Site icon Vistara News

Karnataka Election 2023: ಮಂಡ್ಯದಲ್ಲಿ ಎಚ್‌ಡಿಕೆ, ಸುಮಲತಾ ಸ್ಪರ್ಧೆ ಫಿಕ್ಸ್?; ‌ಬ್ಯಾಂಕ್‌ ಖಾತೆ ತೆರೆದ ಮಾಜಿ ಸಿಎಂ, ಸಂಸದೆ!

HD Kumaraswamy Sumalatha open bank account in Mandya Are you sure of the competition Karnataka Election 2023 updates

ಮಂಡ್ಯ: ಚುನಾವಣಾ ಜಿದ್ದಾಜಿದ್ದಿಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಈಗ ಮತ್ತೊಮ್ಮೆ ಅತಿರಥರ ಕಾಳಗ ವೇದಿಕೆ ಸಿದ್ಧವಾಗತೊಡಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಕಣಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವು ಕೇಂದ್ರಬಿಂದುವಾಗಿತ್ತು. ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಡಿದ್ದ ಬೆನ್ನಲ್ಲೇ, “ತಾವು ಸ್ಪರ್ಧೆ ಮಾಡುವುದಿಲ್ಲ, ಮಾಡುವುದಿಲ್ಲ, ಮಾಡುವುದಿಲ್ಲ ಎಂದು ನಿಮಗೆ ಎಷ್ಟು ಸಾರಿ ಹೇಳಬೇಕು” ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದ್ದರು. ಆದರೆ, ಈಗ ಮಂಡ್ಯದಲ್ಲಿ ಅವರು ಬ್ಯಾಂಕ್‌ ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರ ಜತೆಗೆ ಸಂಸದೆ ಸುಮಲತಾ ಅಂಬರೀಷ್‌ ಸಹ ಖಾತೆಯನ್ನು ತೆರೆದಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರ ಸ್ಪರ್ಧೆ ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಈಗ ಬ್ಯಾಂಕ್ ಅಕೌಂಟ್ ಪಾಲಿಟಿಕ್ಸ್ ರಂಗೇರಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಬ್ಯಾಂಕ್ ಅಕೌಂಟ್ ತೆರೆದಿರುವುದರಿಂದ ಮಂಡ್ಯದಲ್ಲಿ ಸ್ಪರ್ಧೆ ವದಂತಿಗೆ ಪುಷ್ಟಿ ನೀಡಿದೆ.

ಮಂಡ್ಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಕೆ ಖಾತೆ ತೆರೆದಿದ್ದಾರೆ. ಇತ್ತ ನಗರದ ಬ್ಯಾಂಕ್ ಆಫ್ ಬರೋಡಾದಲ್ಲಿ ಸಂಸದೆ ಸುಮಲತಾ ಅವರು ಖಾತೆ ತೆರೆದಿದ್ದಾರೆ.

ಇದನ್ನೂ ಓದಿ: Karnataka Election 2023: ಚುನಾವಣೆ ತರಬೇತಿಯಲ್ಲಿದ್ದ ನೌಕರ ಹೃದಯಾಘಾತದಿಂದ ಸಾವು; ಮೈಸೂರಲ್ಲಿ ಅಪಘಾತದಲ್ಲಿ ಸವಾರ ಮೃತ್ಯು

ಮಂಡ್ಯ ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಚೆನ್ನಪಟ್ಟಣ ಅಭ್ಯರ್ಥಿಯಾಗಿ ಅಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದೇನೆ. ಆದರೆ, ಅದರ ದಾಖಲೆಗಳು ಮಂಡ್ಯದ ಮುಖ್ಯ ಕಚೇರಿಯಲ್ಲಿ ದಾಖಲೆಗಳು ಇವೆ ಎಂಬ ಕಾರಣಕ್ಕೆ ಇಲ್ಲಿ ಖಾತೆ ತೆರೆದಿದ್ದೇನೆ ಎಂದು ಹೇಳುತ್ತಿದ್ದಾರೆ. ಅಕೌಂಟ್‌ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬ ಸುದ್ದಿ ಹರಡಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಸುಮಲತಾ ಕಣಕ್ಕೆ: ಏನೇನು ಲೆಕ್ಕಾಚಾರಗಳು?

ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಈಗ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರದಿಂದ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ರಾಮನಗರದಿಂದ ರಾಜೀನಾಮೆ ನೀಡಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದರು. ಈ ಬಾರಿ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್‌ ವಿರುದ್ಧ ಈಗಾಗಲೇ ನಾಮಪತ್ರ ಸಲ್ಲಿಸಿರುವ ಕುಮಾರಸ್ವಾಮಿ, ರಾಮನಗರವನ್ನು ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ರಾಮನಗರಕ್ಕೆ ಬದಲಾಗಿ ಮಂಡ್ಯ ವಿಧಾನಸಭೆಯಿಂದಲೇ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.

ಈಗಾಗಲೇ ಸ್ಥಳೀಯ ನಾಯಕರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ತಾವು ಸ್ಪರ್ಧೆ ಮಾಡಿದರೆ ಗೆಲ್ಲಬಹುದೇ ಎಂದು ವಿಚಾರಿಸಿದ್ದಾರೆ. ಸದ್ಯದಲ್ಲೇ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆ ಪ್ಲ್ಯಾನ್‌ ಏನು?

ಇದನ್ನೂ ಓದಿ: BJP Karnataka: ಬಿ.ಎಲ್‌. ಸಂತೋಷ್‌ ವಿರುದ್ಧ ಮಾತನಾಡಿದ್ದು ಶೆಟ್ಟರ್‌ಗೆ ಶೋಭೆಯಲ್ಲ: ಬಿ.ಎಸ್‌. ಯಡಿಯೂರಪ್ಪ

ಸುಮಲತಾ ಸ್ಪರ್ಧೆ ಚರ್ಚೆ

ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಅಶೋಕ್‌ ಜಯರಾಮ್‌ ಹೆಸರು ಘೋಷಿಸಿರುವ ಬಿಜೆಪಿ, ಎಚ್‌.ಡಿ.ಕೆ. ಸ್ಪರ್ಧೆ ಮಾಡಿದರೆ ಮತ್ತೊಂದು ಉಪಾಯ ಇಟ್ಟುಕೊಂಡಿದೆ. ಸಂಸದೆ ಸುಮಲತಾ ಈಗ ತಾನೆ ಪಕ್ಷಕ್ಕೆ ಆಗಮಿಸಿದ್ದಾರೆ. ಅವರು ಮಂಡ್ಯ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಅವರು ಸ್ಪರ್ಧೆ ಮಾಡಿದರೆ ಉತ್ತಮ ಸ್ಪರ್ಧೆಯನ್ನು ಒಡ್ಡಬಹುದು ಎಂಬ ಚರ್ಚೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಮಾಡಲು ಇನ್ನೂ ಎರಡು ದಿನ ಬಾಕಿಯಿದ್ದು, ಬಿಜೆಪಿ ಈ ಕುರಿತು ಚಿಂತನೆ ನಡೆಸುತ್ತಿದೆ. ಬುಧವಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.

Exit mobile version