Site icon Vistara News

ರಾಮನಗರದಲ್ಲಿ ಮನೆಯಿಂದ ಬಾಲಕಿ ಹೊತ್ತೊಯ್ದು ಅತ್ಯಾಚಾರ, ಆರೋಪಿ ಪರಾರಿ

ಅತ್ಯಾಚಾರ

ರಾಮನಗರ: ಇಲ್ಲಿನ ಕನಕಪುರ ತಾಲೂಕಿನ ಮರಳವಾಡಿ ಗುಂಡನಗೊಲ್ಲಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ನಡೆದಿದೆ. ಇದೇ ಗ್ರಾಮದ ಕಿರಣ್ (24) ಎಂಬಾತ ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಜುಲೈ 7 ಸಂಜೆ ಸಮಯದಲ್ಲಿ ಈ ಘಟನೆ ನಡೆಡಿದ್ದು, ಕೆಲಸ ಮುಗಿಸಿ ಮನೆಗೆ ಬಂದ ಸುಶ್ಮಿತಾ ಪೋಷಕರು ಮಗಳು ಕಾಣದ ಕಾರಣ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಹಿಂದಿನ ಹೊಲದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಇತ್ತ ಬಾಲಕಿ‌ ಪೋಷಕರನ್ನು ನೋಡಿ ಆರೋಪಿ ಕಿರಣ್‌ ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿದ್ದ ಹಾರೋಹಳ್ಳಿ ಪೊಲೀಸರು ಪ್ರಕರಣ ನಡೆದ ಮರುದಿನವಾದ ಶುಕ್ರವಾರ (ಜು.೮ರಂದು) ಆರೋಪಿ‌ ಕಿರಣ್‌ನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ವರ್ಷದ ಹಿಂದೆ ಮದುವೆಯಾಗಿದ್ದ ಧೂರ್ತನೇ ರೂವಾರಿ  

Exit mobile version