ಬೆಂಗಳೂರು: ಭಾರತದ ಅತಿ ದೊಡ್ಡ ಐಫೋನ್ ತಯಾರಿಕಾ ಘಟಕ ಬೆಂಗಳೂರಿಗೆ ಸಮೀಪದ ಹೊಸೂರಿನಲ್ಲಿ ನಿರ್ಮಾಣವಾಗಲಿದೆ.
ನೂತನ ಐಫೋನ್ ತಯಾರಿಕಾ ಘಟಕ ಸುಮಾರು 60,000 ಮಂದಿಗೆ ಉದ್ಯೋಗ ನೀಡಲಿದೆ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರಾಂಚಿ ಹಾಗೂ ಹಜಾರಿಬಾಗ್ ಸುತ್ತಮುತ್ತಲಿನ ಸುಮಾರು 6,000 ಬುಡಕಟ್ಟು ಜನಾಂಗದ ಮಹಿಳೆಯರಿಗೆ ಐಫೋನ್ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗಿದೆ. ಇವರು ಈ ಹೊಸೂರು ಘಟಕದ ಮೊದಲ ಉದ್ಯೋಗಿಗಳಾಗಲಿದ್ದಾರೆ ಎಂದವರು ಹೇಳಿದ್ದಾರೆ.
ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಆಪಲ್ ಸಂಸ್ಥೆ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಔಟ್‌ಸೋರ್ಸಿಂಗ್ ಮಾಡಿದೆ. ಜತೆಗೆ ಫಾಕ್ಸ್‌ಕಾನ್, ವಿಸ್ಟ್ರಾನ್ ಹಾಗೂ ಪೆಗಾಟ್ರಾನ್ ಕಂಪನಿಗಳೂ ಐಫೋನ್ ಸಿದ್ಧಪಡಿಸುತ್ತಿವೆ.
ಇದನ್ನೂ ಓದಿ | iPhone 14 | ಅಮೆರಿಕದಲ್ಲಿ ಬಿಡುಗಡೆಯಾದ 3 ವಾರದೊಳಗೆ ಆ್ಯಪಲ್ ಐಫೋನ್ 14 ಚೆನ್ನೈನಲ್ಲಿ ಉತ್ಪಾದನೆ ಆರಂಭ!