Site icon Vistara News

Firing | ಮೀನು ಹಿಡಿಯಲು ಹೋದವನು ಅಪರಿಚಿತರ ಗುಂಡಿನ ದಾಳಿಗೆ ಬಲಿ, ದುಷ್ಕೃತ್ಯ ಶಂಕೆ

navin firing

ಹಾಸನ: ಹಾಸನದಲ್ಲಿ ಒಂದು ತಿಂಗಳ ಅಂತರದಲ್ಲಿ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಸಂಜೆ ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೀನು ಹಿಡಿಯಲು ತೆರಳಿದ್ದ ನಾಲ್ವರತ್ತ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ನವೀನ್(39) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನವೀನ್‌ ಜೊತೆ ಮೀನು ಹಿಡಿಯಲು ದಯಾನಂದ, ಪದ್ಮನಾಭ್, ರಾಜಾಚಾರಿ ಎಂಬವರು ತೆರಳಿದ್ದರು. ದಯಾನಂದ್, ಪದ್ಮನಾಭಗೆ ಗಂಭೀರ ಗಾಯವಾಗಿದೆ.

ಸಾವಿಗೀಡಾದ ನವೀನ್‌ ಬಿಜೆಪಿ ಮತ್ತು ಸಂಘಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದುದರಿಂದ, ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದು ಬೇಟೆಗೆ ತೆರಳಿದ್ದವರು ಸಿಡಿಸಿದ ಗುಂಡಿನ ದಾಳಿಯೋ ಅಥವಾ ಹತ್ಯೆ ಮಾಡಲೆಂದು ನಡೆಸಿದ ಗುಂಡಿನ ದಾಳಿಯೊ ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ವಿಧಿ ವಿಜ್ಞಾನ ಪ್ರಯೋಗಲಯದ ತಜ್ಞರಿಂದ ಪರಿಶೀಲನೆಗಾಗಿ ತಯಾರಿ ನಡೆಯುತ್ತಿದೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Elephant Calf : ಹಾಸನ ಕಾಫಿ ತೋಟದೊಳಗೆ ಮರಿ ಹಾಕಿದ ಕಾಡಾನೆ; ಹತ್ತಿರ ಹೋಗದಂತೆ ಅರಣ್ಯಾಧಿಕಾರಿಗಳ ಸೂಚನೆ

Exit mobile version