Site icon Vistara News

Jio True 5G: ಚಿತ್ರದುರ್ಗ ಸೇರಿ 33 ನಗರಗಳಲ್ಲಿ ಈಗ ಜಿಯೋ 5ಜಿ ಸೇವೆ ಆರಂಭ

Jio Tariffs

Jio Increases prepaid tariffs by 20%, check new plans here

ಚಿತ್ರದುರ್ಗ: ರಿಲಯನ್ಸ್ ಜಿಯೋ (Reliance Jio) ಕರ್ನಾಟಕದ ಚಿತ್ರದುರ್ಗ ಹಾಗೂ ಭಾರತದ 33 ಹೆಚ್ಚುವರಿ ನಗರಗಳಲ್ಲಿ ತನ್ನ ಟ್ರೂ 5ಜಿ (Jio True 5G) ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಜನವರಿ 31, ಮಂಗಳವಾರ ಘೋಷಿಸಿದೆ. ಇದರೊಂದಿಗೆ, ಭಾರತದ 225 ನಗರಗಳಲ್ಲಿ ಜಿಯೋ ಬಳಕೆದಾರರು ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ಆನಂದಿಸುತ್ತಿದ್ದಾರೆ. ರಿಲಯನ್ಸ್ ಜಿಯೋ ಚಿತ್ರದುರ್ಗ(Chitradurga)ದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಈ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ಕಮ್ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, ಚಿತ್ರದುರ್ಗ ಮತ್ತು 33 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಇದರೊಂದಿಗೆ 5ಜಿ ಸೇವೆಗಳು ದೊರೆಯುತ್ತಿರುವ ನಗರಗಳ ಒಟ್ಟು ಸಂಖ್ಯೆಯನ್ನು 225 ನಗರಗಳಿಗೆ ಒಯ್ಯುತ್ತೇವೆ. ಬೀಟಾ ಪ್ರಾಯೋಗಿಕ ಅನಾವರಣವಾದ ಕೇವಲ 120 ದಿನಗಳಲ್ಲಿ ಜಿಯೋ ಈ ಮೈಲುಗಲ್ಲನ್ನು ಸಾಧಿಸಿದೆ ಮತ್ತು 2023ರ ಡಿಸೆಂಬರ್ ವೇಳೆಗೆ ಪರಿವರ್ತನೆಯ ಜಿಯೋ ಟ್ರೂ 5ಜಿ ಸೇವೆಗಳೊಂದಿಗೆ ಇಡೀ ರಾಷ್ಟ್ರವನ್ನು ಸಂಪರ್ಕಿಸುವ ಹಾದಿಯಲ್ಲಿದೆ.

ಇದನ್ನೂ ಓದಿ: Reliance Jio | ರಿಲಯನ್ಸ್ ಜಿಯೋಗೆ ಇಎಸ್‌ಜಿ ಪರ್ಫಾರ್ಮೆನ್ಸ್ ಇನ್ ಟೆಲಿಕಾಂ ಸೆಕ್ಟರ್ ಅವಾರ್ಡ್

ಈ ಪ್ರಮಾಣದ 5ಜಿ ನೆಟ್‌ವರ್ಕ್ ಜಾರಿಯು ಜಗತ್ತಿನಲ್ಲಿ ಎಲ್ಲಿಯೂ ಆಗಿಲ್ಲ ಮತ್ತು ಭಾರತದಲ್ಲೇ ಮೊದಲನೆಯದು. 2023ನೇ ಇಸವಿಯು ಭಾರತಕ್ಕೆ ಒಂದು ಹೆಗ್ಗುರುತಾಗಿದೆ. ಇಡೀ ದೇಶವು ಜಿಯೋದ ಉನ್ನತ ನೆಟ್‌ವರ್ಕ್ ಮೂಲಸೌಕರ್ಯದ ಮೂಲಕ ವಿತರಿಸಲಾದ ಕ್ರಾಂತಿಕಾರಿ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ. ನಮ್ಮ ದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

Exit mobile version