Site icon Vistara News

ನಿಮ್ಮದೇ ಗಾಡಿ ನಂಬರ್‌ ಇರೋ ಬೇರೆ ವಾಹನ ಇವೆಯೆ? ನಕಲಿ ನಂಬರ್‌ ಪ್ಲೇಟ್‌ ಹಾವಳಿ ಹೆಚ್ಚಾಗಿದೆ ಎಚ್ಚರ!

rto number plate

ಬೆಂಗಳೂರು: ಪೊಲೀಸರು ಎಷ್ಟೇ ಚಾಣಾಕ್ಷರಾಗಿದ್ದರೂ ಅವರನ್ನ ಮೀರಿಸುವ ಕ್ರಿಮಿನಲ್ಸ್‌ ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಡೂಪ್ಲಿಕೇಟ್‌ ನಂಬರ್‌ ಪ್ಲೇಟ್‌ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಪೊಲೀಸರಿಗೂ ಯಾಮಾರಿಸುವ ಖದೀಮ ಕಳ್ಳರು ನಕಲಿ ನಂಬರ್‌ ಪ್ಲೇಟ್‌ ಇರಿಸಿಕೊಂಡು ವಾಹನಗಳನ್ನ ಬಳಸುತ್ತಿದ್ದಾರೆ.

ಇದನ್ನೂ ಓದಿ | ತಪ್ಪು ಮಾಡದಿದ್ದರೂ ಬೀಳುತ್ತೆ ಟ್ರಾಫಿಕ್‌ ದಂಡ !: ಪಾರಾಗಲು ಇಲ್ಲಿವೆ 6 ಸೂತ್ರಗಳು

ಸಂಚಾರಿ ಪೊಲೀಸರಿಗೆ ಮತ್ತು ಆರ್.ಟಿ.ಒ ಅಧಿಕಾರಿಗಳಿಗೆ ಈ ಬಗ್ಗೆ ದೂರುಗಳ ಸುರಿಮಳೆಯೇ ಬರುತ್ತಿದೆ. ಈ ನಕಲಿ ನಂಬರ್‌ ಪ್ಲೇಟ್‌ ಹಾವಳಿ ಜಾಲ ಬಗೆದಷ್ಟೂ ಬೆಳಕಿಗೆ ಬರುತ್ತಿದೆ. ಇದು ಸಂಚಾರಿ ವ್ಯವಸ್ಥೆಗೆ ಸೆಡ್ಡು ಹೊಡೆಯುತ್ತಿದ್ದು, ನಗರದಲ್ಲಿ ಒಂದೇ ನಂಬರ್‌ನ ಹಲವು ವಾಹನಗಳು ರಾಜಾರೋಷವಾಗಿ ಓಡಾಡುತ್ತಿವೆ.

ಸಾರ್ವಜನಿಕರು ಒಎಲ್ಎಕ್ಸ್‌ನಲ್ಲಿ ನಂಬರ್ ಸಮೇತ ವಾಹನದ ಫೋಟೋ ಹಾಕಿದರೆ ಮುಗೀತು. ಅದೇ ನಂಬರ್‌ನಿಂದ ಮತ್ತೊಂದು ಡಾಕ್ಯುಮೆಂಟ್ ಸೃಷ್ಟಿಯಾಗುತ್ತದೆ. ಹೀಗಾಗಿ ನಗರದಲ್ಲಿ ಒಂದು ‘ನಕಲಿ’ ಇನ್ನೊಂದು ‘ಅಸಲಿ’ ವಾಹನಗಳು ಸಂಚರಿಸುತ್ತಿವೆ. ಈ ನಕಲಿ‌ ನಂಬರ್ ಪ್ಲೇಟ್ ಬಳಕೆಯಾದರೆ, ಅಸಲಿ ಮಾಲೀಕರಿಗೆ ದಂಡ ಬೀಳುತ್ತಿದೆ. ಮಾಡದ ತಪ್ಪಿಗೆ ಮೂಲ ಮಾಲೀಕರು ದಂಡ ಕಟ್ಟಬೇಕಾಗಿದೆ. ಈ ಸಂಬಂಧ ಪ್ರತಿ ನಿತ್ಯ ಸಂಚಾರಿ ಪೊಲೀಸ್ ಇಲಾಖೆಗೆ ದೂರುಗಳು ಬರುತ್ತಿವೆ.

ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್‌ಗಳ ಬಗ್ಗೆ ಪೊಲೀಸರು ದೂರುಗಳನ್ನು ಸ್ವೀಕರಿಸಿದ್ದಾರೆ. ನಕಲಿ‌ ನಂಬರ್ ಪ್ಲೇಟ್ ಹಾವಳಿಯು ಐಎನ್‌ಡಿ ಪ್ಲೇಟ್ ಕಡ್ಡಾಯ ಮಾಡಿದರೆ ಕಡಿಮೆಯಾಗಬಹುದು ಎಂಬ ಅಭಿಪ್ರಾಯವಿದೆ.  ಆರ್ ಸಿ ಕಾರ್ಡ್ ತೋರಿಸಿ ಐಎನ್‌ಡಿ ನಂಬರ್ ಪ್ಲೇಟ್ ಹಾಕಿಸುವ ಕಾನೂನು ಬರಬೇಕಿದ್ದು, ಈಗಾಗಲೇ ಅದರ ಕಾನೂನು ಇದ್ದರೂ ಕಡ್ಡಾಯವಾಗಿಲ್ಲ. ಇದನ್ನು ಕಡ್ಡಾಯ ಮಾಡದಿದ್ದರೆ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | ಸ್ನಾನ ಮಾಡಲು, ಶೇವಿಂಗ್ ಮಾಡಲು ಮನಸ್ಸಾಗ್ತಿಲ್ಲ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌

Exit mobile version