Site icon Vistara News

H3N2 in India: ಇಂದು ಮುನ್ನೆಚ್ಚರಿಕೆ ಸಭೆ; ಈ ಶೀತಜ್ವರದ ಲಕ್ಷಣಗಳೇನು? ತಡೆಯುವುದು ಹೇಗೆ?

H3N2 virus

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಹಲವಾರು H3N2 ಇನ್‌ಫ್ಲುಯೆಂಜಾ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆ ಆರೋಗ್ಯ ತಜ್ಞರ ಸಭೆ ಕರೆದಿದೆ.

ರಾಜ್ಯದಲ್ಲಿ ಇನ್ನೂ H3N2 ಪತ್ತೆಯಾಗಿಲ್ಲವಾದರೂ, ಸೋಂಕು ಬರುವ ಮೊದಲೇ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಸಭೆ ನಡೆಯಲಿದೆ. ತಜ್ಞರ ಜೊತೆ ಸಭೆ ಬಳಿಕ ಮಾರ್ಗಸೂಚಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

H3N2 ಎಂಬುದು ಶೀತಜ್ವರದ ಹೊಸ ರೂಪಾಂತರಿಯಾಗಿದೆ. ಕಳೆದ ಕೆಲವು ತಿಂಗಳಿನಿಂದ ಭಾರತದಲ್ಲಿ ಇದರ ಸಾವಿರಾರು ಪ್ರಕರಣಗಳು ಕಂಡುಬಂದಿವೆ. ಮೂರು- ಐದು ದಿನಗಳು ಜ್ವರ ಹಾಗೂ ಮೂರು ವಾರಗಳವರೆಗೆ ನಿರಂತರ ಕೆಮ್ಮು ಇದರ ಪ್ರಧಾನ ಲಕ್ಷಣಗಳಾಗಿವೆ. ಇತರ ಯಾವುದೇ ಶೀತಜ್ವರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇದು ಆಸ್ಪತ್ರೆವಾಸಕ್ಕೆ ಕಾರಣವಾಗುತ್ತಿದೆ. ಶೇ.92 ಮಂದಿ ಜ್ವರ, ಶೇ.86 ಮಂದಿ ಕೆಮ್ಮು, ಶೇ.27 ಮಂದಿ ಉಸಿರಾಟದ ತೊಂದರೆ, ಶೇ.16 ಮಂದಿ ಏದುಸಿರು, ಶೇ.16 ಮಂದಿ ನ್ಯುಮೋನಿಯಾ ಹಾಗೂ ಶೇ.6 ಮಂದಿ ನಡುಕ ಅನುಭವಿಸುತ್ತಾರೆ. ಶೇ.10ರಷ್ಟು ಮಂದಿ ಗಂಭೀರ ಉಸಿರಾಟದ ಸಮಸ್ಯೆ ಅನುಭವಿಸಿ ಆಕ್ಸಿಜನ್‌ ಪಡೆದಿದ್ದಾರೆ ಹಾಗೂ ಶೇ.7 ಮಂದಿಗೆ ಐಸಿಯು ಆರೈಕೆ ಬೇಕಾಗಿದೆ ಎಂದು ಭಾರತೀಯ ಮೆಡಿಕಲ್‌ ರಿಸರ್ಚ್‌ ಸಂಸ್ಥೆ (ICMR) ತಿಳಿಸಿದೆ.

ಇದನ್ನೂ ಓದಿ: H3N2 Influenza: ಕೋವಿಡ್‌ ಬಳಿಕ H3N2 ವೈರಸ್‌ ಭೀತಿ; ICMRನಿಂದ ಹೈ ಅಲರ್ಟ್‌ ಘೋಷಣೆ

H3N2 ಲಕ್ಷಣಗಳು

  1. ದೀರ್ಘ ಕಾಲದ ಕೆಮ್ಮು
  2. ವಾಕರಿಕೆ
  3. ವಾಂತಿ
  4. ಗಂಟಲು ನೋವು
  5. ಸ್ನಾಯು ಸೆಳೆತ
  6. ನಡುಕ
  7. ಭೇದಿ
  8. ಮೂಗು ಸೋರುವಿಕೆ, ಸೀನು

ಸುರಕ್ಷತೆ ಹೇಗಿರಬೇಕು?

ಇದನ್ನೂ ಓದಿ: ವಿಸ್ತಾರ TOP 10 NEWS: ಕೊರೊನಾ ಕೇಸ್‌ ಹೆಚ್ಚಳದ ಆತಂಕದಿಂದ, ನೆಟ್ಟಾರು ಹತ್ಯೆ ಕೇಸ್‌ ಆರೋಪಿ ಬಂಧನದವರೆಗಿನ ಪ್ರಮುಖ ಸುದ್ದಿಗಳಿವು

Exit mobile version