ಬೆಂಗಳೂರು: ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ಸೇವೆಗೆ ಖ್ಯಾತಿಯಾಗಿರುವ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ(Pai) ನೂತನ ಹೆನ್ರಿ 4ಕೆ ಎಲ್‌ಇಡಿ ಸ್ಮಾರ್ಟ್‌ಟಿವಿಯನ್ನು (HENRY 4K Smart Ultra HD LED) ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಶುಕ್ರವಾರ ಇಂದಿರಾನಗರದ ಪೈ ಇಂಟರ್‌ನ್ಯಾಚನಲ್ ಮಳಿಗೆಯಲ್ಲಿ ಸ್ಮಾರ್ಟ್‌ಟಿವಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ದಕ್ಷಿಣ ಭಾರತದ ಆದ್ಯತೆಯ ರಿಟೇಲ್ ಚೈನ್ ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಗ್ರಾಹಕರ ಮನೆಯಲ್ಲಿ ಉತ್ತಮ ಮನರಂಜನೆಯ ಅನುಭವಗಳಿಗಾಗಿ ಹೊಸ ಹೆನ್ರಿ 4ಕೆ ಸ್ಮಾರ್ಟ್ ಅಲ್ಟ್ರಾ ಎಚ್‌ಡಿ ಎಲ್‌ಇಡಿ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ.
ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಟಿವಿಗಳು ಕೇವಲ 37,990 ರೂ.ಗಳಲ್ಲಿ 55 ಇಂಚಿನ ಸ್ಮಾರ್ಟ್ ಎಲ್‌ಇಡಿ ಟಿವಿ ಮತ್ತು 29,990 ರೂ.ಗಳಲ್ಲಿ 43 ಇಂಚಿನ ಟಿವಿ ಅನ್ನು ಖರೀದಿಸಬಹುದು. ಕೈಗೆಟಕುವ ದರದಲ್ಲಿ ಎಲ್‌ಇಡಿ ಪ್ರತಿ ಮನೆಯ ಭಾಗವಾಗಲು ನಮ್ಮ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತದೆ. ಅಲ್ಲದೆ, ಎಲ್‌ಇಡಿ ಟಿವಿ ಆರಂಭಿಕ ದರ 11990 ರೂ.ಗಳಿಂದ ಪ್ರಾರಂಭವಾಗುತ್ತದೆ. ರಾಜ್ಯದ ೨೨೧ ಪೈ ಮಳಿಗೆಗಳಲ್ಲಿ ಈ ಟಿವಿಗಳು ಲಭ್ಯವಿರುತ್ತವೆ ಎಂದು ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಪಿಐಇಎಲ್) ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಹೇಳಿದ್ದಾರೆ.
ಇದನ್ನೂ ಓದಿ | ಜೈವಿಕ ಮೂಲದಿಂದ ಜಲಜನಕ, IISc Bangalore ಲ್ಯಾಬ್‌ನಲ್ಲಿ ಹೊಸ ತಂತ್ರಜ್ಞಾನ
ಗ್ರಾಹಕರಿಗೆ ಅತ್ಯಾಕರ್ಷಕ ಇಎಂಐ ಸೌಲಭ್ಯವಿದ್ದು, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷ ಆಫರ್ ನೀಡಲಾಗಿದೆ. ಈ ಆಫರ್‌ನಲ್ಲಿ ಖರೀದಿ ಮಾಡಿದರೆ 1 ಲಕ್ಷ ರೂ.ಮೌಲ್ಯದ ಉಚಿತ ಶಾಪಿಂಗ್ ಗೆಲ್ಲುವ ಅವಕಾಶವನ್ನು ಪಡೆಯಬಹುದಾಗಿದೆ.
ಹೆನ್ರಿ ಎಲ್‌ಇಡಿ ಸ್ಮಾರ್ಟ್‌ಟಿವಿ ವಿಶೇಷತೆಗಳು
ಹೆನ್ರಿ ಸ್ಮಾರ್ಟ್ 4ಕೆ ಅಲ್ಟ್ರಾ ಎಚ್‌ಡಿ ಎಲ್‌ಇಡಿ ವೈಶಿಷ್ಟ್ಯವನ್ನು ಹೊಂದಿದ್ದು, ವೆಬ್ಓಎಸ್(WebOS) ತಂತ್ರಾಶದ ಮೂಲಕ ಕಾರ್ಯಾಚರಣೆ ನಡೆಸುತ್ತದೆ. ಪಾಯಿಂಟ್ ಕ್ಲಿಕ್ ಸ್ಕ್ರಾಲ್‌ನೊಂದಿಗೆ ಮ್ಯಾಜಿಕ್ ಮೋಶನ್ ರಿಮೋಟ್ ಲಭ್ಯವಿದೆ. ಧ್ವನಿಯ ಮೂಲಕ ಕಾರ್ಯಾಚರಿಸಲು ಅನುಕೂಲವಾಗುವಂತೆ ಅಲೆಕ್ಸಾ ಆಯ್ಕೆ ರಿಮೋಟ್‌ನಲ್ಲಿ ನೀಡಲಾಗಿದೆ. ಇದು ಡಾಲ್ಬಿ ಆಡಿಯೋ ಸೌಂಡ್ ವ್ಯವಸ್ಥೆಯೊಂದಿಗೆ ಸಂಯೋಜಿಸಿದ್ದು, ಇದು ವಿಶೇಷ ಸೌಂಡ್ ಎಫೆಕ್ಟ್ ಅನ್ನು ನೀಡಲಿದೆ. ಜತೆಗೆ ಬ್ಲೂಟೂತ್ ಮೂಲಕ ಮೊಬೈಲ್‌ಗೆ ಕನೆಕ್ಟ್ ಮಾಡಲು 2ವೇ ಬ್ಲೂಟೂತ್ ಆಯ್ಕೆ ಲಭ್ಯವಿದೆ. ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಮನೆಯಲ್ಲೇ ಚಿತ್ರಮಂದಿರದಲ್ಲಿ ಕುಳಿತು ನೋಡಿದ ಅನುಭವವನ್ನು ಇದು ನೀಡುತ್ತದೆ.
ಇದನ್ನೂ ಓದಿ | ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ