ಧಾರವಾಡ: ಹನಿಟ್ರ್ಯಾಪ್ (Honey Trap ) ಮಾಡುತ್ತಿದ್ದ ಗಂಡ-ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ನಗರದಲ್ಲಿದ್ದ ಹನಿಟ್ರ್ಯಾಪ್ ಗ್ಯಾಂಗ್‌ನಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಇದ್ದರು. ಈ ಗ್ಯಾಂಗ್ ಮೊದಲು ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸುತ್ತಾರೆ. ಬಳಿಕ ಅವರನ್ನು ಪುಸಲಾಯಿಸಿ ಭೇಟಿ ಆಗೋಣ ಎನ್ನುತ್ತಾರೆ. ಭೇಟಿಗೆ ಬಂದಾಗ ಅವರ ಜತೆಗಿನ ಖಾಸಗಿ ವಿಡಿಯೊ ಮಾಡಿಕೊಳ್ಳುತ್ತಾರೆ. ಬಳಿಕ ವಿಡಿಯೊ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಕೊಡದೆ ಇದ್ದರೆ ವಿಡಿಯೊ ಹರಿಬಿಡುವುದಾಗಿ ಬೆದರಿಸುತ್ತಿದ್ದರು.
ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸರು ಆಕಾಶ ಉಪ್ಪಾರ, ರೇಣುಕಾ ಉಪ್ಪಾರ್, ಮಲ್ಲಿಕ್ ಜಾನ್ ನದಾಫ್, ಗಜಾಲಾಭಾನು ನಗರಿ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನ ಆಭರಣ, ಬೆಳ್ಳಿ, ಹಣ ಸೇರಿ ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 14,73,000 ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಇದೆ ರೀತಿ ರಾಜ್ಯದ ವಿವಿಧ ಜಿಲ್ಲೆಗಳ ಜನರಿಗೂ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ವಿರುದ್ಧ ಒಟ್ಟು 4 ಪ್ರಕರಣಗಳು ದಾಖಲಾಗಿದೆ.