ರಾಮನಗರ: ರಾಜಕೀಯ ಅಂದ ಮೇಲೆ ಸಂದರ್ಭಕ್ಕೆ ತಕ್ಕಂತೆ ಕೆಲವು ವಿಚಾರಗಳು ನಡೆಯುತ್ತವೆ. ಇನ್ನು ರಾಜಕೀಯ ನಾಯಕರು ಕೈ ಕೈ ಹಿಡಿದುಕೊಳ್ಳುವುದು ಸಾಮಾನ್ಯ. ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರದ ವೇಳೆ ನನಗೂ ಕೈ ಕೈ ಹಿಡಿದುಕೊಂಡಿದ್ದರು. ಆದರೆ, ಆಮೇಲೆ ಕೈ ಎತ್ತಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಕಣ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ನನ್ನ ಕೈ ಹಿಡಿದುಕೊಂಡರು. ಕೊನೆಗೆ ಕೈ ಎತ್ತಲಿಲ್ಲವೇ? ಕೈ ಎತ್ತುವಿದು, ಕೈ ಇಳಿಸುವುದು ಸಂದರ್ಭಕ್ಕೆ ತಕ್ಕಂತೆ ನಡೆಯುತ್ತವೆ ಎಂದು ಸಿದ್ದರಾಮೋತ್ಸವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೈಕೈ ಹಿಡಿದುಕೊಂಡು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರ ಬಗ್ಗೆ ವ್ಯಂಗ್ಯ ಮಾಡಿದರು.
ಇಡೀ ಸಚಿವಾಲಯಕ್ಕೇ ವಾರ್ನ್ ಮಾಡಬೇಕು
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕೇಂದ್ರ ಗೃಹ ಮಂತ್ರಿ ಅಮಿಶ್ ಶಾ ಅವರು ಎಚ್ಚರಿಕೆ ನೀಡಿದ್ದಾರೆನ್ನಲಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕೇವಲ ಆರಗ ಜ್ಞಾನೇಂದ್ರ ಅವರಿಗೆ ಮಾತ್ರವಲ್ಲ, ಇಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು. ರಾಜ್ಯ ಎಲ್ಲ ಮಂತ್ರಿಗಳಿಗೂ ವಾರ್ನಿಂಗ್ ಕೊಡಬೇಕಿದೆ. ರೈತರಿಗೆ ಕೊಡುವ ಸಬ್ಸಿಡಿಗೂ ಮಂತ್ರಿಗಳು ಶೇ.೮ರಷ್ಟು ಕಮಿಷನ್ ಕೇಳ್ತಿದ್ದಾರೆ. ರಾಜ್ಯ ಲೂಟಿ ಆಗ್ತಿದೆ. ಇದರಲ್ಲಿ ಅಮಿತ್ ಶಾ ಅವರಿಗೂ ಪಾಲು ಹೋಗಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | JDS Convention | ಬಡವರಿಗಾಗಿ ಮುಂದಿನ 3 ತಿಂಗಳು ನಿರಂತರ ಹೋರಾಟ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ