ಬೆಂಗಳೂರು: ಮಾಜಿ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ (S Suresh Kumar) ಅವರ ಫೇಸ್ ಬುಕ್ ಖಾತೆಯನ್ನು (Facebook profile) ಮತ್ತೊಮ್ಮೆ ನಕಲು (Cyber Fraud) ಮಾಡಲಾಗಿದೆ. ಈಗಾಗಲೇ ಹಲವು ಬಾರಿ ಅವರ ಖಾತೆಯನ್ನು ನಕಲು ಮಾಡಲಾಗಿದೆ. ಇದೀಗ ಮತ್ತೊಮ್ಮೆ ನಕಲಿ ಖಾತೆ ತೆರೆದು ಅವರ ಸ್ನೇಹಿತರ ಲಿಸ್ಟ್‌ನಲ್ಲಿದ್ದವರಿಗೆ ಹಣಕ್ಕೆ ಬೇಡಿಕೆ ಇಡಲಾಗಿದೆ.
ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಕಂಡುಹಿಡಿದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಸ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಲಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿರುವಂತ ಶಾಸಕ ಸುರೇಶ್ ಕುಮಾರ್, ಗೆಳೆಯರೊಬ್ಬರು ನನಗೆ ಇದೀಗ ಫೋನ್ ಮಾಡಿ ನನ್ನ ಹೆಸರಿನಲ್ಲಿ ಯಾರೋ ದುರುಳರು ನಕಲಿ FB ಅಕೌಂಟ್ ಮೂಲಕ ಎಲ್ಲರಿಗೂ ಹಣ ಕೇಳುತ್ತಿದ್ದಾರೆಂದು ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ನನಗೆ ಯಾರಿಂದಲೂ ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಇನ್ಯಾವುದರ ಮೂಲಕ ಹಣವನ್ನು ಕೇಳುವ ಪರಿಸ್ಥಿತಿ ಬಂದಿಲ್ಲ. ಈ ನಕಲಿ ಅಕೌಂಟ್‌ಗಾರರ ಆಟಕ್ಕೆ ಯಾರೂ ಬಲಿಯಾಗಬಾರದೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಆ ಅಕೌಂಟ್‌ನಲ್ಲಿ ಕಾಣಿಸಿರುವಂತೆ ನನಗೂ ಉತ್ತರ ಪ್ರದೇಶಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಅಪ್ಪಟ ಕರ್ನಾಟಕದ, ಬೆಂಗಳೂರಿನ ಹೆಮ್ಮೆಯ ನಾಗರಿಕ. ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೂ ಇಂದು ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Cyber Fraud: 6 ವರ್ಷದಲ್ಲಿ ಸೈಬರ್ ಅಪರಾಧ 450% ಜಾಸ್ತಿ; ಡೆಬಿಟ್, ಕ್ರೆಡಿಟ್ ಕಾರ್ಡ್‌ದಾರರೇ ಟಾರ್ಗೆಟ್