Site icon Vistara News

ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ವಿರುದ್ದ ಎಫ್‌ಐಆರ್‌

ಪದವೀಧರರ ಚುನಾವಣೆ

ಚಾಮರಾಜನಗರ: ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯು ಸೋಮವಾರ (ಜೂನ್‌ 13) ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದ ಬಿಜೆಪಿ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ವಿರುದ್ದ ಎಫ್‌ ಐಆರ್‌ ದಾಖಲು ಮಾಡಲಾಗಿದೆ.

ಪಕ್ಷದ ಚಿಹ್ನೆಯೊಟ್ಟಿಗೆ ಮತದಾರ ಪಟ್ಟಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ ಸಂಬಂಧ ಇಬ್ಬರು ಅಭ್ಯರ್ಥಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೈ.ವಿ.ರವಿಶಂಕರ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಕೆ.ರಾಮು ವಿರುದ್ಧ ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಭೀಮಸೇನ್ ಗುಡೂರ್  ದೂರು ನೀಡಿದ್ದಾರೆ.

ಇದನ್ನೂ ಓದಿ | MLC election | ದಕ್ಷಿಣ ಪದವೀಧರರ ಕ್ಷೇತ್ರ ಪ್ರತಿಷ್ಠೆಯ ಕಣ, ಎಲ್ಲ ಪಕ್ಷಗಳದ್ದೂ ಅಸ್ಪಷ್ಟ ಚಿತ್ರಣ

ಸದ್ಯ ಪಟ್ಟಣ ಠಾಣೆ ಪೊಲೀಸರು 171(ಸಿ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೀಡಿಯಾ ಸರ್ಟಿಫಿಕೇಷನ್ ಮಾನಿಟಿರಿಂಗ್ ಕಮಿಟಿಯಿಂದ ಅನುಮತಿ ಪಡೆಯದೇ ಮತದಾರ ಪಟ್ಟಿ ಅಪ್ಲೋಡ್  ಮಾಡಿರುವುದು ಹಾಗೂ ಜಾಹೀರಾತು ನೀಡಿದ್ದರಿಂದ ಪ್ರಕರಣ ದಾಖಲು ಆಗಿದೆ..

4 ಕ್ಷೇತ್ರಗಳಿಗೆ ನಾಳೆ ಮತದಾನ- ಚುನಾವಣಾ ಕಣದಲ್ಲಿ 49 ಅಭ್ಯರ್ಥಿಗಳು

ವಿಧಾನ ಪರಿಷತ್‌ ನ 4 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಬರೋಬ್ಬರಿ 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿನ್ನೆ ಶನಿವಾರ ಬಹಿರಂದ ಪ್ರಚಾರಕ್ಕೆ ತೆರೆಬಿದ್ದಿದ್ದು, ನಾಳೆ ಮತದಾನ ನಡೆಯಲಿದೆ. ದಕ್ಷಿಣ ಪದವೀಧರರ ಚುನಾವಣೆಯ ಮತದಾನದ ಅವಧಿ ಒಂದು ಗಂಟೆಗಳ ವಿಸ್ತರಣೆ ಮಾಡಲಾಗಿದ್ದು, ಬೆಳಗ್ಗೆ 8 ರಿಂದ ಸಂಜೆ 5ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್‌ 15ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಫಲಿತಾಂಶ ಪ್ರಕಟಗೊಳ್ಳಲಿದೆ.  

ಇದನ್ನೂ ಓದಿ | ಜೂನ್‌ 13ಕ್ಕೆ ಶಿಕ್ಷಕರು, ಪದವೀಧರ ಕ್ಷೇತ್ರದ ಚುನಾವಣೆ: ಅರ್ಹ ಮತದಾರರಿಗೆ ಗುಡ್‌ ನ್ಯೂಸ್‌

Exit mobile version