Site icon Vistara News

ED Raid: ಇ.ಡಿ ಭರ್ಜರಿ ಬೇಟೆ; ವಂಚನೆ ಕೇಸ್‌ನಲ್ಲಿ ಇಬ್ಬರು ಉದ್ಯಮಿಗಳಿಗೆ ಸೇರಿದ 40 ಕೋಟಿ ರೂ. ಆಸ್ತಿ ಜಪ್ತಿ

Sanjay Ghodawat

Hawala Case: ED Attaches Rs 40 Crore Assets Of Two Businessmen

ಹುಬ್ಬಳ್ಳಿ: ಸ್ಟಾರ್‌ ಏರ್‌ಲೈನ್ಸ್‌ ಮಾಲೀಕ ಸಂಜಯ್‌ ಘೋಡಾವತ್‌ ಅವರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED Raid) ಅಧಿಕಾರಿಗಳು ಇಬ್ಬರು ಉದ್ಯಮಿಗಳಿಗೆ ಸೇರಿದ 40.22 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಉದ್ಯಮಿಗಳಾದ ಶೀತಲ್‌ ಕುಮಾರ್‌ ಹಾಗೂ ಜಿನೇಂದ್ರ ಮಗ್ದುಮ್‌ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಸಂಜಯ್‌ ಘೋಡಾವತ್‌ ಅವರೊಂದಿಗೆ ಸ್ನೇಹ ಬೆಳೆಸಿದ್ದ ಆರೋಪಿಗಳು ರಿಯಲ್‌ ಎಸ್ಟೇಟ್‌ ಉದ್ಯಮದ ಹೆಸರಿನಲ್ಲಿ ವಂಚನೆ ಮಾಡಿದ್ದರು. 525 ಕೋಟಿ ರೂಪಾಯಿಯನ್ನು ತಮ್ಮ ವೈಯಕ್ತಿಕ ಖಾತೆ ಹಾಗೂ ಬೇರೆಯವರ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದರು. ಹಾಗಾಗಿ, ಸಂಜಯ್ ಘೋಡಾವತ್ ವಂಚನೆ ಪ್ರಕರಣ ದಾಖಲಿಸಿದ್ದರು. ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹುಬ್ಬಳ್ಳಿ ಪೊಲೀಸರು ಪ್ರಕರಣವನ್ನು ಇ.ಡಿಗೆ ವಹಿಸಿದ್ದರು. ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸುತ್ತಿರುವ ಇ.ಡಿಯು ಇಬ್ಬರು ಆರೋಪಿಗಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿರುವ ಮನೆ , ಅಪಾರ್ಟ್‌ಮೆಂಟ್, ವಿಂಡ್‌ ಮಿಲ್ ಸೇರಿ 12 ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ.

ಇದನ್ನೂ ಓದಿ: ED Raid: ಬೈಜೂಸ್‌ ಮಾಲೀಕ ರವೀಂದ್ರನ್‌ ಮನೆ ಮೇಲೆ ಇ.ಡಿ ದಾಳಿ; ಡಿಜಿಟಲ್ ಡೇಟಾ, ದಾಖಲೆ ಸೀಜ್‌

ಸಂಜಯ್‌ ಘೋಡಾವತ್‌ ಅವರು ಸಂಜಯ್‌ ಘೋಡಾವತ್‌ ಗ್ರೂಪ್‌ (SGG) ಸಂಸ್ಥಾಪಕ ಚೇರ್ಮನ್‌ ಆಗಿದ್ದು, ದೇಶಾದ್ಯಂತ ಇವರ ಉದ್ಯಮಗಳು ವ್ಯಾಪಿಸಿವೆ. ವಿಮಾನಯಾನ, ಶಿಕ್ಷಣ, ಗಣಿಗಾರಿಕೆ, ಟೆಕ್ಸ್‌ಟೈಲ್ಸ್‌, ಇಂಧನ ಸೇರಿ ಹಲವು ಕ್ಷೇತ್ರಗಳಲ್ಲಿ ಎಸ್‌ಜಿಜಿ ಛಾಪು ಮೂಡಿಸಿದೆ. ಇವರ ಸಂಸ್ಥೆಯಲ್ಲಿ 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

Exit mobile version