ಮಂಗಳೂರು: ಮಂಗಳೂರು ಹೊರವಲಯದ ಬೆಂಗ್ರೆ ನದಿ ತೀರದಲ್ಲಿ ಲಂಗರು ಹಾಕಿದ್ದ ಮೂರಕ್ಕೂ ಅಧಿಕ ಸರಕು ಸಾಗಾಟದ ಬೋಟ್‌ಗಳು ಬೆಂಕಿಗೆ ಆಹುತಿಯಾಗಿವೆ.
ಇವು ಲಕ್ಷದ್ವೀಪಕ್ಕೆ ಸರಕು ಸಾಗಾಟ ಮಾಡುವ ಬೋಟ್‌ಗಳಾಗಿದ್ದು, ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ರಿಪೇರಿಗೆ ನಿಲ್ಲಿಸಿದ್ದ ಇವುಗಳಿಗೆ ಬೆಂಕಿ ಬಿದ್ದಿದೆ. ಒಂದು ಬೋಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹಬ್ಬಿದ ಬೆಂಕಿ ಬೇರೆ ಬೋಟ್‌ಗಳಿಗೆ ಹಬ್ಬಿದೆ.
ಬೆಂಕಿಯ ಕೆನ್ನಾಲಿಗೆಗಳು ಆಕಾಶದೆತ್ತರಕ್ಕೆ ಹಬ್ಬಿದ್ದು, ಜನರು ಆತಂಕಕ್ಕೊಳಗಾದರು. ಅಗ್ನಿಶಾಮಕ ದಳದವರು ಕೂಡಲೇ ಧಾವಿಸಿದರೂ ಬಹುತೇಕ ಬೋಟ್ ಸುಟ್ಟುಹೋಗಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ