ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Election 2023) ಕಾವು ಹೆಚ್ಚಾಗುತ್ತಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತಿನಲ್ಲಿ ತೊಡಗಿದ್ದಾರೆ. ಬಿಸಿಲು, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಮತಬೇಟೆಗಾಗಿ ರಸ್ತೆಗಿಳಿದಿದ್ದಾರೆ. ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಎಲೆಕ್ಷನ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ರಾಜ್ಯದ ಅಲ್ಲಲ್ಲಿ ಮೂರು ದಿನಗಳ ಕಾಲ ಮೆಗಾ ರೋಡ್ ಶೋ (Road Show) ನಡೆಸುತ್ತಿದ್ದಾರೆ.
ಮೇ 5, 6, 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮೊದಲ ದಿನ ಬಳ್ಳಾರಿ ಮತ್ತು ತುಮಕೂರು ಜಿಲ್ಲೆಯಲ್ಲಿ ಬಹಿರಂಗ ಪ್ರಚಾರ ನಡೆಸಿದ್ದರೆ, ಎರಡನೇ ದಿನ ಪೂರ್ತಿ ರೋಡ್ ಶೋ ನಡೆಸಲಿದ್ದಾರೆ. ಮೂರನೇ ದಿನ ಬಾದಾಮಿ ಮತ್ತು ಹಾವೇರಿಯಲ್ಲಿ ಪ್ರಚಾರ ಮಾಡಿ, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು ಮರು ದಿನ ದೆಹಲಿಗೆ ವಾಪಸ್ ಆಗಲಿದ್ದಾರೆ.
ಇನ್ನು ಬೆಂಗಳೂರಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಪ್ರಚಾರ ಇರಲಿದ್ದು, ಸುಮಾರು 29.4 ಕಿ.ಮೀ ಕ್ರಮಿಸಲಿದ್ದಾರೆ. ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಶುರುವಾಗಿ ಸ್ಯಾಂಕಿ ಟ್ಯಾಂಕ್‌ನಲ್ಲಿ ಕೊನೆಯಾಗಲಿದೆ. ಹಾಗಾದರೆ ನರೇಂದ್ರ ಮೋದಿ ರೋಡ್ ಎಲ್ಲೆಲ್ಲಿ ಇರುತ್ತದೆ ಎಂಬುದರ ಡಿಟೇಲ್ಸ್ ಇಲ್ಲಿದೆ.
ಎಲ್ಲೆಲ್ಲಿ ನರೇಂದ್ರ ಮೋದಿ ಕಾರ್ಯಕ್ರಮ?
ದಿನಾಂಕ- 5-5-2023 (ಶುಕ್ರವಾರ)
11 ಗಂಟೆಗೆ ಸುಮಾರಿಗೆ ದೆಹಲಿ ಏರ್‌ಪೋರ್ಟ್‌ನಿಂದ ಹೊರಟು 1:35ಕ್ಕೆ ಚಿತ್ರದುರ್ಗ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್‌ನಿಂದ ಬಳ್ಳಾರಿ ಹೆಲಿಪ್ಯಾಡ್‌ಗೆ 2:20ಕ್ಕೆ ಬರಲಿದ್ದಾರೆ. ಬಳ್ಳಾರಿಯಲ್ಲಿ 2:30ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
⦁ ಮಧ್ಯಾಹ್ನ 2:30-3:20ರ ವರೆಗೆ ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆ
⦁ ಮಧ್ಯಾಹ್ನ 5:00- 5:50ರ ವರೆಗೆ ತುಮಕೂರಲ್ಲಿ ಸಾರ್ವಜನಿಕ ಸಭೆ
⦁ ಸಂಜೆ 5:55ಕ್ಕೆ ತುಮಕೂರಿನಿಂದ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್ ಆಗಮನ
⦁ ಸಂಜೆ 6:40ಕ್ಕೆ ಎಚ್‌ಎಎಲ್ ಏರ್‌ಪೋರ್ಟ್‌ನಿಂದ ರಸ್ತೆ ಮೂಲಕ ರಾಜಭವನಕ್ಕೆ ಬರಲಿದ್ದು, ಅಲ್ಲೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ದಿನಾಂಕ- 6-5-2023 (ಶನಿವಾರ)
⦁ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ವಾರ್ ಮೆಮೋರಿಯಲ್, ಬ್ರಿಗೇಡ್ ರೋಡ್‌ನಲ್ಲಿ ರೋಡ್ ಶೋ
⦁ ಮಧ್ಯಾಹ್ನ 1:15ಕ್ಕೆ ರಾಜಭವನ ಆಗಮಿಸಲಿದ್ದು, ಅಲ್ಲಿಂದ ಪುನಃ ಮಧ್ಯಾಹ್ನ 3ಕ್ಕೆ ಬ್ರಿಗೇಡ್ ಮಿಲೇನಿಯಂನಿಂದ ತಲುಪಲಿದ್ದಾರೆ.
⦁ ಮಧ್ಯಾಹ್ನ 3ಕ್ಕೆ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಶುರು ಮಾಡಿ, ರಾತ್ರಿ 8:30ಕ್ಕೆ ಸ್ಕ್ಯಾಂಕಿ ಟ್ಯಾಂಕ್ ಬಳಿ ಕೊನೆಗೊಳ್ಳಲಿದೆ.
⦁ ಸ್ಕ್ಯಾಂಕಿ ಟ್ಯಾಂಕ್‌ನಲ್ಲಿ ರೋಡ್ ಶೋ ಮುಗಿದ ಬಳಿಕ ರಾತ್ರಿ 8:40ಕ್ಕೆ ರಾಜಭವನ ವಾಪಸ್ ಆಗಲಿದ್ದು, ಅಲ್ಲಿಯೇ ತಂಗಲಿದ್ದಾರೆ.
ದಿನಾಂಕ-7-5-2023 (ಭಾನುವಾರ)
⦁ ಬೆಳಗ್ಗೆ 8:45ಕ್ಕೆ ರಾಜಭವನದಿಂದ ರಸ್ತೆ ಮೂಲಕ ಎಚ್‌ಎಎಲ್ ತಲುಪಲಿದ್ದಾರೆ.
⦁ ಬೆಳಗ್ಗೆ 9:05ಕ್ಕೆ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಹುಬ್ಬಳ್ಳಿ ಏರ್‌ಪೋರ್ಟ್ ತಲುಪಲಿದ್ದಾರೆ
⦁ ಬೆಳಗ್ಗೆ 10:10ಕ್ಕೆ ಹುಬ್ಬಳ್ಳಿ ತಲುಪಿ ಅಲ್ಲಿಂದ ಬಾದಾಮಿಗೆ ಪ್ರಯಾಣ ಬೆಳಸಲಿದ್ದಾರೆ.
⦁ ಬೆಳಗ್ಗೆ 11ರಿಂದ 11:50ರ ವರೆಗೆ ಬಾದಾಮಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
⦁ ಮಧ್ಯಾಹ್ನ 12 ಗಂಟೆಗೆ ಬಾದಾಮಿಯಿಂದ ಹಾವೇರಿ ತಲುಪಲಿದ್ದಾರೆ.
⦁ ಮಧ್ಯಾಹ್ನ 1ರಿಂದ 1:50ರ ವರೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
⦁ ಆ ದಿನವೇ ಮಧ್ಯಾಹ್ನ 2ಗಂಟೆಗೆ ಹಾವೇರಿಯಿಂದ ಶಿವಮೊಗ್ಗಕ್ಕೆ ಹೋಗಲಿದ್ದಾರೆ
⦁ ಮಧ್ಯಾಹ್ನ 3 ಗಂಟೆಯಿಂದ 3:50ರವರೆಗೆ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
⦁ ಸಂಜೆ 4:25ಕ್ಕೆ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಮೈಸೂರಿಗೆ ಬರಲಿದ್ದಾರೆ
⦁ ಮೈಸೂರು ಏರ್‌ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಸಂಜೆ 5:35ಕ್ಕೆ ನಂಜನಗೂಡು ಹೋಗಲಿದ್ದಾರೆ.
⦁ ಸಂಜೆ 5ರಿಂದ 6:30ರ ವರೆಗೆ ನಂಜನಗೂಡಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ
⦁ ಸಭೆ ಮುಗಿಸಿ ರಸ್ತೆ ಮೂಲಕವೇ ಸಂಜೆ 7ರಿಂದ 7:30ಕ್ಕೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
⦁ ನಂಜನಗೂಡಿನಿಂದ ಮೈಸೂರಿಗೆ ವಾಪಸ್ ಆಗಿ ಅಲ್ಲಿಂದ ರಾತ್ರಿ 8ಕ್ಕೆ ದೆಹಲಿಗೆ ವಾಪಸ್ ಆಗಲಿದ್ದಾರೆ.