ಮೈಸೂರು/ಮಂಡ್ಯ: ಭಾರಿ ಮಳೆಯಿಂದ (Heavy Rain) ಸಾವು, ನೋವು ಮುಂದುವರಿದಿದ್ದು, ಪ್ರತ್ಯೇಕ ಕಡೆ ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ. ಮೈಸೂರಿನ ಹುಣಸೂರಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆ ಗೋಡೆ ಕುಸಿದು ಶಾಂತಮ್ಮ (65) ಎಂಬ ವೃದ್ಧೆ ಮೃತಪಟ್ಟಿದ್ದರೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಬಳಿಯ ಕಾಲುವೆಯಲ್ಲಿ ಅಂದಾಜು 6೦ ವರ್ಷದ ಅನಾಮಧೇಯ ವೃದ್ಧೆಯ ಶವವೊಂದು ಪತ್ತೆಯಾಗಿದೆ.
ಹುಣಸೂರಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಅದರೊಳಗಿದ್ದ ಶಾಂತಮ್ಮ ಎಂಬುವರು ಮೃತಪಟ್ಟಿದ್ದಾರೆ.
ಇನ್ನು ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಬಳಿಯ ಕಾಲುವೆಯಲ್ಲಿ ಸುಮಾರು 6೦ ವರ್ಷ ಆಸುಪಾಸಿನ ವೃದ್ಧೆಯೊಬ್ಬರ ಶವವೊಂದು ತೇಲಿಬಂದಿದೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾಲು ಜಾರಿ ಕಾಲುವೆಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಆದರೆ, ಅವರು ಯಾರು? ಎಲ್ಲಿಯವರು ಎಂಬ ಮಾಹಿತಿ ಇನ್ನೂ ಪತ್ತೆಯಾಗಿಲ್ಲ.
ಕಾಲುವೆ ನೀರಿನಲ್ಲಿ ಶವ ಕೊಚ್ಚಿಕೊಂಡು ಬಂದ ಬಗ್ಗೆ ಗ್ರಾಮಸ್ಥರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದು, ವೃದ್ಧೆಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ | Rain news | ಭಾರಿ ಮಳೆಗೆ ಮೋಕಾ ವಿದ್ಯುತ್ ವಿತರಣಾ ಕೇಂದ್ರ ಜಲಾವೃತ; ವಿದ್ಯುತ್ ಸಂಪರ್ಕ ಕಡಿತ