ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government in Karnataka) ಅಧಿಕಾರಕ್ಕೆ ಬಂದು ಇನ್ನೂ 50 ದಿನವಷ್ಟೇ ಆಗಿದೆ. ಆದರೆ, ಅದರಲ್ಲೇ ಅದು ಮುಂದೆ ಸಾಗಲಿರುವ ಹಿಂಸಾತ್ಮಕ ದಾರಿಯನ್ನು (Crime Politics) ಸ್ಪಷ್ಟಪಡಿಸಿದೆ ಎಂದು ಕರ್ನಾಟಕ ಬಿಜೆಪಿ (BJP Karnataka) ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಜೈನ ಮುನಿ (Jain Muni Murder), ಯುವ ಬ್ರಿಗೇಡ್ ಕಾರ್ಯಕರ್ತ (Yuva brigade activist murder) ಸೇರಿದಂತೆ ಇದುವರೆಗೆ ನಾಲ್ವರ ಭಯಾನಕ ಕೊಲೆಯಾಗಿದೆ. 13 ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಇಬ್ಬ ಬಸ್ ಚಾಲಕ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಯತ್ನಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕ್ರೈಂ ಬಾಣ ಬಿಟ್ಟಿದೆ.
ʻʻಸಿದ್ದರಾಮಯ್ಯರವರ 2.0 ತುಘಲಕ್ ಆಡಳಿತದಲ್ಲಿಯೂ ಮುಂದುವರೆದಿದೆ ಕೊಲೆ, ಸುಲಿಗೆ, ದರೋಡೆ, ರೈತರ ಆತ್ಮಹತ್ಯೆ..! “ಕರ್ನಾಟಕ ಅಶಾಂತಿಯ ತೋಟವನ್ನಾಗಿಸುವುದೇ” ಕಾಂಗ್ರೆಸ್ ಗ್ಯಾರಂಟಿ..!ʼʼ ಎಂದು ಅದು ಹೇಳಿದೆ.
ʻʻಕಾಂಗ್ರೆಸ್ ಬಂದಿದೆ, ಯಾತನೆ ತಂದಿದೆ..!ʼʼ ಎಂಬ ಶೀರ್ಷಿಕೆಯಡಿ ಅದು ಮಂಡಿಸಿರುವ ಸಾವಿನ ಲೆಕ್ಕ
ನಾಲ್ಕು ಸಾವುಗಳು
⛔️ ಬೆಳಗಾವಿಯಲ್ಲಿ ಜೈನ ಮುನಿಯ ಭೀಕರ ಕೊಲೆ..!
⛔️ ಟಿ.ನರಸೀಪುರದಲ್ಲಿ ಹಿಂದೂ ಯುವಕನ ಕೊಲೆ..!
⛔️ ಮಂಗಳೂರಿನಲ್ಲಿ ಕೆಲಸಕ್ಕಿದ್ದ ಕಾರ್ಮಿಕನ ಬರ್ಬರ ಹತ್ಯೆ..!
⛔️ ಕಲಬುರ್ಗಿಯಲ್ಲಿ ಅಕ್ರಮ ಮರುಳು ಮಾಫಿಯಾ ಪೇದೆಯ ಕೊಲೆ..!
ಎರಡು ಆತ್ಮಹತ್ಯೆ ಯತ್ನಗಳು
⛔️ ಕಲಬುರ್ಗಿಯಲ್ಲಿ ಹಫ್ತಾ ವಸೂಲಿಗೆ ಕಿರುಕುಳ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನ..!
⛔️ ಮಂಡ್ಯ ಕೃಷಿ ಸಚಿವನ ದೌರ್ಜನ್ಯಕ್ಕೆ ಒಳಗಾಗಿ KSRTC ಚಾಲಕ ಆತ್ಮಹತ್ಯೆ ಯತ್ನ..!
ಒಂದು ತಿಂಗಳಲ್ಲಿ ಅನ್ನದಾತರ ಸರಣಿ ಆತ್ಮಹತ್ಯೆ!
⛔️ ರಿಪ್ಪನ್ ಪೇಟೆ: ರೈತ ಸುರೇಶ್
⛔️ ಹಾವೇರಿ: ರೈತ ದೇವೇಂದ್ರಪ್ಪ ಹನುಮಂತಪ್ಪ ಲಮಾಣಿ
⛔️ ಹಾವೇರಿ: ರೈತ ಬಸವರಾಜ್ ಬೆನಕಣ್ಣನವರ್
⛔️ ಹಾವೇರಿ: ರೈತ ಸಿದ್ದಲಿಂಗಪ್ಪ ಹನುಮಂತಪ್ಪ ಸಪ್ಪಣ್ಣನವರ
⛔️ ಹಾವೇರಿ: ರೈತ ಚಂದ್ರಪ್ಪ ಗದಿಗೆಪ್ಪ,
⛔️ ಹಾವೇರಿ: ರೈತ ಶಿವನಗೌಡ ಭೀಮನಗೌಡ ಹೊಸಮನಿ
⛔️ ಹಾವೇರಿ: ರೈತ ಮಂಜುನಾಥ ನಾಗನೂರು
⛔️ ಯಾದಗಿರಿ : ರೈತ ಅಮರಣ್ಣ ಕುಂಬಾರ
⛔️ ಸುರಪುರ: ರೈತ ಕಾಮರಾಯ
⛔️ ಮೈಸೂರು : ಯಾಲಕ್ಕಿ ಗೌಡ
⛔️ ಚೆನ್ನಗಿರಿ: ರೈತ ಛತ್ರನಾಯ್ಕ
⛔️ ಪಾವಗಡ: ರೈತ ಭೀಮಪ್ಪ
⛔️ ಮುದ್ದೇಬಿಹಾಳ: ರೈತ ಶಿವಪ್ಪ ಬಿರಾದಾರ್
ಇದನ್ನೂ ಓದಿ: Jain Muni Murder: ಜೈನ ಮುನಿ ಹತ್ಯೆಗೆ ಬಿಗ್ ಟ್ವಿಸ್ಟ್; ಹುಸೇನ್ ದಲಾಯತ್ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದ
ಹೀಗೆ ಸರಣಿ ಸಾವಿನ, ಕೊಲೆಗಳ ಲೆಕ್ಕ ಕೊಟ್ಟಿರುವ ಬಿಜೆಪಿ ಇದರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದೆ. ಜೈನ ಮುನಿ ಮತ್ತು ಯುವ ಬ್ರಿಗೇಡ್ ಕಾರ್ಯಕರ್ತನ ಸಾವಿನ ವಿಚಾರವನ್ನು ಇಟ್ಟುಕೊಂಡು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸಲು ಮುಂದಾಗಿದೆ. ಅದರ ಜತೆಗೆ ಬಿಜೆಪಿ ಎರಡು ತಂಡಗಳನ್ನು ರಚಿಸಿ ಬೆಳಗಾವಿ ಮತ್ತು ಮೈಸೂರಿಗೆ ಸತ್ಯಶೋಧನೆಗೆ ಕಳುಹಿಸಿದೆ.