ದಾವಣಗೆರೆ: ಚರ್ಚ್ ಧರ್ಮಗುರು (ಪಾದ್ರಿ) ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪವನ್ನು (Physical Abuse) ಮಾಡಿದ್ದಾರೆ. ದಾವಣಗೆರೆಯ ಜಯನಗರದ ಡಿಎಚ್‌ಎಂ ಚರ್ಚ್ ಪಾದ್ರಿ ರಾಜಶೇಖರ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ಯಾಮಲಮ್ಮ ಎಂಬಾಕೆ ದೂರು ನೀಡಿದ್ದಾರೆ. 2000ರಿಂದಲ್ಲೂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಸಿದ್ದಾರೆ. ಟೀಚರ್ ಕೆಲಸ ಮಾಡುತ್ತಿದ್ದ ಶ್ಯಾಮಲಮ್ಮ ಚರ್ಚ್‌ಗೆ ಪ್ರಾರ್ಥನೆಗೆಂದು ಬಂದಾಗ ಪಾದ್ರಿ ರಾಜಶೇಖರ್ ಪುಸಲಾಯಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Attempt To Murder : ಬಿಜೆಪಿ ಮುಖಂಡನಿಂದ ಸುಪಾರಿ; ಸಾವಿನಿಂದ ಆರ್‌ಟಿಐ ಕಾರ್ಯಕರ್ತ ಜಸ್ಟ್ ಮಿಸ್
ಪಾದ್ರಿ ರಾಜಶೇಖರ್ ಶ್ಯಾಮಲಮ್ಮ ಅಲ್ಲದೇ ಬೇರೆ ನಾಲ್ವರು ಮಹಿಳೆಯರಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಟೀಚರ್ ಎಸ್‌ಆರ್ (ಸರ್ವೀಸ್ ರಿಜಿಸ್ಟರ್) ಬುಕ್‌ನಲ್ಲಿ ನಾಮಿನಿಯಾಗಿ ರಾಜಶೇಖರ್ ಹೆಸರನ್ನು ಶ್ಯಾಮಲಮ್ಮ ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ ಅಲ್ಲದೆ 25 ರಿಂದ 35 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪಾದ್ರಿ ರಾಜಶೇಖರ್ ಮೇಲೆ 376, 354ಎ, 323, 504, 417 ಹಾಗೂ 420ರಡಿ ಪ್ರಕರಣ ದಾಖಲಾಗಿದೆ. ಶ್ಯಾಮಲಮ್ಮ ದಲಿತ ಮಹಿಳೆ ಎಂಬ ಕಾರಣಕ್ಕೆ ರಾಜಶೇಖರ್ ಜಾತಿ ನಿಂದನೆ ಮಾಡಿದ್ದ. ಈ ಸಂಬಂಧ ಕೇಸ್ ದಾಖಲಾಗಿದೆ.
ಮದುವೆಗೆ ಸಜ್ಜಾಗಿದ್ದ ಪಾದ್ರಿ
ಪಾದ್ರಿ ರಾಜಶೇಖರ್ ಇದೀಗ 33 ವರ್ಷದ ಯುವತಿ ಜತೆಗೆ ಮದುವೆಯಾಗಲು ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಾಖಲೆ ಸಲ್ಲಿಸಿದ್ದಾರೆ. ಹೀಗಾಗಿ ಪಾದ್ರಿ ರಾಜಶೇಖರ್‌ನಿಂದ ಹಲವಾರು ಮಹಿಳೆಯರಿಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆಯೂ ರಾಜಶೇಖರ ಮೇಲೆ ಅವರ ಸ್ವಂತ ಮಗಳೇ ಗಂಭಿರ ಆರೋಪವನ್ನು ಮಾಡಿದ್ದಳು. ಪ್ರಾರ್ಥನೆಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ನೊಂದ ಮಹಿಳೆ ಶ್ಯಾಮಲಮ್ಮ ಪಾದ್ರಿ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ