Site icon Vistara News

ಕಾಂಗ್ರೆಸ್, ಜೆಡಿಎಸ್‌ನದ್ದು ತುಷ್ಟೀಕರಣದ ನೀತಿ; ಬಿಜೆಪಿಯದ್ದು ಸಂತುಷ್ಟೀಕರಣದ ರಾಜನೀತಿ ಎಂದ ಮೋದಿ

Karnataka Election 2023: Congress and JDS are following Appeasement politics, Says PM Narendra Modi

ಬೇಲೂರು, ಕರ್ನಾಟಕ: ಅವರಿಂದ ಕಿತ್ತು ಇವರಿಗೆ, ಇವರಿಂದ ಕಿತ್ತು ಅವರಿಗೆ ನೀಡುವ ರಾಜನೀತಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡು ಬಂದಿವೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತುಷ್ಟಿಕರಣ ನೀತಿಯನ್ನು ತಮ್ಮದಾಗಿಸಿಕೊಂಡಿವೆ. ಆದರೆ, ಬಿಜೆಪಿ ಎಲ್ಲರ ಸಂತುಷ್ಟೀಕರಣದ ರಾಜಕಾರಣವನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು(Karnataka Election 2023).

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿತ್ತು. ಇದಿರಂದಾಗಿ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಪೂರ್ಣ ಪ್ರಮಾಣದಲ್ಲಿ ಮೀಸಲು ಲಾಭ ದೊರೆಯುತ್ತಿರಲಿಲ್ಲ. ಆದರೆ, ಬಿಜೆಪಿ ಡಬಲ್ ಎಂಜಿನ್ ಸರ್ಕಾರದಿಂದಾಗಿ ಇಂದು ಬಡವರು, ಶ್ರೀಸಾಮಾನ್ಯರಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪುತ್ತಿವೆ. ಡಬಲ್ ಎಂಜಿನ್ ಸರ್ಕಾರದಿಂದಾಗಿ ಮೂಲಭೂತ ಸೌಕರ್ಯದಲ್ಲಿ ಹೆಚ್ಚಳವಾಗಿದೆ. ಹಾಸನದಲ್ಲೂ ಇದರ ಪರಿಣಾಮವನ್ನು ಕಾಣಬಹುದು. ಇಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣವಾಗಿದೆ. ಹಲವು ಅಭಿವೃದ್ದಿಪರ ಯೋಜನೆಗಳು ಜಾರಿಯಲ್ಲಿವೆ. ಇದರ ನೇರ ಲಾಭ ಬಡವರಿಗೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕಳೆದ 9 ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳಲ್ಲಿ ತಾಯಿ ಮತ್ತು ಸಹೋದರಿಯರ ಸಬಲೀಕರಣವನ್ನು ಕಾಣಬಹುದು. ಈ ಮೊದಲು ತಾಯಿ ಮತ್ತು ಸಹೋದರಿಯರ ಹೆಸರಿನಲ್ಲಿ ಆಸ್ತಿಗಳ ನೋಂದಣಿ ಇರಲಿಲ್ಲ. ನಾವು ಬಡವರಾಗಿ 4 ಕೋಟಿ ಮನೆ ಕಟ್ಟಿಕೊಟ್ಟಿದ್ದೇವೆ. ಈ ಪೈಕಿ ಹೆಚ್ಚಿನವರು ಮನೆಗಳು ತಾಯಿ ಅಥವಾ ಸಹೋದರಿಯ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಕರ್ನಾಟಕದಲ್ಲೂ 4 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮಹಿಳೆಯರು ಲಕಪತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಊರು, ರೈತರು ನಗಣ್ಯವಾಗಿದ್ದರು. ನಿರ್ಲಕ್ಷ್ಯಕ್ಕೆ ಒಳಗಾದಗಿದ್ದರು. ಯುಪಿಎ ಕಾಲದಲ್ಲಿ ಬಡ್ಡಿ ಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರವು ಸಣ್ಣ, ಅತಿ ಸಣ್ಣ ರೈತರಿಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೆರವು ನೀಡುತ್ತಿದೆ. ಕೇಂದ್ರ ಸರಕಾರ ಒದಗಿಸುವ ಹಣದ ಜತೆಗೆ ಇಲ್ಲಿನ ಬಿಜೆಪಿ ಸರ್ಕಾರವು ಹೆಚ್ಚುವರಿಯಾಗಿ 4 ಸಾವಿರ ನೀಡುತ್ತಿದೆ. ಇದು ಡಬಲ್ ಎಂಜಿನ್ ಸರ್ಕಾರದ ಲಾಭ ಸ್ನೇಹಿತರೇ. ಕಿಸಾನ್ ಸಮ್ಮಾನ್ ನಿಧಿಯಡಿ ಕರ್ನಾಟಕ ರೈತರಿಗೆ ಇದುವರೆಗೆ 18 ಸಾವಿರ ರೂ. ಜಮೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು

ಇದನ್ನೂ ಓದಿ: Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ

50 ರೂ. ಕೆಜಿ ಯೂರಿಯಾ 5 ರೂ.ಗೆ ನೀಡುತ್ತಿದ್ದೇವೆ

ಬಿಜೆಪಿ ಸರ್ಕಾರಕ್ಕೆ ರೈತನೇ ಪ್ರಥಮ ಆದ್ಯತೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಆತನ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದೇ ಬಿಜೆಪಿ ಸರ್ಕಾರದ ಗುರಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಯೂರಿಯಾಗೆ 50 ರೂ. ಇದೆ. ಆದರೆ, ಕೇಂದ್ರ ಸರ್ಕಾರವನ್ನು ಆ ಯೂರಿಯಾವನ್ನು ಕೇವಲ 5 ಅಥವಾ 6 ರೂ.ಗೆ ರೈತರಿಗೆ ನೀಡುತ್ತಿದೆ. ರೈತರ ಮೇಲಿನ ಹೊರೆ ತಪ್ಪಿಸುವುದಕ್ಕಾಗಿ ಕೇಂದ್ರ ಸರಕಾರವು ದುಬಾರಿ ಯೂರಿಯಾವನ್ನು ಅಗ್ಗವಾಗಿ ರೈತರಿಗೆ ಮಾರಾಟ ಮಾಡುತ್ತಿದೆ. ಇದಕ್ಕಾಗಿ ಕಳೆದ ವರ್ಷ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಬಡವರು ಮತ್ತು ರೈತರು ಬಗೆಗಿನ ಸಂವೇದಾ ಶೀಲ ಸರ್ಕಾರ ಮಾತ್ರವೇ ಇಂಥ ನಿರ್ಧಾರ ಕೈಗೊಳ್ಳಲು ಸಾಧ್ಯ. ಕಾಂಗ್ರೆ ಸರ್ಕಾರವು ಯೂರಿಯಾದಲ್ಲೂ ಹಗರಣ ಮಾಡುತ್ತಿತ್ತು. ಆ ಮೂಲಕ ರೈತರಿಗೆ ಭಾರೀ ನಷ್ಟವಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version