ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ವೈರಸ್ ಬಿಟ್ಟು ಬಿಡದೇ ಕಾಡುತ್ತಿದೆ. ಸೋಂಕು ಇನ್ನೇನು ಕ್ಷಿಣಿಸುತ್ತಿದೆ ಎನ್ನುವಾಗಲೇ ಇದೀಗ ಮತ್ತೆ ಸದ್ದು ಮಾಡುತ್ತಿದೆ. ನಾಲ್ಕನೇ ಅಲೆ ಜೂನ್‌ನಲ್ಲಿ ಹೆಚ್ಚಳವಾಗುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದರು. ಇದೀಗ ಸೋಂಕು ಜೂನ್ ಮೊದಲ ವಾರದಿಂದ ನಿಧಾನಗತಿಯಲ್ಲಿ ಏರಿಕೆ ಆಗ್ತಿದೆ. ಸದ್ಯ ಪಾಸಿಟಿವ್ ರೇಟು ಶೇ. 2.15% ನಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ತಾಂತ್ರಿಕ ಸಲಹಾ ಸಮಿತಿ ಜತೆ ಆರೋಗ್ಯ ಸಚಿವ ಸುಧಾಕರ್ ಸಭೆ ಕರೆದಿದ್ದಾರೆ.
ಇದನ್ನೂ ಓದಿ | ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ʼಸ್ಫೋಟಕʼ ಏರಿಕೆ, ಲಾಕ್‌ಡೌನ್
ಆರೋಗ್ಯಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದು, ಮುಂಜಾಗ್ರತಾ ಕ್ರಮಗಳ ಕುರಿತಂತೆ ಚರ್ಚಿಸಲಿದ್ದಾರೆ. ಪ್ರಮುಖವಾಗಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿರುವ ವೇರಿಯಂಟ್ ತೀವ್ರತೆ ಹೇಗಿದೆ? ಹೋಂ ಐಸೋಲೇಷನ್‌ನಲ್ಲೇ ಸೋಂಕಿತರು ಗುಣಮುಖರಾಗ್ತಿದ್ದರಾ? ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆಯೇ ಎಂಬುದರ ಕುರಿತು ಚರ್ಚಿಸಲಿದ್ದಾರೆ..
ಯಾವ್ಯಾವ ರೂಪಾಂತರಿ ಎಷ್ಟು ಆಕ್ವಿವ್?
ಆಲ್ಪಾ: ೦೦%
ಬೀಟಾ: ೦೦%
ಡೆಲ್ಟಾ ಮತ್ತು ಸಬ್ಲೈನ್ಸ್: 7.7%
ಈಟಾ, ಕಪ್ಪಾ,ಪಂಗೋ: 1.9%
ಓಮಿಕ್ರಾನ್: 90.4%
a.BA.1.1.529: 14.3%
b.BA1: 1.4%
c. BA2: 84.3%
ಆಕ್ಟಿವ್ ಕೇಸ್ ಎಷ್ಟು?
ರಾಜ್ಯದಲ್ಲಿ ಈ ತನಕ 6,66,043,48 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ 39,56,334 ಸೋಂಕು ಖಚಿತ ಪಟ್ಟಿದ್ದು, 39,12,575 ಜನರು ಗುಣಮುಖರಾಗಿದ್ದಾರೆ. 40,066 ಸೋಂಕಿತರು ಮೃತಪಟ್ಟಿದ್ದು, ಸದ್ಯ ಸಕ್ರಿಯ ಪ್ರಕರಣಗಳು 3,651ರಷ್ಟಿದೆ. ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ 429 ಮಂದಿಗೆ ಸೋಂಕು ದೃಢಪಟ್ಟಿದ್ದು, ಸದ್ಯ ಸಕ್ರಿಯ ಪ್ರಕರಣಗಳು 3,496ರಷ್ಟಿದೆ.
ಇದನ್ನೂ ಓದಿ | ಕೋವಿಡ್ ಲಸಿಕೆಯಿಂದ ಯುವಜನರಲ್ಲಿ ಹೃದಯ ರೋಗ ಹೆಚ್ಚಾಗಿದ್ದು ನಿಜವೇ?