Site icon Vistara News

ಚಂದ್ರು ಸಾವಿನ ಹಿನ್ನೆಲೆಯಲ್ಲಿ ಸಲಿಂಗಕಾಮದ ಒತ್ತಡ?‌ ಸುಳಿ ಬಿಚ್ಚಿದ ಸಂಶಯ

renukacharya

ದಾವಣಗೆರೆ: ಶಾಸಕರ ರೇಣುಕಾಚಾರ್ಯ ಅವರ ಸಹೋದರರ ಮಗ ಚಂದ್ರಶೇಖರ್‌ ಸಾವಿನ ಸುತ್ತ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಇದಕ್ಕೆ ಸಲಿಂಗಕಾಮದ ಪೀಡನೆಯ ಆಯಾಮವೂ ಸೇರಿಕೊಂಡಿದೆ. ಹಲವು ಅಂಶಗಳು ಈ ಅನುಮಾನವನ್ನು ದೃಢಪಡಿಸಿವೆ.

ಚಂದ್ರು ಸಲಿಂಗಕಾಮದ ಒತ್ತಡಕ್ಕೆ ಬಲಿಯಾದನೇ ಎಂಬ ಅನುಮಾನ ಚಂದ್ರು ಕುಟುಂಬದವರಲ್ಲಿ ಮೂಡಿದೆ. ಚಂದ್ರು ಸ್ನೇಹಿತ ಕಿರಣ್ ಮತ್ತು ಇತರ ಸ್ನೇಹಿತರು ಚಂದ್ರುವನ್ನು ಸಲಿಂಗಕಾಮಕ್ಕೆ ಬಳಸಿಕೊಂಡು ಹತ್ಯೆ ಮಾಡಿರಬಹುದು ಎಂಬ ಅನುಮಾನದಲ್ಲಿ ಚಂದ್ರು ಕುಟುಂಬವಿದೆ.

ಮರಣೋತ್ತರ ಪರೀಕ್ಷೆ ವೇಳೆ ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ. ಪೊಲೀಸ್ ಇನ್ಕ್ವೆಸ್ಟ್ ವರದಿಯಲ್ಲೂ ಚಂದ್ರು ಒಳ ಉಡುಪು ಇರಲಿಲ್ಲ ಅನ್ನುವ ಅಂಶ ಬೆಳಕಿಗೆ ಬಂದಿದೆ. ಹಾಗಿದ್ದರೆ ಚಂದ್ರು ಹಾಕಿದ್ದ ಒಳ ಉಡುಪು ಎಲ್ಲಿ ಹೋಗಿದೆ ಅಥವಾ ಚಂದ್ರುವಿಗೆ ಅದನ್ನು ಧರಿಸುವ ಅಭ್ಯಾಸ ಇರಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಒಳ ಉಡುಪು ಧರಿಸುವ ಅಭ್ಯಾಸವಿತ್ತು ಎಂದು ಚಂದ್ರು ಕುಟುಂಬ ಹೇಳಿದೆ.

ಚಂದ್ರು ಮರ್ಮಾಂಗಕ್ಕೆ ಇಂಜೆಕ್ಷನ್ ನೀಡಿ ನಿಮಿರು ಬರಿಸಿರುವ ಸಾಧ್ಯತೆಗಳು ಕಂಡುಬಂದಿವೆ. ಕಿವಿ ಸೇರಿದಂತೆ ಹಲವೆಡೆ ಕಚ್ಚಿದ ಗುರುತುಗಳಿವೆ. ಹೀಗಾಗಿ ಸಾವಿಗೆ ಮುನ್ನ ಚಂದ್ರುವನ್ನು ಸಲಿಂಗಕಾಮಕ್ಕೆ ಬಳಸಿರಬಹುದು ಎಂಬ ಅನುಮಾನ ಮೂಡಿದೆ. ಅಥವಾ ಸಲಿಂಗಕಾಮಕ್ಕೆ ಬಳಸಿಕೊಂಡಾಗ ಅದನ್ನು ವಿರೋಧಿಸಿ ಅಥವಾ ಮನನೊಂದು ಮಾನಸಿಕ ಒತ್ತಡದಲ್ಲಿ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿಕೊಂಡಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಅನುಮಾನಗಳನ್ನು ಉತ್ತರಿಸಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Missing Case | ಚಂದ್ರಶೇಖರ್‌ ಸಾವಿನ ತನಿಖೆಗೆ ಡಯಾಟಮ್ ಟೆಸ್ಟ್ ಮೊರೆ ಹೋದ ಎಫ್‌ಎಸ್‌ಎಲ್ ಟೀಂ!

Exit mobile version