Site icon Vistara News

ಪರಿಸರವಾದಿಗಳಿಂದ ಅಭಿವೃದ್ಧಿಗೆ ತೊಂದರೆ: ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಆರೋಪ

SR Vishwanath session

ವಿಧಾನಸಭೆ: ಪರಿಸರವಾದಿಗಳು ಎಂದುಕೊಂಡವರಿಂದ ಅನೇಕ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಆಗುತ್ತಿದೆ ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ತೋಟಗಾರಿಕಾ ಸಚಿವ ಮುನಿರತ್ನ ಅವರಿಗೆ ಕೇಳಲಾದ ಪ್ರಶ್ನೆಯ ಸಂದರ್ಭದಲ್ಲಿ ವಿಶ್ವನಾಥ್‌ ಮಾತನಾಡಿದರು.

ಜಾರಕಬಂಡೆ ಪ್ರದೇಶವನ್ನು ಕಬ್ಬನ್‌ ಪಾರ್ಕ್‌ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಶಿವರಾಮ ಕಾರಂತ ಬಡವಾಣೆಯೂ ಸಮೀಪದಲ್ಲಿರುವುದರಿಂದ ಅನೇಕ ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಬೇಗನೆ ಯೋಜನೆ ಪೂರ್ಣಗೊಳಿಸಬೇಕು ಎಂದು ಸಚಿವರನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಆಗಸ್ಟ್‌ 15ಕ್ಕೇ ಈ ಕಾರ್ಯಕ್ಕೆ ಗುದ್ದಲಿಪೂಜೆ ಮಾಡಬೇಕು ಎಂದುಕೊಂಡಿದ್ದೆವು. ಅಟಲ್‌ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿರುವ ಈ ಉದ್ಯಾನವನ್ನು ಪೂರ್ಣಗೊಳಿಸುತ್ತೇವೆ. ಇದಕ್ಕೆ ಅರಣ್ಯ ಸಮಸ್ಯೆ ಸೇರಿ ಅನೇಕ ತೊಂದರೆಗಳಿದ್ದು, ಶಾಸಕರು ಇದಕ್ಕೆ ಸಹಕಾರ ನೀಡಬೇಕು ಎಂದರು.

ಇದನ್ನೂ ಓದಿ | ಹೆಸರಘಟ್ಟ ಹುಲ್ಲುಗಾವಲು | ಸ್ವಪಕ್ಷದಲ್ಲೇ ಭಿನ್ನಮತ: ಇಂದು ಸಂಜೆ ಸಿಎಂ ಅಧ್ಯಕ್ಷತೆಯ ಮಹತ್ವದ ಸಭೆ

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ನಮ್ಮ ಸಹಕಾರ ಇದ್ದೇ ಇರುತ್ತದೆ. ಆದರೆ ಈ ಕೆಲವರು ಪರಿಸರವಾದಿಗಳು ಎಂದುಕೊಂಡವರಿಂದ ಸುಮ್ಮನೆ ಆಕ್ಷೇಪಣೆ ಮಾಡುತ್ತಾರೆ ಎಂದು ಸಚಿವರು ಹಿಂದೇಟು ಹಾಕುತ್ತಾರೆ. ಮುನ್ನೂರು ರೀತಿಯ ಇರುವೆಗಳೀವೆ, ಆರುನೂರು ರೀತಿಯ ಚಿಟ್ಟೆಗಳಿವೆ ಎಂದು ಯಾರು ಎಣಿಸಿದರೋ ಗೊತ್ತಿಲ್ಲ.

ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಇವರಿಂದ ಸಮಸ್ಯೆ ಆಗುತ್ತಿದೆ. ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಪರಿಸರ ಉಳಿಸುವುದು ನಮಗೂ ಗೊತ್ತಿದೆ. ಒಂದೆರಡು ತಿಂಗಳಲ್ಲಿ ಗುದ್ದಲಿ ಪೂಜೆ ಮಾಡಿದರೆ ಎಲ್ಲ ಸಹಕಾರವನ್ನೂ ನೀಡುತ್ತೇವೆ.

ಇದನ್ನೂ ಓದಿ | Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ

Exit mobile version