Site icon Vistara News

Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

Karnataka Election 2023

Karnataka Election 2023

ಬೆಂಗಳೂರು: ಕರ್ನಾಟಕದಲ್ಲಿ 16ನೇ ವಿಧಾನಸಭೆಯನ್ನು ಆಯ್ಕೆ ಮಾಡುವ ಸಲುವಾಗಿ ಮೇ 10 ರ ಬುಧವಾರದಂದು ಒಂದೇ ಹಂತದಲ್ಲಿ ಚುನಾವಣೆ (Karnataka Election) ನಡೆಯಲಿದೆ. ಈ ಕುರಿತು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದರು.

13 ಏಪ್ರಿಲ್‌ನಲ್ಲಿ ಗೆಜೆಟ್‌ ಆಗುತ್ತದೆ. ಮತದಾನವು ಮೇ 10ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 13 ರಂದು ಶನಿವಾರ ಫಲಿತಾಂಶ ಘೋಷಣೆ ಆಗಲಿದೆ ಎಂದು ತಿಳಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಂತರ ಇದೀಗ ದಕ್ಷಿಣದ ಕಡೆಗೆ ಚಲಿಸುತ್ತಿದ್ದೇವೆ. ಅಲ್ಲಿನ ಸವಾಲುಗಳಿಗಿಂತ ಕರ್ನಾಟಕದ ಸವಾಲುಗಳು ವಿಭಿನ್ನ. ಆದರೆ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣೆ ಆಯೋಗ ಬದ್ಧವಾಗಿದೆ ಎಂದರು.

ಕರ್ನಾಟಕದಲ್ಲಿ 5, 21, 73, 573 ಮತದಾರರಿದ್ದಾರೆ. ಇದರಲ್ಲಿ 2.62 ಕೋಟಿ ಹಾಗೂ 2.59 ಕೋಟಿ ಮಹಿಳಾ ಮತದಾರರಿದ್ದಾರೆ. ಸೇವಾ ಮತದಾರರು 47,779 ಹಾಗೂ ಅಂಗವಿಕಲ ಮತದಾರರು 5,55,000 ಮತದಾರರಿದ್ದಾರೆ. 4,669 ತೃತೀಯ ಲಿಂಗಿಗಳಿದ್ದಾರೆ. 80 ವರ್ಷಕ್ಕಿಂತ ಹೆಚ್ಚಿನ ವಯೋಮಾನದ 12.15 ಲಕ್ಷ ಜನರಿದ್ದಾರೆ. ಇದೇ ಮೊದಲ ಬಾರಿಗೆ ಈ ವಯೋಮಾನದವರಿಗೆ ಹಾಗೂ ಅಂಗವಿಕಲರಿಗೂ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಮೊದಲ ಬಾರಿ ಮತದಾರರ ಸಂಖ್ಯೆ 9.17 ಲಕ್ಷದಷ್ಟು ಹೆಚ್ಚಳವಾಗಿದೆ. ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಚುನಾವಣಾ ಆಯೋಗ ಮುಂದಾಗಿದೆ. ಜೇನು ಕುರುಬ ಹಾಗೂ ಕೊರಗ ಸಮುದಾಯಗಳನ್ನು ಬುಡಕಟ್ಟು ಸಮುದಾಯಗಳು ಎಂದು ಪರಿಗಣಿಸಲಾಗಿದ್ದು, ಈ ಸಮುದಾಯದವರು ಮತದಾನ ಮಾಡಲು 40 ಮತಗಟ್ಟೆ ಮಾಡಲಾಗಿದೆ.

ಈ ಬಾರಿ ಕರ್ನಾಟಕದಲ್ಲಿ 58, 282 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಿರಲಿದ್ದಾರೆ. ನಗರ ಪ್ರದೇಶದಲ್ಲಿ 24, 063 ಹಾಗೂ ಗ್ರಾಮೀಣದಲ್ಲಿ 34, 219 ಮತಗಟ್ಟೆಗಳಿರಲಿವೆ. 1,320 ಮತಗಟ್ಟೆಗಳನ್ನು ಮಹಿಳೆಯರು ಹಾಗೂ 224 ಮತಗಟ್ಟೆಗಳನ್ನು ಅಂಗವಿಕಲರು ನಿರ್ವಹಣೆ ಮಾಡಲಿದ್ದಾರೆ.

ನಗರ ಪ್ರದೇಶದ ಮತದಾರರ ಆಲಸ್ಯ ಹಾಗೂ ಹಣದ ಪ್ರಾಬಲ್ಯವು ಕರ್ನಾಟಕದಲ್ಲಿ ಪ್ರಮುಖ ಸವಾಲಾಗಿದೆ. ಕರ್ನಾಟಕದಲ್ಲಿ ಒಟ್ಟಾರೆ ಮತದಾನ ಪ್ರಮಾಣ ಉತ್ತಮವಾಗಿದ್ದರೂ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಇದೆ. ಅದೂ ಸಹ 2013ರ ಹೋಲಿಕೆಯಲ್ಲಿ ಕಡಿಮೆ ಆಗುತ್ತಿದೆ. ಇದಕ್ಕಾಗಿ ಐಐಎಸ್‌ಸಿ ಮೂಲಕ ಎಲೆಕ್ಥಾನ್‌ ಮಾಡಲಾಗಿತ್ತು. ತಂತ್ರಜ್ಞಾನ ಹಾಗೂ ಚಟುವಟಿಕೆಗಳ ಮೂಲಕ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸಲಾಯಿತು ಎಂದು ಹೇಳಿದರು.

Exit mobile version