್ನಿಸಲು ಮುಂದಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿ ನಡೆದಿದೆ.

ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ, ಆದರೆ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ನಾನು ಈಗ ಇಲ್ಲಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಜತೆಗೆ ನನ್ನ ತಾಯಿ ಬೈದರು, ಯಾವುದೇ ಕಾರಣಕ್ಕೂ ನಾನು ವಾಪಾಸ್ ಬರುವುದಿಲ್ಲ ಎಂದು ಹಠ ಹಿಡಿದಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಕೆಳಗೆ ಇಳಿಸಲು ಎಷ್ಟೇ ಮನವೊಲಿಸಿದರೂ ಸಾಧ್ಯವಾಗಲಿಲ್ಲ.

ಏಣಿ ಹಾಕಲು ಹೋದರೆ, ತಳ್ಳುವ ಕೆಲಸ ಮಾಡಿದ್ದ. ಈ ವೇಳೆ ನನ್ನ ಪತ್ನಿಯನ್ನು ಕರೆಸಿ ಎಂದು ಪಟ್ಟು ಹಿಡಿದಿದ್ದ. ಈ ವೇಳೆ ಮನೆಯಿಂದ ಪದೆಪದೇ ಫೋನ್‌ ಕಾಲ್‌ ಬಂತು ಅಂತ ಸಿಟ್ಟಾಗಿ ಮೊಬೈಲ್‌ ಅನ್ನೇ ಮುರಿದು ಬಿಸಾಕಿದ್ದಾನೆ. ಬಳಿಕ ಅಗ್ನಿಶಾಮಕ ವಾಹನ ಆಗಮಿಸಿ ಏಣಿ , ಬಲೆಗಳನ್ನು ತಂದು ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ:Chetan Ahimsa: ಭ್ರಷ್ಟಾಚಾರ ಆರಂಭವಾದದ್ದೇ ಕಾಂಗ್ರೆಸ್‌ನಿಂದ: ನಟ ಚೇತನ್‌ ಅಹಿಂಸಾ ಆರೋಪ

ಸತತ ಮೂರು ಗಂಟೆಗಳ ಕಾಲ ಸತಾಯಿಸಿದ್ದ ಯುವಕನನ್ನು ಪೊಲೀಸರು ಕಟ್ಟಡದಿಂದ ಇಳಿಸಿ ಹೊಯ್ಸಳದಲ್ಲಿ ಕರೆದುಹೋದರು. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ, ನಾನು ಹೆಸರು ಮಂಜುನಾಥ್‌ ಎಂದು ಹುಣಸೆಮಾರನಹಳ್ಳಿಯವನು ಎಂದು ಯುವಕ ಮಾಹಿತಿ ನೀಡಿದ್ದಾನೆ.

ಆಸ್ತಿಯ ವಿಚಾರವಾಗಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದಕ್ಕಾಗಿ ಗಾಂಜಾ ಸೇವಿಸುತ್ತೀಯಾ ಎಂದು ಚಿಕಿತ್ಸೆ ಕೊಡಿಸಲು ಕೆ.ಜಿ ಹಳ್ಳಿಯ ಜನರಲ್ ಆಸ್ಪತ್ರೆಗೆ ಸೇರಿಸಿದ್ದರು. ಕುಟುಂಬಸ್ಥರು ನನ್ನ ಹೆಂಡತಿಯನ್ನು ನನ್ನಿಂದ ದೂರು ಮಾಡಿದ್ದರು. ವಿಷವಿಟ್ಟು ಕೊಲ್ಲಲು ಪ್ರಯತ್ನ ಪಟ್ಟರು. ಈಗ ನಾನು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದೀನಿ. ನನಗೆ ನ್ಯಾಯ ಬೇಕು ನನ್ನ ಮೊಬೈಲ್‌ನಲ್ಲಿ ಎಲ್ಲ ರಹಸ್ಯ ಇದೆ. ನಾನು ಕೆಳಗೆ ಬಂದರೆ ಹುಚ್ಚ ಅನ್ನೋ ಪಟ್ಟ ಕಟ್ಟುತ್ತಾರೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸುತ್ತಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Swapnil Kusale
ಕ್ರೀಡೆ12 mins ago

Swapnil Kusale: ತವರಿಗೆ ಮರಳಿದ ಸ್ವಪ್ನಿಲ್​ ಕುಸಾಲೆ; ಮುಂಬೈಯಲ್ಲಿ ಭರ್ಜರಿ ಸ್ವಾಗತ

Naga Chaitanya engagement Sobhita Dhulipala engaged
ಟಾಲಿವುಡ್15 mins ago

Naga Chaitanya: ನಾಗ ಚೈತನ್ಯ ಜತೆ ಎಂಗೇಜ್ ಆದ ಶೋಭಿತಾ ಧೂಳಿಪಾಲ; ಸಂಭ್ರಮದ ಫೋಟೋಸ್‌ ವೈರಲ್‌!

Parliament Session
ರಾಜಕೀಯ38 mins ago

Parliament Session: ವಿನೇಶ್‌ ಫೋಗಟ್‌ ಅನರ್ಹತೆಯ ವಿಚಾರ ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಸಭಾತ್ಯಾಗ

Assault Case
ಬೆಂಗಳೂರು41 mins ago

Assault Case : ಕಾರು ಚಾಲಕನ ಮುಖಕ್ಕೆ‌ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್‌

Abhishek Ambareesh wife aviva is pregnant actress samalatha will become grandmother
ಸಿನಿಮಾ47 mins ago

Abhishek Ambareesh: ಗುಡ್‌ ನ್ಯೂಸ್‌ ಕೊಟ್ಟ ಅಭಿಷೇಕ್ ಅಂಬರೀಶ್; ಮಂಡ್ಯದ ಗಂಡು ಹುಟ್ಟಿ ಬರ್ತಿದ್ದಾರೆ ಅಂದ್ರು ಅಂಬಿ ಫ್ಯಾನ್ಸ್‌!

Prajwal Revanna Case HD Revanna bail plea arguments and counter arguments
ಕ್ರೈಂ55 mins ago

Prajwal Revanna Case: ರೇವಣ್ಣ, ಪ್ರಜ್ವಲ್‌ ರೇವಣ್ಣ ಅರ್ಜಿಗಳ ವಿಚಾರಣೆ ಆ.29ಕ್ಕೆ ಮುಂದೂಡಿಕೆ

Vinesh Phogat
ಕ್ರೀಡೆ55 mins ago

Vinesh Phogat: ವಿನೇಶ್​ಗೆ 1.5 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

Bangladesh Unrest
ವಿದೇಶ1 hour ago

Bangladesh Unrest: ದೇವರ ಮೂರ್ತಿಗಳು ಪುಡಿ ಪುಡಿ; ಹಿಂದೂಗಳ ರಕ್ಷಣೆಗೆ ಸೇನೆ, ಪೊಲೀಸರೇ ಹಿಂದೇಟು

Paris Olympics
ಕ್ರೀಡೆ1 hour ago

Paris Olympics: ಒಲಿಂಪಿಕ್ಸ್​ನಲ್ಲಿಯೂ ಸದ್ದು ಮಾಡಿದ ‘​ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು; ವಿಡಿಯೊ ವೈರಲ್​

Buddhadeb Bhattacharjee
ದೇಶ2 hours ago

Buddhadeb Bhattacharjee: ಸರಳತೆಯಿಂದಲೇ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌