Pai International | ನೂತನ ಹೆನ್ರಿ 4ಕೆ ಎಲ್‌ಇಡಿ ಸ್ಮಾರ್ಟ್‌ ಟಿವಿ ಪರಿಚಯ; ಕಡಿಮೆ ದರ, ಉತ್ಕೃಷ್ಟ ಗುಣಮಟ್ಟ - Vistara News

ಕರ್ನಾಟಕ

Pai International | ನೂತನ ಹೆನ್ರಿ 4ಕೆ ಎಲ್‌ಇಡಿ ಸ್ಮಾರ್ಟ್‌ ಟಿವಿ ಪರಿಚಯ; ಕಡಿಮೆ ದರ, ಉತ್ಕೃಷ್ಟ ಗುಣಮಟ್ಟ

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳುಳ್ಳ 55 ಇಂಚು, 43 ಇಂಚಿನ ಸ್ಮಾರ್ಟ್‌ ಟಿವಿಗಳು ಲಭ್ಯವಿದ್ದು,
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಗುಣಮಟ್ಟದ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ಸೇವೆಗೆ ಖ್ಯಾತಿಯಾಗಿರುವ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಿಂದ(Pai) ನೂತನ ಹೆನ್ರಿ 4ಕೆ ಎಲ್‌ಇಡಿ ಸ್ಮಾರ್ಟ್‌ಟಿವಿಯನ್ನು (HENRY 4K Smart Ultra HD LED) ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಶುಕ್ರವಾರ ಇಂದಿರಾನಗರದ ಪೈ ಇಂಟರ್‌ನ್ಯಾಚನಲ್‌ ಮಳಿಗೆಯಲ್ಲಿ ಸ್ಮಾರ್ಟ್‌ಟಿವಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ದಕ್ಷಿಣ ಭಾರತದ ಆದ್ಯತೆಯ ರಿಟೇಲ್ ಚೈನ್ ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಗ್ರಾಹಕರ ಮನೆಯಲ್ಲಿ ಉತ್ತಮ ಮನರಂಜನೆಯ ಅನುಭವಗಳಿಗಾಗಿ ಹೊಸ ಹೆನ್ರಿ 4ಕೆ ಸ್ಮಾರ್ಟ್ ಅಲ್ಟ್ರಾ ಎಚ್‌ಡಿ ಎಲ್‌ಇಡಿ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಿದೆ.

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಟಿವಿಗಳು ಕೇವಲ 37,990 ರೂ.ಗಳಲ್ಲಿ 55 ಇಂಚಿನ ಸ್ಮಾರ್ಟ್ ಎಲ್‌ಇಡಿ ಟಿವಿ ಮತ್ತು 29,990 ರೂ.ಗಳಲ್ಲಿ 43 ಇಂಚಿನ ಟಿವಿ ಅನ್ನು ಖರೀದಿಸಬಹುದು. ಕೈಗೆಟಕುವ ದರದಲ್ಲಿ ಎಲ್‌ಇಡಿ ಪ್ರತಿ ಮನೆಯ ಭಾಗವಾಗಲು ನಮ್ಮ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತದೆ. ಅಲ್ಲದೆ, ಎಲ್‌ಇಡಿ ಟಿವಿ ಆರಂಭಿಕ ದರ 11990 ರೂ.ಗಳಿಂದ ಪ್ರಾರಂಭವಾಗುತ್ತದೆ. ರಾಜ್ಯದ ೨೨೧ ಪೈ ಮಳಿಗೆಗಳಲ್ಲಿ ಈ ಟಿವಿಗಳು ಲಭ್ಯವಿರುತ್ತವೆ ಎಂದು ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌(ಪಿಐಇಎಲ್‌) ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಹೇಳಿದ್ದಾರೆ.

ಇದನ್ನೂ ಓದಿ | ಜೈವಿಕ ಮೂಲದಿಂದ ಜಲಜನಕ, IISc Bangalore ಲ್ಯಾಬ್‌ನಲ್ಲಿ ಹೊಸ ತಂತ್ರಜ್ಞಾನ

ಗ್ರಾಹಕರಿಗೆ ಅತ್ಯಾಕರ್ಷಕ ಇಎಂಐ ಸೌಲಭ್ಯವಿದ್ದು, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷ ಆಫರ್‌ ನೀಡಲಾಗಿದೆ. ಈ ಆಫರ್‌ನಲ್ಲಿ ಖರೀದಿ ಮಾಡಿದರೆ 1 ಲಕ್ಷ ರೂ.ಮೌಲ್ಯದ ಉಚಿತ ಶಾಪಿಂಗ್ ಗೆಲ್ಲುವ ಅವಕಾಶವನ್ನು ಪಡೆಯಬಹುದಾಗಿದೆ.

ಹೆನ್ರಿ ಎಲ್‌ಇಡಿ ಸ್ಮಾರ್ಟ್‌ಟಿವಿ ವಿಶೇಷತೆಗಳು
ಹೆನ್ರಿ ಸ್ಮಾರ್ಟ್ 4ಕೆ ಅಲ್ಟ್ರಾ ಎಚ್‌ಡಿ ಎಲ್‌ಇಡಿ ವೈಶಿಷ್ಟ್ಯವನ್ನು ಹೊಂದಿದ್ದು, ವೆಬ್ಓಎಸ್‌(WebOS) ತಂತ್ರಾಶದ ಮೂಲಕ ಕಾರ್ಯಾಚರಣೆ ನಡೆಸುತ್ತದೆ. ಪಾಯಿಂಟ್‌ ಕ್ಲಿಕ್ ಸ್ಕ್ರಾಲ್‌ನೊಂದಿಗೆ ಮ್ಯಾಜಿಕ್ ಮೋಶನ್ ರಿಮೋಟ್ ಲಭ್ಯವಿದೆ. ಧ್ವನಿಯ ಮೂಲಕ ಕಾರ್ಯಾಚರಿಸಲು ಅನುಕೂಲವಾಗುವಂತೆ ಅಲೆಕ್ಸಾ ಆಯ್ಕೆ ರಿಮೋಟ್‌ನಲ್ಲಿ ನೀಡಲಾಗಿದೆ. ಇದು ಡಾಲ್ಬಿ ಆಡಿಯೋ ಸೌಂಡ್ ವ್ಯವಸ್ಥೆಯೊಂದಿಗೆ ಸಂಯೋಜಿಸಿದ್ದು, ಇದು ವಿಶೇಷ ಸೌಂಡ್‌ ಎಫೆಕ್ಟ್‌ ಅನ್ನು ನೀಡಲಿದೆ. ಜತೆಗೆ ಬ್ಲೂಟೂತ್ ಮೂಲಕ ಮೊಬೈಲ್‌ಗೆ ಕನೆಕ್ಟ್ ಮಾಡಲು 2ವೇ ಬ್ಲೂಟೂತ್ ಆಯ್ಕೆ ಲಭ್ಯವಿದೆ. ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಮನೆಯಲ್ಲೇ ಚಿತ್ರಮಂದಿರದಲ್ಲಿ ಕುಳಿತು ನೋಡಿದ ಅನುಭವವನ್ನು ಇದು ನೀಡುತ್ತದೆ.

ಇದನ್ನೂ ಓದಿ | ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Forest Bathing: ಬೆಂಗಳೂರಿನಲ್ಲಿ ಕಂಪನಿಯೊಂದು ಕೊಟ್ಟ ಆಫರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೆಟ್ಟಿಗರ ಬ್ಯಾಕ್‌ ಟು ಬ್ಯಾಕ್‌ ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ . ಇಷ್ಟಕ್ಕೂ ಕಂಪನಿ ಕೊಟ್ಟ ಆಫರ್‌ ಏನು ಅಂತೀರಾ ಇಲ್ಲಿದೆ ನೋಡಿ ಡಿಟೈಲ್ಸ್‌.

VISTARANEWS.COM


on

By

Forest bathing activity begins at Cubbon Park
Koo

ಬೆಂಗಳೂರು : ಬೆಂಗಳೂರಿಗರ ನೆಚ್ಚಿನ ಉದ್ಯಾನವನದಲ್ಲಿ ಕಬ್ಬನ್‌ಪಾರ್ಕ್‌ (Cubbon park) ಕೂಡ ಒಂದು. ಜನರ ನೆಚ್ಚಿನ ತಾಣವಾದ ಕಬ್ಬನ್‌ ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು 1500 ರೂ. ಶುಲ್ಕ ಕೊಡಬೇಕು. ಅರೇ ಸರ್ಕಾರ ಯಾವಾಗ ಈ ರೂಲ್ಸ್‌ ತಂದಿದೆ ಅಂತ ಅಂದುಕೊಂಡ್ರಾ? ಖಂಡಿತ ಇಲ್ಲ, ಇದು ಕಂಪೆನಿಯೊಂದು ಶುರು ಮಾಡಿರುವ (Forest Bathing) ಫಾರೆಸ್ಟ್‌ ಬಾಥಿಂಗ್‌.. ಟ್ರೋವ್ ಹೆಸರಿನ ಸಂಸ್ಥೆಯೊಂದು (Trove Experinces) ಫಾರೆಸ್ಟ್‌ ಬಾಥಿಂಗ್‌ ಚಟುವಟಿಕೆಯನ್ನು ಆಯೋಜಿಸಿದೆ. ಇದೇ ಏಪ್ರಿಲ್ 28ರಂದು ನಡೆಯಲಿರುವ ಈವೆಂಟ್‌ಗೆ ಎಂಟ್ರಿ ಫೀಸ್‌ ಕೂಡ ಇದೆ. ಈ ಫಾರೆಸ್ಟ್‌ ಬಾಥಿಂಗ್‌ ಅನುಭವ ಪಡೆಯಲು ಬರೋಬ್ಬರಿ 1,500 ರೂ. ಟಿಕೆಟ್‌ ಬೆಲೆಯನ್ನು ನಿಗಧಿ ಮಾಡಲಾಗಿದೆ.

ಜೋಳದ ರೊಟ್ಟಿ (Jolad rotti) ಎಂಬ ಎಕ್ಸ್‌ ಅಕೌಂಟ್‌ನಲ್ಲಿ ಅಜಯ್‌ (Ajayawhy) ಎಂಬುವವರು ಫಾರೆಸ್ಟ್‌ ಬಾಥಿಂಗ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊ ಅಡಿಬರಹದಲ್ಲಿ ಮಾರ್ಕೆಟ್‌ನಲ್ಲಿ ಹೊಸ ಸ್ಕ್ಯಾಮ್‌ ಬಂದಿದೆ ನೋಡಿ ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಪಾಸ್‌ ಆಗುತ್ತಿದ್ದು, ಬಹುತೇಕರು ಕಬ್ಬನ್‌ ಪಾರ್ಕ್‌ನಲ್ಲಿ ಉಚಿತವಾಗಿಯೇ ಮರಗಳನ್ನು ಒಪ್ಪಿಕೊಳ್ಳಬಹುದು, ಈ ಚಟುವಟಿಕೆಗೆ ಹಣ ಕೊಡುವ ಅಗತ್ಯ ಏನಿದೆ. ಇದೆಲ್ಲ ಹಣ ಮಾಡುವ ಹೊಸ ಸ್ಕ್ಯಾಮ್‌ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಹೈಕೋರ್ಟ್‌ ಹಿಂಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ ಹೀಲಿಂಗ್‌ ಪವರ್‌ ಆಫ್‌ ಫಾರೆಸ್ಟ್‌ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಫಾರೆಸ್ಟ್‌ ಬಾಥಿಂಗ್‌ ಅನುಭವವನ್ನು ಪಡೆದು ಒತ್ತಡವನ್ನು ದೂರ ಮಾಡಿ ಎಂದು ಪೋಸ್ಟ್‌ ಹಾಕಲಾಗಿದೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

ಇನ್ನೂ ನೆಟ್ಟಿಗರಿಂದ ಪರ-ವಿರೋಧದದ ಪ್ರತಿಕ್ರಿಯೆಗಳು ಬಂದಿವೆ. ದೈನಂದಿನ ಜೀವನದಲ್ಲಿ ಮನೆ- ಕಚೇರಿಗೆ ಸೀಮಿತವಾಗಿದ್ದರೆ, ಕಬ್ಬನ್ ಪಾರ್ಕ್ ಖಂಡಿತವಾಗಿಯೂ ಕಾಡಿನಂತೆ ಭಾಸವಾಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಂದಿಷ್ಟು ಜನ ಫಾರೆಸ್ಟ್‌ ಬಾಥಿಂಗ್‌ ಅಂದರೇನು ಎಂದು ಪ್ರಶ್ನೆ ಕೇಳಿದ್ದು ಮಾತ್ರವಲ್ಲದೇ ಕಬ್ಬನ್‌ಪಾರ್ಕ್‌ಗೆ ಹೋಗಲು ಸಾವಿರಾರು ರೂಪಾಯಿ ಕೊಡಬೇಕಾ ಎಂದು ಕಾಲೆಳೆದಿದ್ದಾರೆ.

Forest Bathing

ಅರಣ್ಯ ಸ್ನಾನದ ಕಲ್ಪನೆಗೆ ನನ್ನ ವಿರೋಧವಿಲ್ಲ. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ನನಗೆ ಖಾತ್ರಿಯಿದೆ. ಆದರೆ ಸ್ಥಳ ಮತ್ತು ಶುಲ್ಕ 18% ಜಿಎಸ್‌ಟಿ ಬಗ್ಗೆ ನನ್ನ ತಕಾರರು ಇದೆ. ಕಬ್ಬನ್‌ ಪಾರ್ಕ್‌ ಒಳಗೆ ಹೋಗಲು ಓಡಾಡಲು ಈ ದುಬಾರಿ ಶುಲ್ಕ ಯಾಕೆ ಎಂದಿದ್ದಾರೆ. ಕಬ್ಬನ್‌ ಪಾರ್ಕ್‌ ಕಾಡಲ್ಲ, ಮತ್ಯಾಕೆ ಫಾರೆಸ್ಟ್‌ ಬಾಥಿಂಗ್‌ ಹೆಸರಿನಲ್ಲಿ ಮೋಸ ಎಂದು ಕಿಡಿಕಾರಿದ್ದಾರೆ.

https://x.com/AJayAWhy/status/1780167988504625242

ಏನಿದು ಫಾರೆಸ್ಟ್‌ ಬಾಥಿಂಗ್‌?

ಅಂದಹಾಗೇ ಫಾರೆಸ್ಟ್‌ ಬಾಥಿಂಗ್‌ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲ, ಬದಲಿಗೆ ಜಪಾನಿನಲ್ಲಿ ಹೆಚ್ಚು ಸಕ್ರಿಯವಾಗಿದೆ. ಜಪಾನಿನಲ್ಲಿ ಶಿನ್ರಿನ್-ಯೋಕು (shinrin-yoku) ಎಂದೂ ಕರೆಯಲ್ಪಡುವ ಈ ಫಾರೆಸ್ಟ್‌ ಬಾಥಿಂಗ್‌ ಅಥವಾ ಅರಣ್ಯ ಸ್ನಾನವು ಪ್ರಕೃತಿ ಜತೆಗಿನ ಒಡನಾಟದೊಂದಿಗೆ ಒತ್ತಡವನ್ನು ದೂರ ಮಾಡಲು ಥೆರಪಿಯಂತೆ ಬಳಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka: ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಬರಿ ಚೆಂಬನ್ನು ಕೊಡುತ್ತಾರೆ. ಆ ಖಾಲಿ ಚೆಂಬನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಅಕ್ಷಯ ಪಾತ್ರೆಯನ್ನು ಮಾಡಿದರು. ಈ ದೇಶದ ಬಡವರು, ಹಿಂದುಳಿದ ವರ್ಗದವರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಮಹಾನ್‌ ಭಾವ ಯಾರೆಂದರೆ ಅದು ನರೇಂದ್ರ ಮೋದಿ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.

VISTARANEWS.COM


on

Modi in Karnataka HD Deve Gowda attack on Congess
Koo

ಚಿಕ್ಕಬಳ್ಳಾಪುರ: ಈ ದೇಶದಲ್ಲಿ 60 ವರ್ಷಗಳ ಕಾಲ ಆಡಳಿತವನ್ನು ನಡೆಸಿ ಸಂಪತ್ತನ್ನು ಲೂಟಿ ಮಾಡಿ 2014ರಲ್ಲಿ ಖಾಲಿ ಚೆಂಬನ್ನು ನರೇಂದ್ರ ಮೋದಿ ಅವರಿಗೆ ಕೊಟ್ಟಿದ್ದು ಇದೇ ಕಾಂಗ್ರೆಸ್‌ ಆಗಿದೆ. ಆದರೆ, ಆ ಖಾಲಿ ಚೆಂಬನ್ನು ಅಕ್ಷಯ ಪಾತ್ರೆ ಮಾಡಿದವರು ಪ್ರಧಾನಿ ಮೋದಿ (PM Narendra Modi) ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಗುಡುಗಿದರು. ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್‌ 20) ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ಎಚ್.ಡಿ. ದೇವೇಗೌಡ, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕೋಲ್, 2ಜಿ ಸ್ಪೆಕ್ಟ್ರಂ ಸೇರಿದಂತೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಈ ನಾಡಿನ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಆ ಬರಿಯ ಚೆಂಬನ್ನು ಯಾರ ಕೈಗೆ ಕೊಟ್ಟಿದ್ದಾರೆ? ಈ ಕಾಂಗ್ರೆಸ್‌ನವರು ಯಾರಿಗೆ ಕೊಟ್ಟರು? ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಬರಿ ಚೆಂಬನ್ನು ಕೊಡುತ್ತಾರೆ. ಆ ಖಾಲಿ ಚೆಂಬನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಅಕ್ಷಯ ಪಾತ್ರೆಯನ್ನು ಮಾಡಿದರು. ಈ ದೇಶದ ಬಡವರು, ಹಿಂದುಳಿದ ವರ್ಗದವರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಮಹಾನ್‌ ಭಾವ ಯಾರೆಂದರೆ ಅದು ನರೇಂದ್ರ ಮೋದಿ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇಂಥ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತೀರಾ? ಇದು ಕ್ಷುಲ್ಲಕ ರಾಜಕಾರಣ ಅಲ್ಲವೇ? ನಾಚಿಕೆಯಾಗಬೇಕು ನಿಮಗೆ. ಈ ದೇಶಕ್ಕೆ ಸುಮಾರು 34 ಪ್ರೋಗ್ರಾಂಗಳನ್ನು ಕೊಟ್ಟಿದ್ದಾರೆ. ಬಡವರಿಗೋಸ್ಕರ, ನಿರೋದ್ಯೋಗವನ್ನು ಬಗೆಹರಿಸಲು ಸೇರಿದಂತೆ ಎಷ್ಟು ಕಾರ್ಯಕ್ರಮಗಳು ಇವೆ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಭಾಷಣದಲ್ಲಿ ಏನು ಹೇಳುತ್ತಾರೆ? ಅವರ ಬಗ್ಗೆ, ಅವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡಲು ನಾನು ಹೋಗುವುದಿಲ್ಲ ಎಚ್.ಡಿ. ದೇವೇಗೌಡ ಹೇಳಿದರು.

ಮೋದಿ ಕಾರ್ಯಕ್ರಮದ ಲೈವ್‌ ಅಪ್ಡೇಟ್‌ ಇಲ್ಲಿದೆ

ಚಿಕ್ಕಬಳ್ಳಾಪುರದಲ್ಲಿ ನನ್ನ ನಿಜವಾದ ಕಾರ್ಯಕರ್ತರು ಇದ್ದರೆ ನಿಮ್ಮ ವೋಟನ್ನು ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಅವರಿಗೆ ನೀಡಿ. ನಾವು ನಮ್ಮ ಗುರಿಯನ್ನು ಮುಟ್ಟಲು, ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಪಡೆಯಲು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲು ನಮ್ಮ ಕಾಣಿಕೆ ಇದಾಗಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

ಇದನ್ನೂ ಓದಿ: ‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

ಈಗ 25 ಗ್ಯಾರಂಟಿಯನ್ನು ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.

ಈ ದೇಶದಲ್ಲಿ 60 ವರ್ಷ ಆಡಳಿತ ನಡೆಸಿ, ಈ ಹತ್ತು ವರ್ಷದಲ್ಲಿ ವಿರೋಧಿ ಪಕ್ಷದ ಸ್ಥಾನವನ್ನು ಪಡೆಯಲು ಯೋಗ್ಯತೆ ಇಲ್ಲದ ಈ ಕಾಂಗ್ರೆಸ್‌ ಪಕ್ಷವು 400 ಸೀಟುಗಳನ್ನು ಗೆಲ್ಲುತ್ತದೆಯಾ? ಈಗ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಈ ಇಬ್ಬರು (ಡಾ. ಕೆ. ಸುಧಾಕರ್‌ ಮತ್ತು ಮಲ್ಲೇಶ್‌ ಬಾಬು) ಅಭ್ಯರ್ಥಿಗಳನ್ನು ಗೆಲ್ಲಿಸಿ. 28 ಕ್ಷೇತ್ರಗಳನ್ನು ಗೆದ್ದುಕೊಂಡು ನಾವೆಲ್ಲರೂ ಹೋಗಿ ಕಾವೇರಿ ನೀರು ಸೇರಿದಂತೆ ರಾಜ್ಯದ ಇನ್ನಿತರ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹೋಗಿ ಕೇಳಲು ಅನುವು ಮಾಡಿಕೊಡಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

Continue Reading

ಕರ್ನಾಟಕ

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Lok Sabha Election 2024: ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್. ನಗರದ ರೇಡಿಯೋ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ.

VISTARANEWS.COM


on

Lok Sabha Election 2024
Koo

ಮೈಸೂರು: ಕುಮಾರಸ್ವಾಮಿ ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂತ ಹೇಳಿದ್ದಾರೆ. ಏನ್ರವ್ವ ನೀವು ದಾರಿ ತಪ್ಪಿದ್ದೀರಾ? ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಲಿ, ನೆಂಟರ ಮನೆಗೆ ಹೋಗಲಿ ಅಂತ ಬಸ್ ಫ್ರೀ ಮಾಡಿದ್ದೀವಿ. ದಾರಿ ತಪ್ಪಿದ್ದಾರೆ ಅಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್. ನಗರದ ರೇಡಿಯೋ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಗಂಡಸರ ಮೇಲೆ ನಂಬಿಕೆ ಇಲ್ಲ. ಆದ್ದರಿಂದಲೇ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದ್ದೇವೆ.‌ ಬೇರು ಇಲ್ಲ ಅಂದ್ರೆ ಮರ ಉಳಿಯಲ್ಲ. ನಂಬಿಕೆ ಇಲ್ಲ ಅಂದ್ರೆ ಸಂಬಂಧ ಇರೋದಿಲ್ಲ. ಆದ್ದರಿಂದಲೇ ನಾನು, ಸಿಎಂ ಸಿದ್ದರಾಮಯ್ಯ ಬಂದಿದ್ದೇವೆ. ನಮ್ಮ ನಿಮ್ಮ ವಿಶ್ವಾಸ ಮುಖ್ಯ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಜಾತಿ, ಧರ್ಮದ ಮೇಲೆ ನಮ್ಮ ಪಕ್ಷ ನಿಂತಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್, ದೇವರಾಜ ಅರಸು, ಸಿದ್ದರಾಮಯ್ಯ ಹೀಗೆ ಯಾವುದೇ ಅವಧಿ ತೆಗೆದುಕೊಳ್ಳಿ. ಜನರ ಪರವಾಗಿ ಕಾಂಗ್ರೆಸ್ (Lok Sabha Election 2024) ಕೆಲಸ ಮಾಡಿದೆ. ಬಿಜೆಪಿ – ಜೆಡಿಎಸ್ ಭಾವನೆ ಮೇಲೆ ಹೊರಟಿದ್ದಾರೆ. ನಾವು ಬದುಕಿನ ಮೇಲೆ ಹೊರಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

ಸಾ‌.ರಾ. ಮಹೇಶ್, ಪುಟ್ಟರಾಜು, ಡಿ.ಸಿ. ತಮ್ಮಣ್ಣಗೊಂದು ಚಾಕ್ಲೆಟು ಎಂದು ವ್ಯಂಗ್ಯವಾಡಿದ ಅವರು, ಕುಮಾರಸ್ವಾಮಿ ಮಂಡ್ಯಕ್ಕೆ ಬಂದು ಅಭ್ಯರ್ಥಿ ಆಗಿದ್ದಾರೆ. ಯಾಕ್ ಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಇರಲಿಲ್ವೇ? ನೀವು ಗೆದ್ದಿರುವ ರಾಮನಗರ ವ್ಯಾಪ್ತಿಯಲ್ಲೇ ಯಾಕೆ ನಿಲ್ಲಲಿಲ್ಲ. ನಿಮ್ಮ ತಂದೆ ಎಲ್ಲಿಂದ ಪ್ರಧಾನಿಯಾದರು. ನಿಮ್ಮ ಧರ್ಮಪತ್ನಿ ಗೆದ್ದಿದ್ರು ಆ ಕ್ಷೇತ್ರ ಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದೀರಿ. ಇದು ಸ್ವಾಭಿಮಾನದ ಪ್ರಶ್ನೆ ಎಂದರು.

ಜೆಡಿಎಸ್ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್, ಟೀಕೆ ಭರದಲ್ಲಿ ಅಶ್ಲೀಲ ಪದಗಳ ಬಳಕೆ ಮಾಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ರು. ಜನರಿಗೆ ಏನ್ ಮಾಡಿದ್ರು? ಮಿಸ್ಟರ್ ಕುಮಾರಸ್ವಾಮಿ ಏನಾಗಿತ್ತು ನಿಂಗೆ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಸಾ.ರಾ.ಮಹೇಶ್ ಸೋತಿದ್ದಾನೆ. ಸೋತಿರೋದಕ್ಕೆ ಏನೇನೋ ಮಾತಾಡ್ತಾನೆ. ಅದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡ. ಇಂಥವು ಹುಟ್ಟೋವು ಎಷ್ಟೋ ಉದುರೋವು ಎಷ್ಟೋ… ಎಂದು ಶಾಸಕ ಡಿ.ರವಿಶಂಕರ್ ಉದ್ದೇಶಿಸಿ ಮಾತನಾಡಿದರು.

ನನ್ನ ವಿರುದ್ಧ ಕೇಂದ್ರದವರೂ ತನಿಖೆ ಮಾಡುತ್ತಿದ್ದಾರೆ. ನೀನೂ ತನಿಖೆ ಮಾಡಿಸುತ್ತಿದ್ದೀಯ, ಮಾಡ್ಸು ಎಂದು ಏಕವನಚದಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದ್ಲು ಬಿಜೆಪಿ ಜೆಡಿಎಸ್ ಎ ಟೀಂ, ಬಿ ಟೀಂ ಅಂತ ಇತ್ತು. ಇವಾಗ ಇಬ್ಬರದ್ದು ಪಾರ್ಟನರ್‌ಶಿಪ್. ಬಿಜೆಪಿ ಪಕ್ಷದಿಂದ ದೂರ ಇರಲಿ ಅಂತ 38 ಸ್ಥಾನ ಪಡೆದಿದ್ದ ನಿಮಗೆ 80 ಸ್ಥಾನ ಇದ್ದ ನಾವು ಅಧಿಕಾರ ಕೊಟ್ಟೆವು. ನಾವೇನು ನಿಮ್ಮ ಬೆನ್ನಿಗೆ ಚಾಕು ಹಾಕಲು ಬಂದಿದ್ವಾ? ಅಸೆಂಬ್ಲಿಗೆ ಬನ್ನಿ ಮಾತಾಡೊಣ ಅಂತ ಹೇಳಿದ್ದೀನಿ. ನಮ್ಮ ಭೂಮಿಯಲ್ಲಿ ನಾವು ಕೆಲಸ ಮಾಡಿದ್ರೆ ನಿಮಗೇನು ಉರಿ? ಕಲ್ ಹೊಡೆದಿದ್ದು, ಮಣ್ಣು ಹೊಡೆದಿದ್ದು ಎಲ್ಲಾ ತನಿಖೆ ಮಾಡಿಸ್ದಲ್ಲಪ್ಪ. ನೀನೂ ತನಿಖೆ ಮಾಡಿಸ್ದೆ, ಡೆಲ್ಲಿಲೂ ಮಾಡ್ತಿದ್ದಾರಲ್ಲ.. ಈಗೆ ಜೆಡಿಎಸ್ ಜತೆಗೆ ಬಿಜೆಪಿಯವರೂ ಸೇರಿಕೊಂಡಿದ್ದಾರೆ. ಇವರು ಸೇರಿ ಜನರಿಗೆ ಕೊಟ್ಟಿದ್ದು ಏನು ಅಂತ ಜನರ ಮುಂದೆ ಹೇಳಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ | ‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ಡಿ.ರವಿಶಂಕರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Continue Reading

ಉದ್ಯೋಗ

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Alert: ಬೆಂಗಳೂರಿನಲ್ಲೇ ಕೆಲಸ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ (BBMP Recruitment 2024). ಘನತ್ಯಾಜ್ಯ ನಿರ್ವಹಣೆ ವಿಭಾಗದಡಿ ನೇಮಕಾತಿ ನಡೆಯಲಿದೆ. ಕನ್ನಡ ಬಲ್ಲವರು ಅರ್ಜಿ ಸಲ್ಲಿಸಬಹುದು. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಥಳೀಯ ವೃಂದದ-ಹುದ್ದೆಗಳು, ಕಲ್ಯಾಣ ಕರ್ನಾಟಕ (KK)-905 ಮತ್ತು ಉಳಿಕೆ ಮೂಲ ವೃಂದ (RPC)-10,402 ಹುದ್ದೆಗಳಿವೆ. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ. ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರಬೇಕು. ಬಿಬಿಎಂಪಿಯಲ್ಲಿ ನೇರ ಪಾವತಿ / ಕ್ಷೇಮಾಭಿವೃದ್ಧಿ / ದಿನಗೂಲಿ ಆಧಾರದಲ್ಲಿ ಎರಡು ವರ್ಷ ಕಡಿಮೆ ಇಲ್ಲದಂತೆ, ನಿರಂತರವಾಗಿ ಕೆಲಸ ನಿರ್ವಹಿಸಿರುವ ಮತ್ತು ಎರಡು ವರ್ಷಗಳಿಗೂ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆಯುವವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ 17,000 ರೂ. – 28,950 ರೂ. ಮಾಸಿಕ ವೇತನ ದೊರೆಯಲಿದೆ.

BBMP Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ bbmp.gov.in.ಗೆ ಭೇಡಿ ನೀಡಿ.
  • ಈಗ ತೆರೆದುಕೊಳ್ಳುವ ಹೋಮ್‌ಪೇಜ್‌ನಲ್ಲಿ ಕಂಡು ಬರುವ ಪೌರಕಾರ್ಮಿಕರ ಹುದ್ದೆಗಳ ಅರ್ಜಿ ನಮೂನೆ Click here to View ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಈಗ ಕಂಡು ಬರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿ.
  • ಪ್ರಿಂಟ್‌ಔಟ್‌ ತೆಗೆದು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅದರಲ್ಲಿ ಕೇಳಿರುವ ದಾಖಲೆಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು N.R. Square, Bengaluru -560002, Karnataka ಇಲ್ಲಿಗೆ ಸಲ್ಲಿಸಿ.

ಇದನ್ನೂ ಗಮನಿಸಿ

  • ಈ ಹುದ್ದೆಗಳಿಗೆ ಯಾವುದೇ ಸಂದರ್ಶನ ನಿಗದಿಪಡಿಸಿಲ್ಲ.
  • ಅಪೂರ್ಣ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸುವುದಿಲ್ಲ.
  • ಅರ್ಜಿಯೊಂದಿಗೆ ಕಡ್ಡಾಯವಾಗಿ ದಾಖಲೆಗಳನ್ನು ಲಗತ್ತಿಸಬೇಕು.
  • ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದಿಲ್ಲ.
  • ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿರಬಾರದು.
  • ಈಗಾಗಲೇ ಗಂಭೀರ ಪ್ರಕರಣದ ಕಾರಣದಿಂದ ಕರ್ತವ್ಯದಿಂದ ತೆಗೆದು ಹಾಕಿರಬಾರದು.

ಇದನ್ನೂ ಓದಿ: Job Alert: ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿದೆ 4,660 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading
Advertisement
CJI Chandrachud
ದೇಶ2 mins ago

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

Forest bathing activity begins at Cubbon Park
ಬೆಂಗಳೂರು5 mins ago

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Modi in Karnataka HD Deve Gowda attack on Congess
Lok Sabha Election 20245 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Lok Sabha Election 2024
ಕರ್ನಾಟಕ8 mins ago

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Job Alert
ಉದ್ಯೋಗ10 mins ago

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Viral Video
ವೈರಲ್ ನ್ಯೂಸ್15 mins ago

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Vinay Gowda Lunch With Kichcha Sudeep
ಸಿನಿಮಾ18 mins ago

Vinay Gowda: ಕಿಚ್ಚ ಸುದೀಪ್‌ ಜತೆ ವಿನಯ್‌ ಗೌಡ ಭರ್ಜರಿ ಭೋಜನ!

Viral Video
ವೈರಲ್ ನ್ಯೂಸ್21 mins ago

Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

Case of bringing gun to CM Siddaramaiah Four policemen suspended
Lok Sabha Election 202428 mins ago

‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

Elon Musk
ವಿದೇಶ35 mins ago

Elon Musk: ಮೋದಿ ಭೇಟಿಗಾಗಿ ಈ ತಿಂಗಳು ಭಾರತಕ್ಕೆ ಬರಲ್ಲ ಎಲಾನ್‌ ಮಸ್ಕ್;‌ ಕೊಟ್ಟ ಕಾರಣ ಇದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka HD Deve Gowda attack on Congess
Lok Sabha Election 20245 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20242 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ4 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ5 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

ಟ್ರೆಂಡಿಂಗ್‌