Site icon Vistara News

Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

sadalaga saree siezed

#image_title

ಚಿಕ್ಕೋಡಿ: ವಿಧಾನಸಭಾ ಚುನಾವಣೆ ಘೋಷಣೆಗೆ (Karnataka Elections 2023) ಮುನ್ನವೇ ಹಣ, ಹೆಂಡ, ಸೀರೆ, ಕುಕ್ಕರ್‌ ಹಂಚಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇನ್ನು ಎಲೆಕ್ಷನ್‌ ಘೋಷಣೆಯಾದ ಬಳಿಕ ಏನೇನು ಆಗಬಹುದು ಎಂಬುದರ ಮುನ್ಸೂಚನೆ ನೀಡುತ್ತಿದೆ.

ಸದಲಗಾ ಸಮೀಪದ ದತ್ತವಾಡ ಚೆಕ್ ಪೋಸ್ಟ್‌ನಲ್ಲಿ ಮಾರ್ಚ್‌ 21ರಂದು ರಾತ್ರಿ ದೊಡ್ಡ ಪ್ರಮಾಣದಲ್ಲಿ ಸೀರೆ ಸಾಗಾಟವನ್ನು ಪತ್ತೆ ಹಚ್ಚಲಾಗಿದ್ದು, ಇದೆಲ್ಲವೂ ರಾಯಭಾಗ ಮತಕ್ಷೇತ್ರದಲ್ಲಿ ಹಂಚಲು ಒಯ್ಯುತ್ತಿರುವ ಸೀರೆಗಳೆಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಭಾಗದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕಾಗಿ, ಪತ್ತೆ ಹಚ್ಚುವುದಕ್ಕಾಗಿ ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದ್ದು, ಅದು ಸದಲಗಾ ಪಟ್ಟಣದ ಹೊರವಲಯಲ್ಲಿರುವ ಸದಲಗಾ ದತ್ತವಾಡ ಚೆಕ್‌ ಪೋಸ್ಟ್‌ನಲ್ಲಿ ಕಾರ್ಯಾಚರಿಸುತ್ತಿತ್ತು. ಈ ವೇಳೆ ಮಂಗಳವಾರ ರಾತ್ರಿ 10 ಗಂಟೆಯ ಹೊತ್ತಿಗೆ ಬೂದು ಬಣ್ಣದ ಟೆಂಟೋ ಬಂದಿತ್ತು. ಅದನ್ನು ತಡೆದು ವಿಚಾರಿಸಿದಾಗ ಚಾಲಕ ಕೊಲ್ಲಾಪುರ ಮೂಲದ ಖದಿರ ದಾವರಲ ಶೇಖ್‌ (60) ಎಂದೂ, ಅವನ ಜತೆಗಿದ್ದ ಕ್ಲೀನರ್‌ ರಾಯಭಾಗದ ವಸಂತ (50) ಎಂದು ಮಾಹಿತಿ ನೀಡಿದರು.

ವಾಹನದಲ್ಲಿ ಏನಿದೆ ಎಂದು ವಿಚಾರಿಸಿದಾಗ ಸೀರೆ ಎಂದು ತಿಳಿಸಿದರು. ಬಳಿಕ ಪೂರ್ಣ ಪ್ರಮಾಣದ ವಿಚಾರಣೆಗೆ ಒಳಪಡಿಸಿದಾಗ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತದಾರಿಗೆ ಹಂಚಿಕ ಮಾಡಲು, ರಾಯಬಾಗಕ್ಕೆ ಒಯ್ಯುತ್ತಿರುವುದಾಗಿ ತಿಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಟೆಂಪೋದಲ್ಲಿ ನಾನಾ ಬಣ್ಣದ ಸುಮಾರು 5000 ಪಾಲಿಸ್ಟರ್‌ ಫ್ಯಾನ್ಸಿ ಸೀರೆಗಳು ಕಂಡುಬಂದವು. ಒಂದು ಸೀರೆಗೆ ಸುಮಾರು 320 ರೂ. ಎಂದು ಲೆಕ್ಕ ಹಾಕಲಾಗಿದ್ದು, ಒಟ್ಟು 16 ಲಕ್ಷ ಮೌಲ್ಯದ ಸೀರೆಗಳು ಅದರಲ್ಲಿದ್ದವು ಎಂದು ಅಂದಾಜಿಸಲಾಗಿದೆ. ಇವುಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದಿಂದ ತರಲಾಗಿದೆ ಎಂದು ತಿಳಿದುಬಂದಿದೆ.

ಈ ಸೀರೆಗಳು ಯಾರಿಗೆ ಸೇರಿದ್ದು, ಯಾರ ಪರವಾಗಿ ಹಂಚಲು ಒಯ್ಯಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಭಾಗಕ್ಕೆ ಒಯ್ಯಲಾಗುತ್ತಿದ್ದ 16 ಲಕ್ಷ ಮೌಲ್ಯದ ಸೀರೆಗಳು ವಶಕ್ಕೆ

ಹಣ, ಹೆಂಡ ಹಂಚಿಕೆ, ಬಾಡೂಟದ ಮೇಲೆ ಕಟ್ಟುನಿಟ್ಟಿನ ಕಣ್ಣಿಡಲು ಸೂಚನೆ

ಮೈಸೂರು: ಸಾರ್ವಜನಿಕರಿಗೆ ಉಡುಗೊರೆ, ಊಟ, ಹಣ ಮತ್ತಿತರ ರೀತಿಯಲ್ಲಿ ಆಮಿಷ ಒಡ್ಡಿ ಚುನಾವಣಾ ಅಕ್ರಮಗಳು ನಡೆಯುವ ಸಂಬಂಧ ಚುನಾವಣೆ (Karnataka Elections 2023) ಕೆಲಸಕ್ಕೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನ ಸಭಾ ಚುನಾವಣೆ ಸಂಬಂಧ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ‌ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವಂತೆ ತಿಳಿಸಿದರು. ಚುನಾವಣೆ ಆಯೋಗದ ನಿರ್ದೇಶನದಂತೆ ಪ್ರಸಕ್ತ ವರ್ಷದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ನೀತಿ ಸಂಹಿತೆ ಪೂರ್ವ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ತಕ್ಷಣದಿಂದಲೇ ಅಧಿಕಾರಿಗಳು ಮುಂದಾಗಬೇಕು.
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,
ನೀತಿಸಂಹಿತೆ ಪೂರ್ವದಲ್ಲೇ ಸಂಭವನೀಯ ಅಕ್ರಮಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಅಂತಾರಾಜ್ಯ ಗಡಿ ಭಾಗಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಿ, ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ನಗದು, ಮದ್ಯ, ಮತ್ತಿತರ ಸಾಮಗ್ರಿಗಳ ಸಾಗಣೆ, ಸೇರಿದಂತೆ ಇಂತಹವುಗಳ ಮೇಲೆ ನಿಗಾ ವಹಿಸಬೇಕು ಎಂದರು.

ಇದನ್ನೂ ಓದಿ : Karnataka Elections : ಗದಗ ಜಿಲ್ಲೆಯಲ್ಲಿ ಬಂಗಾರ, ಹಣದ ಬೇಟೆ; ಚುನಾವಣೆಗೆ ಮುನ್ನವೇ ನಡೀತಿದೆ ಭಾರಿ ವ್ಯವಹಾರ

Exit mobile version