Attempt To Murder : ಬಿಜೆಪಿ ಮುಖಂಡನಿಂದ ಸುಪಾರಿ; ಸಾವಿನಿಂದ ಆರ್‌ಟಿಐ ಕಾರ್ಯಕರ್ತ ಜಸ್ಟ್‌ ಮಿಸ್‌ - Vistara News

ಬೆಂಗಳೂರು

Attempt To Murder : ಬಿಜೆಪಿ ಮುಖಂಡನಿಂದ ಸುಪಾರಿ; ಸಾವಿನಿಂದ ಆರ್‌ಟಿಐ ಕಾರ್ಯಕರ್ತ ಜಸ್ಟ್‌ ಮಿಸ್‌

Attempt To Murder : ಆರ್‌ಟಿಐ ಅರ್ಜಿ ಸಲ್ಲಿಸಿದ್ದಕ್ಕೆ ಸಿಟ್ಟಾದ ಬಿಜೆಪಿ ಮುಖಂಡನೊಬ್ಬ ಕಾರ್ಯಕರ್ತನ ಕೊಲೆಗೆ ಸುಪಾರಿ ಕೊಟ್ಟಿದ್ದರಿಂದ ಇದೀಗ ಜೈಲುಪಾಲಾಗಿದ್ದಾನೆ. ಈತನಿಗೆ ಸಾಥ್‌ ಕೊಟ್ಟ ಸುಪಾರಿ ಕಿಲ್ಲರ್ಸ್‌ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

VISTARANEWS.COM


on

BJP leader gives supari for RTI activists murder
ಆರೋಪಿ ಗೋವಿಂದರಾಜು ಹಾಗೂ ಪ್ರಾಣಾಪಾಯದಿಂದ ಪಾರಾದ ಆರ್‌ಟಿಐ ಕಾರ್ಯಕರ್ತ ನಾಗರಾಜ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಂದು ಸ್ವಲ್ಪ ಯಾಮಾರಿದರೂ ಆರ್‌ಟಿಐ ಕಾರ್ಯಕರ್ತನ ಭೀಕರ ಹತ್ಯೆ (Attempt To Murder ) ನಡೆಯುತ್ತಿತ್ತು. ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಬಂದಿದ್ದ ಸುಪಾರಿ ಕಿಲ್ಲರ್ಸ್‌ರನ್ನು ಪೊಲೀಸರು ಬಂಧಿಸಿದ್ದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಂಬಳಗೋಡು ಪಂಚಾಯ್ತಿ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ನಾಗರಾಜ್‌ ಎಂಬುವವರು ಅರ್ಜಿಯನ್ನು ಹಾಕಿದ್ದರು. ಈ ವಿಚಾರ ತಿಳಿದು ಬಿಜೆಪಿ ಮುಖಂಡ ಗೋವಿಂದರಾಜು ಹಾಗೂ ಲೆಕ್ಕಿಗ ಸತೀಶ್ ಎಂಬಾತ ನಾಗರಾಜ್ ಬಳಿ ಬಂದು ಮಾತನಾಡಿದ್ದರು. ಆದರೆ ಅವರಿಬ್ಬರ ಮಾತುಕತೆ ಫಲಪ್ರದವಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ‌ನಾಗರಾಜ್ ಮೇಲೆ ಗೋವಿಂದರಾಜು ದ್ವೇಷವಿಟ್ಟುಕೊಂಡಿದ್ದ.

ಹತ್ಯೆ ನಡೆಸುವ ಮೊದಲು ಗೋವಿಂದರಾಜು ಹಾಗು ನಾಗರಾಜ್ ನಡುವೆ ಸಂಧಾನ ಪ್ರಕ್ರಿಯೆ ನಡೆದಿತ್ತು. ಆದರೆ ನಾಗರಾಜ್‌ ಯಾರ ಮಾತಿಗೂ ಜಗ್ಗದೆ ಅವರ ಮಾತಿಗೆ ಒಪ್ಪಲಿಲ್ಲ‌. ಆರ್‌ಟಿಐನಲ್ಲಿ ಮಾಹಿತಿ ತಿಳಿದರೆ ತಮ್ಮ ಬಂಡವಾಳ ಹೊರ ಬರುತ್ತದೆ ಎಂದು ಗೋವಿಂದರಾಜು ನಾಗರಾಜನನ್ನು ಮುಗಿಸುವ ಪ್ಲಾನ್ ಮಾಡಿದ್ದ. ಈ ಕೃತ್ಯಕ್ಕೆ ಚಂದ್ರಾಲೇಔಟ್ ರೌಡಿಶೀಟರ್ ಕೃಷ್ಣ ಸಾಥ್‌ ನೀಡಿದ್ದ.

ಕೃಷ್ಣನನ್ನು ಭೇಟಿ ಮಾಡಿದ ಗೋವಿಂದರಾಜು ಐದು ಲಕ್ಷ ರೂ. ಸುಪಾರಿ ನೀಡಿ ನಾಗರಾಜ್‌ನನ್ನು ಮುಗಿಸಲು ಹೇಳಿದ್ದ. ಆಫರ್‌ ಒಪ್ಪಿಕೊಂಡ ಕೃಷ್ಣ ತನ್ನ ರೌಡಿ ಪಟಾಲಂನ ಜತೆ ಸೇರಿ ನಾಗರಾಜನನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ನಾಲೈದು ದಿನ ನಾಗರಾಜ್ ಓಡಾಡುವ ಜಾಗ, ಯಾವ ಸಮಯಕ್ಕೆ ಎಲ್ಲೆಲ್ಲಿ ಇರುತ್ತಾರೆ ಎಂಬ ಮಾಹಿತಿ ಕಲೆ ಹಾಕಿದ್ದ.

ಇದನ್ನೂ ಓದಿ: Water Crisis : ಬೆಂಗಳೂರಿಗರೇ ಗಮನಿಸಿ.. ಬೋರೆವೆಲ್‌ ಕೊರೆಸಲು ಇನ್ಮುಂದೆ ಈ ನಿಯಮ ಕಡ್ಡಾಯ!

ಕಳೆದ ತಿಂಗಳು ನಾಗರಾಜ್‌ ಅವರು ತಮ್ಮ ಎಲೆಕ್ಟ್ರಿಕ್ ಗಾಡಿಯಲ್ಲಿ ಹೋಗುವಾಗ ಯಾರೋ ದೂರದಿಂದ ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಗಮಿಸಿದ್ದಾರೆ. ನಾಗರಾಜ್ ಕೆಂಗೇರಿ ರೈಲ್ವೆ ಅಂಡರ್ ಪಾಸ್ ಬಳಿ ಹೋಗವಾಗ ಬೈಕ್‌ನ ಹಿಂಬದಿ ಸವಾರ ಲಾಂಗ್‌ ತೆಗೆದು ಹಲ್ಲೆ ಮಾಡುತ್ತಾ ಅವಾಚ್ಯ ಶಬ್ಧಗಳಿಂದ ನಿಂಧಿಸುತ್ತಿದ್ದ. ಆರ್‌ಟಿಐ ಅರ್ಜಿ ಹಾಕುತ್ತೀಯಾ ಎಂದು ಬೆನ್ನಿಗೆ ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ. ಭಯಗೊಂಡ ನಾಗಾರಾಜ್ ಅಲ್ಲಿಂದ ಹೇಗೋ ಪರಾರಿ ಆಗಿ ಆಸ್ಪತ್ರೆಯ ಒಳ ನುಗ್ಗಿ ಬಚಾವಾಗಿದ್ದರು.

BJP leader gives supari for RTI activists murder

ಕೂದಲೆಳೆ ಅಂತರದಲ್ಲಿ ಆರ್‌ಟಿಐ ಕಾರ್ಯಕರ್ತ ನಾಗರಾಜ್ ಸಾವಿನ ದಾವಡೆಯಿಂದ ಪಾರಾಗಿದ್ದರು. ಕೊಲೆ ಯತ್ನ ನಡೆಸಿದ ಸಂಬಂಧ ನಾಗರಾಜ್‌ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ . ಬಿಜೆಪಿ ಮುಖಂಡ ಗೋವಿಂದ ರಾಜು , ಮನೀಷ್ ಮೋಹನ್ ಪೂಜಾರಿ‌, ಕೃಷ್ಣ , ವೇಣುಗೋಪಾಲ, ಸತೀಶ್ ಹಾಗು ಶಶಿಕುಮಾರ್ ರೆಡ್ಡಿ ಎಂಬವರನ್ನು ಕೆಂಗೇರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ ಸಂಬಂಧ ಇನ್ನಿಬ್ಬರು ಪರಾರಿಯಾಗಿದ್ದು, ಹುಡುಕಾಟ ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

ಅಕ್ಷಯ ತದಿಗೆಯಂದು ಏರಿದ್ದ ಚಿನ್ನದ ಬೆಲೆ (Gold Rate Today) ಬಳಿಕ ಇಳಿದಿತ್ತು. ಕಳೆದೆರಡು ದಿನಗಳಿಂದ ಮತ್ತೆ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ಇಂದು 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆ 700 ರೂ. ಏರಿದೆ.

VISTARANEWS.COM


on

gold rate today priyamani
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹70 ಹಾಗೂ ₹77 ಏರಿಕೆಯಾಗಿವೆ. ನಿನ್ನೆ ಕೂಡ ಚಿನ್ನದ ಬೆಲೆ ಗ್ರಾಂಗೆ 40 ರೂಪಾಯಿಗಳಷ್ಟು ಏರಿಕೆಯಾಗಿತ್ತು. ಅಕ್ಷಯ ತದಿಗೆಯಂದು ಭಾರೀ ಬೆಲೆ ಏರಿಕೆ ಆಗಿತ್ತು. ಬಳಿಕ ಇಳಿದು ಮತ್ತೆ ಏರುತ್ತಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,785ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,280 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,850 ಮತ್ತು ₹6,78,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,402 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,216 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,020 ಮತ್ತು ₹7,40,200 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹86.50, ಎಂಟು ಗ್ರಾಂ ₹692 ಮತ್ತು 10 ಗ್ರಾಂ ₹865ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,650 ಮತ್ತು 1 ಕಿಲೋಗ್ರಾಂಗೆ ₹86,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,00074,170
ಮುಂಬಯಿ67,850 74,020
ಬೆಂಗಳೂರು67,850 74,020
ಚೆನ್ನೈ67,95074,130

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Continue Reading

ಬೆಂಗಳೂರು

Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ

Murder case : ಚಿನ್ನದ ಸರಕ್ಕಾಗಿ ಮನೆ ಮಾಲಕಿಯನ್ನೇ ಕತ್ತು ಹಿಸುಕಿ ಕೊಂದಿದ್ದ ರೀಲ್ಸ್‌ ಸ್ಟಾರ್‌ ಮೋನಿಕಾ ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಬೇಕಂತ ಕೊಲೆ ಮಾಡಿಲ್ಲ ಸರ್..‌
ಪ್ರಿಯತಮನಿಗೆ ವಾಹನ ಖರೀದಿಸಿ ಕೊಡಲು ಚಿನ್ನದ ಸರವನ್ನು ಕದಿಯಲು ಹೋಗಿದ್ದೆ. ಆದರೆ ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾಳೆ.

VISTARANEWS.COM


on

By

Murder case in Bengaluru
ರೀಲ್ಸ್‌ ಸ್ಟಾರ್‌ ಮೋನಿಕಾ ಅರೆಸ್ಟ್‌
Koo

ಬೆಂಗಳೂರು: ಕೆಂಗೇರಿಯಲ್ಲಿ ಮನೆ ಓನರ್ ದಿವ್ಯಾಳನ್ನು ಕೊಂದ ಪ್ರಕರಣಕ್ಕೆ (Murder case) ಸಂಬಂಧಿಸಿದಂತೆ ಆರೋಪಿ ಮೋನಿಕಾಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರೀಲ್ಸ್ ಸ್ಟಾರ್ ಮೋನಿಕಾ ಬಿಕ್ಕಿ ಬಿಕ್ಕಿ ಅತ್ತಿದ್ದು, ಬೇಕಂತ ಕೊಲೆ ಮಾಡಿಲ್ಲ ಸರ್ ಎಂದಿದ್ದಾಳೆ.

ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ (Woman murder case) ಮಾಡಿದ್ದಳು. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ (kengeri murder, bangalore crime) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಎಂಬುವವರನ್ನು ಮೋನಿಕಾ (24) ಎಂಬಾಕೆ ಹತ್ಯೆ ಮಾಡಿದ್ದಳು.

ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ಮೋನಿಕಾ, ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ದಿವ್ಯಾ ಹಾಕಿದ್ದ ಚಿನ್ನದ ಸರವನ್ನು ಮಾತ್ರ ಕಸಿದುಕೊಳ್ಳಲು ಹೋಗಿದ್ದೆ ಎಂದಿದ್ದಾಳೆ.

ಕೊಲೆ ಮಾಡುವ ಮೊದಲು ಎರಡ್ಮೂರು ಬಾರಿ ದಿವ್ಯಾ ಮನೇಲಿ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಳು. ಆದರೆ ಮೋನಿಕಾ ಪ್ರಯತ್ನ ವಿಫಲವಾಗಿತ್ತು. ಮೋನಿಕಾ ಗ್ರೌಂಡ್ ಪ್ಲೋರ್‌ನಲ್ಲಿ ವಾಸವಿದ್ದಳು. ದಿವ್ಯಾಳ ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಯೊಳಗೆ ಗಮನಿಸುತ್ತಿದ್ದಳು.

Murder case in Bengaluru
ಕೊಲೆಯಾದ ದಿವ್ಯಾ ಹಾಗೂ ಆರೋಪಿ ಮೋನಿಕಾ

ದಿವ್ಯಾಳ ಪತಿ ಹಾಗೂ ಅತ್ತೆ-ಮಾವ ಎಲ್ಲರೂ ಕೆಲಸಕ್ಕೆ ಹೋದ ನಂತರ ಮೋನಿಕಾ ಮನೆಗೆ ಬರುತ್ತಿದ್ದಳು. ದಿವ್ಯಾಳನ್ನು ಅಕ್ಕ ಅಕ್ಕ ಅಂತಿದ್ದವಳು, ಮಗು ನಿದ್ರೆಗೆ ಜಾರಿದಾಗ ದಿವ್ಯಾಳ ಕತ್ತು ಹಿಸುಕಿ ಕೊಂದಿದ್ದಳು.

ಇದನ್ನೂ ಓದಿ: Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಪ್ರಿಯತಮನಿಗಾಗಿ ಮಾಡಿದ್ದಳು ಸಾಲ

ಮೋನಿಕಾ ವಿಚಾರಣೆ ವೇಳೆ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಪ್ರಿಯತಮನಿಗಾಗಿ ಮಾಡಿದ್ದ ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದಳು ಆದರೆ ಅದು ವಿಫಲವಾಗಿತ್ತು. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಮೋನಿಕಾ ಎರಡು ತಿಂಗಳು ಮನೆ ಬಾಡಿಗೆ ಕಟ್ಟಿರಲಿಲ್ಲ. ದಿವ್ಯಾ ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ಆ ಹೊಸ ಮನೆಗೆ ಬಾಡಿಗೆಗೆ ಮೋನಿಕಾ ಪಡೆದಿದ್ದಳು.

ಕೆಲಸ ಬಿಟ್ಟಿದ್ದರೂ ಪ್ರಿಯತಮ ಟಾಟಾ ಏಸ್ ವಾಹನ ಖರೀದಿಗೆ ಸಾಲ ಮಾಡಿ ಹಣ ಕೊಟ್ಟಿದ್ದಳು. ಆದರೆ ಸಾಲ ಕೊಟ್ಟವರು ಮೋನಿಕಾ ಹಿಂದೆ ಬಿದ್ದಿದ್ದರು. ಇತ್ತ ಸಾಲ ಪಡೆದ ಪ್ರಿಯತಮ ಕೂಡ ಹಣ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ದಿವ್ಯಾ ಸ್ನಾನಕ್ಕೆ ಹೋದಾಗ ಮಾಂಗಲ್ಯ ಸರ ಎಗರಿಸೋಣ ಎಂದು ಸ್ಕೆಚ್ ಹಾಕಿದ್ದಳು. ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಹೋಗಿ ಮಾಂಗಲ್ಯ ಸರವನ್ನು ಕಳವು ಮಾಡಲು ಯೋಜಿಸಿದ್ದಳು. ಆದರೆ ದಿವ್ಯಾ ಮೋನಿಕಾ ಮುಂದೆ ಮಾಂಗಲ್ಯ ಸರವನ್ನು ತೆಗೆದಿಡಲಿಲ್ಲ.

ಹೀಗಾಗಿ ಬೇರೆ ದಾರಿ ಕಾಣದೇ ದಿವ್ಯಾಳ ಕತ್ತು ಹಿಸುಕಿ 36 ಗ್ರಾಂ ಚಿನ್ನಾಭರಣದ ಜತೆ ಮೋನಿಕಾ ಎಸ್ಕೇಪ್ ಹಾಕಿದ್ದಳು. ಕದ್ದ ಸರವನ್ನು ಅಡವಿಟ್ಟು ಆರಾಮಾಗಿ ತನಗೇನು ಗೊತ್ತಿಲ್ಲದಂತೆ ವಾಪಸ್ ಬಂದಿದ್ದಳು. ಆದರೆ ಪೊಲೀಸರ ವಿಚಾರಣೆ ವೇಳೆ ನನ್ನ ಮನೆಯಲ್ಲೂ 60 ಸಾವಿರ ಕಳುವಾಗಿದೆ ಎಂದಿದ್ದಳು. ಇತ್ತ ದಿವ್ಯಾ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕೊಲೆ ಎನ್ನುವುದು ಸ್ಪಷ್ಟವಾಗಿತ್ತು.

ಘಟನೆ ದಿನ ಇಡೀ ಕಟ್ಟಡದಲ್ಲಿ ದಿವ್ಯಾ ಮತ್ತು ಅವರ ಮಗು ಹಾಗೂ ಮೋನಿಕಾ ಹೊರತಾಗಿ ಯಾರು ಇರಲಿಲ್ಲ. ಅಲ್ಲದೇ ಮೋನಿಕಾ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎನ್ನುವ ವಿಚಾರ ಗೊತ್ತಾಗಿತ್ತು. 60 ಸಾವಿರ ಹಣ ಮನೆಯಲ್ಲಿದರೆ ಎರಡು ತಿಂಗಳ ಬಾಡಿಗೆ ಯಾಕೆ ಕಟ್ಟಿಲ್ಲ ಎಂಬ ಸಂಶಯ ಪೊಲೀಸರಿಗೆ ಕಾಡಿತ್ತು.

ಮೃತಳ ಕತ್ತಿನಲ್ಲಿದ್ದ ಚಿನ್ನ ಕಳುವಾಗಿದ್ದರಿಂದ ಪೊಲೀಸರು ಹತ್ತಿರದ ಜ್ಯುವೆಲ್ಲರಿ ಶಾಪ್‌ನಲ್ಲಿ ವಿಚಾರಿಸಿದ್ದಳು. ಈ ವೇಳೆ ಮೋನಿಕಾ ದಿವ್ಯಾಳ ಮಾಂಗಲ್ಯಸರ ಅಡವಿಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಮೋನಿಕಾಳನ್ನು ವಶಕ್ಕೆ ಪಡೆದಾಗ ಕೊಲೆ ರಹಸ್ಯ ಹೊರಗೆ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Suspicious Case : ಬೆಂಗಳೂರಿನಲ್ಲಿ ಕಾಲೇಜು ಹುಡುಗಿಯೊಬ್ಬಳು ಅನುಮಾನಾಸ್ಪದ‌ವಾಗಿ ಮೃತಪಟ್ಟಿದ್ದಾಳೆ. ಮನೆಯ ಬಾತ್‌ ರೂಮಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Suspicious Case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ (Bengaluru News) ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಡುಗಿಯೊಬ್ಬಳು ಅನುಮಾನಾಸ್ಪದ‌ವಾಗಿ (Suspicious Case) ಮೃತಪಟ್ಟಿದ್ದಾಳೆ. ಪ್ರಭುಧ್ಯಾ(21) ಮೃತ ದುರ್ದೈವಿ.

ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುದ್ಯಾ, ಮನೆಯ ಮನೆಯ ಬಾತ್‌ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Suspicious Case in Bengaluru

ಬುಧವಾರ ಸಂಜೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಭುಧ್ಯಾಳ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ, ಕೊಲೆಯೋ ಹೀಗೆ ಎಲ್ಲ‌ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುಡಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ (Video Call) ಮಾಡಿ ಹೆದರಿಸಲು ಹೋದ ಜಿಮ್‌ ಟ್ರೈನರ್‌ (Gym Trainer), ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು (hanging) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಹೀಗೆ ಆತ್ಮಹತ್ಯೆ (Self Harming) ಮಾಡಿಕೊಂಡ ದುರ್ದೈವಿ.

ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆದ ಘಟನೆಯಿದು. ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು.

ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ್ದಳು. ನರ್ಸಿಂಗ್ ಸೇರಿದ ಬಳಿಕ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳ ಆಗುತ್ತಾ ಇತ್ತು. ಹೀಗಾಗಿ ಗಂಡನಿಂದ ದೂರವಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ಪದೇ ಪದೆ ಕಾಲ್ ಮಾಡಿದ್ದಾನೆ. ಬಳಿಕ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Self Harming: ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

Self Harming: ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

VISTARANEWS.COM


on

self harming gym trainer
Koo

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ (Video Call) ಮಾಡಿ ಹೆದರಿಸಲು ಹೋದ ಜಿಮ್‌ ಟ್ರೈನರ್‌ (Gym Trainer), ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು (hanging) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಹೀಗೆ ಆತ್ಮಹತ್ಯೆ (Self Harming) ಮಾಡಿಕೊಂಡ ದುರ್ದೈವಿ.

ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆದ ಘಟನೆಯಿದು. ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು.

ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ್ದಳು. ನರ್ಸಿಂಗ್ ಸೇರಿದ ಬಳಿಕ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳ ಆಗುತ್ತಾ ಇತ್ತು. ಹೀಗಾಗಿ ಗಂಡನಿಂದ ದೂರವಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ಪದೇ ಪದೆ ಕಾಲ್ ಮಾಡಿದ್ದಾನೆ. ಬಳಿಕ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಜಲಿ ಹಂತಕನಿಗೆ ಸ್ನೇಹಿತನೇ ಪ್ರೇರಣೆ? ಅವನೂ ಕೊಲೆ ಆರೋಪಿ!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಎಂಬಾಕೆಯನ್ನು ಇರಿದು ಬರ್ಬರವಾಗಿ ಕೊಲೆ (Anjali Murder Case) ಮಾಡಿದ ಹಂತಕ ಗಿರೀಶ್‌ನ‌ ಸ್ನೇಹಿತ ಕೂಡ ಕೊಲೆ ಆರೋಪಿ (Murder suspect) ಎಂಬುದು ಬಯಲಿಗೆ ಬಂದಿದೆ. ತನ್ನ ಸ್ನೇಹಿತನಿಂದಲೇ ಈತ ಪ್ರೇರಣೆ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಗಿರೀಶ್‌ನ ಸ್ನೇಹಿತ ಶಶಿ ಆರೆಸ್ಟ್ ಆಗಿದ್ದಾನೆ. ಶಶಿ ಮತ್ತು ಗಿರೀಶ್ ಇಬ್ಬರೂ ಸ್ನೇಹಿತರು.‌ ಎರಡು ದಿನಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಕೊಲೆ ನಡೆದಿದ್ದು, ಸದ್ದಾಂ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಶಿ ಜೈಲು ಪಾಲಾಗಿದ್ದಾನೆ.

ಶಶಿ ಈ ಕೊಲೆ ಮಾಡಿದ ಬಳಿಕ ಅದೇ ರೀತಿ ಅಂಜಲಿಯನ್ನು ಮುಗಿಸಲು ಗಿರೀಶ್‌ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತ ಮಾಡಿರುವ ಕೊಲೆಯಿಂದಲೇ ಪ್ರೇರಣೆ ಪಡೆದಿದ್ದ ಎಂದು ತರ್ಕಿಸಲಾಗಿದೆ. ಸ್ನೇಹಿತ ಕೊಲೆ ಮಾಡಿದ ಮೂರು ದಿನಗಳ ಬಳಿಕ ಗಿರೀಶನಿಂದ ಕೊಲೆ ಸಂಭವಿಸಿದೆ. ಇವರಿಬ್ಬರೂ‌ ಕೂಡಾ ಬೈಕ್ ಕಳ್ಳತನದ ಆರೋಪಿಗಳಾಗಿದ್ದಾರೆ.

ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಹುಬ್ಬಳ್ಳಿ: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ (Anjali Murder Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಕೊಲೆ ಪ್ರಕರಣಕ್ಕೂ ಮೊದಲೇ ಅಂಜಲಿ ಅಜ್ಜಿ, ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್‌ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಮಾನತು ಮಾಡಿದ್ದಾರೆ.

ಏನಿದು ಘಟನೆ?

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ಬುಧವಾರ ಮುಂಜಾನೆ ನಡೆದಿತ್ತು. ನಗರದ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಾಗ ಮನೆಗೇ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಯುವತಿ ಅಂಜಲಿ ಅಂಬಿಗೇರಗೆ (20) ಇರಿದು ಕೊಂದಿದ್ದ.

Anjali Murder Case

ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್‌ ಈ ಕೃತ್ಯ ಎಸಗಿದ್ದ. ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಯುವತಿ ನೇಹಾ ಹಿರೇಮಠ ಅವರನ್ನು ಪಾಗಲ್‌ ಪ್ರೇಮಿ ಫಯಾಜ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿಯೇ ಕಳೆದ ತಿಂಗಳು ಕೊಚ್ಚಿ ಕೊಲೆ ಮಾಡಿದ್ದ. ಇದು ಲವ್‌ ಜಿಹಾದ್‌ ಪ್ರಕರಣ ಎಂದು ರಾಜಾದ್ಯಂತ ತೀವ್ರ ಪ್ರತಿಭಟನೆ, ರಾಜಕೀಯ ಕೆಸರೆರಚಾಟಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ | B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

Continue Reading
Advertisement
gold rate today priyamani
ಚಿನ್ನದ ದರ7 mins ago

Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

Swati maliwal
ದೇಶ12 mins ago

Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

Murder case in Bengaluru
ಬೆಂಗಳೂರು14 mins ago

Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ

Cannes 2024 Urvashi Rautela pink gown remind Deepika Padukone
ಬಾಲಿವುಡ್26 mins ago

Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

Sanju Samson
ಕ್ರೀಡೆ35 mins ago

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Suspicious Case
ಬೆಂಗಳೂರು1 hour ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Star Suvarna HuAnthiya UhuuAnthiya new celebrity game show
ಕಿರುತೆರೆ1 hour ago

Star Suvarna: ಕಿರುತೆರೆಗೆ ಬರ್ತಿದೆ ಹೊಸ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’: ಪ್ರಸಾರ ಯಾವಾಗ?

Hepatitis-A
ದೇಶ1 hour ago

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Anita Goyal
ದೇಶ1 hour ago

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

hunsur road accident
ಕ್ರೈಂ1 hour ago

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌