Site icon Vistara News

Congress protest | ರಾಜಭವನಕ್ಕೆ ತೆರಳುವಾಗ ಅರ್ಧದಲ್ಲೇ ಕೈ ಮುಖಂಡರನ್ನು ವಶಕ್ಕೆ ಪಡೆದ ಖಾಕಿ ಪಡೆ

congrees protest

ಬೆಂಗಳೂರು: ನಗರದ ಕ್ವೀನ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಿಂದ ರಾಜಭವನಕ್ಕೆ ರ‍್ಯಾಲಿ ಹೊರಟ ವೇಳೆ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ಇಂಡಿಯನ್ ಎಕ್ಸ್‌ಪ್ರೆಸ್‌ ಸಿಗ್ನಲ್ ಬಳಿಯೇ ವಶಕ್ಕೆ ಪಡೆದುಕೊಂಡರು.

ಇದನ್ನೂ ಓದಿ | ರಾಜಭವನ ಚಲೋಗೆ ಕಾಂಗ್ರೆಸ್‌ ರೆಡಿ, ತಡೆಯಲು ಪೊಲೀಸ್‌ ತಂಡಗಳೂ ಸಿದ್ಧ

ವಿಸ್ತಾರ-ಇಂಡಿಯನ್ ಎಕ್ಸ್‌ಪ್ರೆಸ್‌ ಸಿಗ್ನಲ್ ಬಳಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪ್ರತಿಭಟನಾಕಾರರು ಬರುತ್ತಿದ್ದಂತೆ ಪೊಲೀಸರು ತಡೆದ ಕಾರಣ, ಹೋರಾಟವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. 4 ಬಿಎಂಟಿಸಿ ಬಸ್‌ಗಳನ್ನು ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಕೆಲ ಕಾರ್ಯಕರ್ತರನ್ನು ಸಿ.ಎ.ಆರ್ ಗ್ರೌಂಡ್‌ನತ್ತ ಕರೆದುಕೊಂಡು ಹೋದರು.

ಇತ್ತ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ಸಿದ್ದರಾಮಯ್ಯ ಮುಂದಾದರು. ಆಗ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡದಂತೆ ಡಿಸಿಪಿ ಭೀಮಾಶಂಕರ್ ಗುಳೇದ್‌ ಮನವಿ ಮಾಡಿದರು. ಮನವಿಗೆ ಸ್ಪಂದಿಸದೆ ಇದ್ದಾಗ ಸಿದ್ದರಾಮಯ್ಯ ಅವರನ್ನು ವಶಕ್ಕೆ ಪಡೆಯಲು ಪೊಲೀಸ್ ಪಡೆ ಮುಂದಾಯಿತು.‌ ಇತರೆ ಯಾವುದೇ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಾಳೆಕುಂದ್ರಿ ಸರ್ಕಲ್‌ನಿಂದ ಮುಂದೆ ಹೋಗಲು ಬಿಡದಂತೆ ಬ್ಯಾರಿಕೇಡ್ ಅಡ್ಡಲಾಗಿ ಹಾಕಲಾಯಿತು.

ಇದಕ್ಕೂ ಮೊದಲು ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಸಿದ್ದರಾಮಯ್ಯ ʼʼಬ್ರಿಟಿಷರ ಅವಧಿಯಲ್ಲು ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಂಡಿರಲಿಲ್ಲ. ಆದರೆ ಬಿಜೆಪಿ ಸರಕಾರ ಇದೀಗ ಇಂತಹ ದಮನಕಾರಿ ನೀತಿ ಅನುಸರಿಸುತ್ತಿದೆʼʼ ಎಂದು  ಕಿಡಿಕಾರಿದರು.

ಇದನ್ನೂ ಓದಿ | ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ

Exit mobile version