Site icon Vistara News

Karnataka Election 2023: ಸಿ.ಟಿ. ರವಿ ಗೆಲ್ಲೋದು ನೂರು ಪರ್ಸೆಂಟ್‌ ಪಕ್ಕಾ ಎಂದಿದ್ದ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷನ ವಜಾ

District Congress Kisan Cell District President Sacked For Saying Ct Ravi Victory Is 100 percent Sure Karnataka Election 2023 updates

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ (Karnataka Election 2023) ಎಸ್‌ಡಿಪಿಐ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುವ ಬಗ್ಗೆ ದೂರವಾಣಿಯಲ್ಲಿ ಮಾತನಾಡುವಾಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಗೆಲ್ಲುತ್ತಾರೆ ಎಂಬ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ರಸೂಲ್ ಖಾನ್ ಅವರ ಹೇಳಿಕೆಯು ವೈರಲ್‌ ಆಗಿದೆ. ಈ ನಡುವೆ ಇದು ಪಕ್ಷಕ್ಕೆ ಮುಜುಗರವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆದೇಶಿಸಲಾಗಿದೆ.

ರಸೂಲ್ ಖಾನ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಹೀಗಾಗಿ ವಿಡಿಯೊ ವೈರಲ್‌ ಬೆನ್ನಲ್ಲೇ ರಸೂಲ್ ಖಾನ್ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಲ್ಲದೆ, ಕಾಂಗ್ರೆಸ್‌ ಪಕ್ಷದಿಂದ ಅಮಾನತು ಮಾಡಿ ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಆದೇಶ ಹೊರಡಿಸಿದ್ದಾರೆ.

ಸಿ.ಟಿ. ರವಿ ಗೆಲ್ಲುತ್ತಾರೆ ಎಂದಿದ್ದ ರಸೂಲ್

‌ಎಸ್‌ಡಿಪಿಐ ನಗರಸಭಾ ಸದಸ್ಯ ದಂಟರಮುಖಿ ಶ್ರೀನಿವಾಸ್ ಎಂಬುವವರ ಜತೆಗೆ ರಸೂಲ್ ಖಾನ್ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಚುನಾವಣೆಯ ಬಗ್ಗೆ ಮಾತುಕತೆ ನಡೆದಿದೆ. ಆಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಸ್ಪರ್ಧೆಗೆ ಕಣಕ್ಕಿಳಿಸುವಂತೆ ಮಾತುಕತೆಯಾಗಿದೆ. ಆಗ ಎಸ್‌ಡಿಪಿಐ ಕ್ಯಾಂಡಿಡೇಟ್‌ ಅನ್ನು ಹಾಕಿದರೆ ಸಿ.ಟಿ. ರವಿ ಗೆಲ್ಲುತ್ತಾರೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ, ಬಿಜೆಪಿಗೆ ಸಹಾಯ ಆಗಬಾರದು ಅಂತ ಎಸ್‌ಡಿಪಿಐ ಈ ಬಾರಿ ಸ್ಪರ್ಧಿಸಲ್ಲ ಎಂದು ಶ್ರೀನಿವಾಸ್‌ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಸೂಲ್‌ ಖಾನ್‌, “ಹೌದು 100% ಸಿ.ಟಿ. ರವಿ ಗೆಲ್ಲುತ್ತಾರೆ. ಆದರೆ, ನೀವು ನಿಮ್ಮ ಕ್ಯಾಂಡಿಡೇಟ್‌ ಅನ್ನು ಹಾಕುವಂತೆ ಹಾಕಿ, ನಿಮ್ಮ ಶಕ್ತಿ ಏನೆಂಬುದು ಎಲ್ಲರಿಗೂ ತಿಳಿಯಲಿ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: 12ನೇ ಪತ್ನಿಯನ್ನು ಹೊಡೆದು ಕೊಂದ ಕುಡುಕ; ಮಕ್ಕಳು ಬರುವವರೆಗೂ ರಕ್ತದ ಮಡುವಲ್ಲಿ ಬಿದ್ದು ನರಳುತ್ತಿದ್ದ ಮಹಿಳೆ

ಈ ಆಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ಸಖತ್‌ ವೈರಲ್‌ ಆಗಿದೆ. ಇದೇ ವೇಳೆ ಚಿಕ್ಕಮಗಳೂರಿನ ಕೆಲವು ಕಾಂಗ್ರೆಸ್‌ ನಾಯಕರು ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಇದು ಕಾಂಗ್ರೆಸ್‌ ಅನ್ನು ಸ್ವಲ್ಪ ಮುಜುಗರಕ್ಕೂ ಸಿಲುಕಿಸಿತ್ತು.

Exit mobile version