Site icon Vistara News

Heart Attack : SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ; ವಾಯು ವಿಹಾರದ ವೇಳೆ ಕುಸಿದ ಬಾಲಕಿ

Gril dies of heart attack

ಚಾಮರಾಜನಗರ: ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ(Spandana Vijay Raghavendra) ಅವರು ಹೃದಯಾಘಾತದಿಂದ (Heart attack) ಮೃತಪಟ್ಟ ಹಿನ್ನೆಲೆಯಲ್ಲಿ ಸಣ್ಣ ವಯಸ್ಸಿನವರಲ್ಲೇ ಉಂಟಾಗುವ ಹೃದಯಾಘಾತದ ಕುರಿತ ಆತಂಕ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಕೇವಲ 16 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಪ್ರಾಣ (SSLC student dies of heart attack) ಕಳೆದುಕೊಂಡಿದ್ದಾಳೆ.

ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫೆಲಿಶಾ (16) ಮೃತ ದುರ್ದೈವಿ ಬಾಲಕಿ. ಬೆಂಗಳೂರು ನಿವಾಸಿಗಿರುವ ಫೆಲಿಶಾ ಗುಂಡ್ಲುಪೇಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಫೆಲಿಶಾ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆ

ಬುಧವಾರ ಬೆಳಗ್ಗೆ ವಾಯು ವಿಹಾರ ಮಾಡುವ ವೇಳೆ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾಳೆ. ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದ ಆಕೆಯನ್ನು ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರೆ, ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಅಶ್ಲೀಲ ಫೋಟೊ ಅಪ್ಲೋಡ್‌ : ಸಮರ್ಥ್‌ ಕಾಲೇಜು ವಿದ್ಯಾರ್ಥಿ ಅರೆಸ್ಟ್‌

ಹುಬ್ಬಳ್ಳಿ: ಹುಬ್ಬಳ್ಳಿಯ ಸಮರ್ಥ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ ಪ್ರಕರಣದಲ್ಲಿ ಒಬ್ಬ ಯುವಕನನ್ನು ಬಂಧಿಸಲಾಗಿದೆ.

ಯುವತಿಯರ ಫೋಟೊಗಳನ್ನು ಎಡಿಟ್‌ ಮಾಡಿ ಅಶ್ಲೀಲ ರೂಪ ನೀಡಿದ್ದ ಆತ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಸಂತೋಷ್ ಬಾಬು ಅವರೇ ತಿಳಿಸಿದ್ದಾರೆ. ಹುಬ್ಬಳ್ಳಿಯ ಸಮರ್ಥ ಕಾಲೇಜ್‌ನ ಓರ್ವ ಯುವಕನನ್ನು ಅರೆಸ್ಟ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದರೂ ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಜನರು ಸಂಶಯಿಸುತ್ತಿದ್ದಾರೆ.

ಅವನ ಹೆಸರು ರಜನೀಕಾಂತ್‌!

ತಮ್ಮ ಚಿತ್ರಗಳನ್ನು ಯಾರೋ ಅಶ್ಲೀಲವಾಗಿ ಎಡಿಟ್‌ ಮಾಡಿ ಯಾರೋ ಇನ್‌ಸ್ಟಾಗ್ರಾಂಗೆ ಅಪ್ಲೋಡ್‌ ಮಾಡುತ್ತಿದ್ದಾರೆ ಎಂದು ಮೂವರು ವಿದ್ಯಾರ್ಥಿನಿಯರು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ, ಅಲ್ಲಿ ಸರಿಯಾದ ಸ್ಪಂದನೆ ದೊರೆಯದೆ ಇದ್ದಾಗ ಪೊಲೀಸರ ಮೊರೆ ಹೊಕ್ಕಿದ್ದರು. ವಿದ್ಯಾರ್ಥಿನಿಯರು ಕೆಲವು ಹುಡುಗರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅವರಲ್ಲಿ ಕೆಲವು ಮುಸ್ಲಿಂ ಹುಡುಗರೂ ಇದ್ದರು.

ಅಂತಿಮವಾಗಿ ಪೊಲೀಸರು ಇದು ಒಬ್ಬ ಹುಡುಗನ ಕೃತ್ಯ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಸಮರ್ಥ ಕಾಲೇಜಿನ ವಿದ್ಯಾರ್ಥಿಯಾಗಿರುವ ರಜನೀಕಾಂತ್‌ ಎಂಬಾತನೇ ಈ ರೀತಿಯ ದುಷ್ಕೃತ್ಯ ನಡೆಸಿದವನು.

ತನ್ನ ಜತೆ ಮಾತನಾಡದವರ ಮೇಲೆ ಸೇಡು!

ರಜನೀಕಾಂತ್‌ ತುಂಬಾ ಕಿಲಾಡಿ ಹುಡುಗನಾಗಿದ್ದು, ಅಪಾಯಕಾರಿ ವರ್ತನೆಗಳನ್ನು ತೋರಿಸುತಿದ್ದ ಎನ್ನಲಾಗಿದೆ. ಕಡಿಮೆ ದಾಖಲಾತಿ ಇರುವ ಕಾರಣ ಈ ಬಾರಿ ಅವನಿಗೆ ಕಾಲೇಜಿನಲ್ಲಿ ಪ್ರವೇಶ ಕೊಟ್ಟಿರಲಿಲ್ಲ.

ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಅವನ ಜತೆ ಮಾತನಾಡುತ್ತಿರಲಿಲ್ಲ. ಯಾರು ತನ್ನ ಜತೆ ಮಾತನಾಡುವುದಿಲ್ಲವೋ ಅವರನ್ನು ಈತ ಟಾರ್ಗೆಟ್‌ ಮಾಡುತ್ತಿದ್ದ ಎನ್ನಲಾಗಿದೆ. ಅದರ ಜತೆಗೆ ಕ್ಲಾಸಿನಲ್ಲಿ ಯಾರಿಗೆಲ್ಲ ಬಾಯ್‌ಫ್ರೆಂಡ್‌ ಇದ್ರೋ ಅಥವಾ ಬೇರೆ ಹುಡುಗರ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದರೋ ಅವರನ್ನೇ ಗುರಿಯಾಗಿಟ್ಟುಕೊಂಡು ಈತ ತನ್ನ ವಿಕೃತಿಯನ್ನು ಮೆರೆಯುತ್ತಿದ್ದ ಎಂದು ಹೇಳಲಾಗಿದೆ.

ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದು ಅವನೊಬ್ಬನದೇ ಕೃತ್ಯವೋ ಬೇರೆಯವರು ಭಾಗಿಗಳಾಗಿದ್ದಾರೋ ಎನ್ನುವುದನ್ನು ತಿಳಿಯಲು ಬ್ರೇನ್‌ ಮ್ಯಾಪಿಂಗ್ ಗಾಗಿ ನಾವು FSIL ಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Road Accident : ಸ್ಕಿಡ್‌ ಆದ ಬುಲೆಟ್‌ ಬೈಕ್‌; ಸವಾರ ಮೃತ್ಯು, ಮತ್ತೊಬ್ಬ ಗಂಭೀರ

Exit mobile version