Site icon Vistara News

Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ

Karnataka is ATM for Congress and JDS, for BJP its Development Says PM Narendra Modi

ಚನ್ನಪಟ್ಟಣ, ರಾಮನಗರ: ರಾಜ್ಯದ ಚುನಾವಣೆಯು ಭವಿಷ್ಯದಲ್ಲಿ ವಿಕಾಸದ ನಿಶ್ಚಯವಾಗಲಿದೆ. ದೇಶದ ನಂಬರ್ 1 ರಾಜ್ಯವಾಗಿ ಕರ್ನಾಟಕ ಅಭಿವೃದ್ಧಿ ಹೊಂದಲು ಈ ಚುನಾವಣೆ ಸಹಕಾರಿಯಾಗಿದೆ. ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಕೇವಲ ಎಟಿಎಂ ಅಷ್ಟೆಯಾಗಿದೆ. ನಮ್ಮ ಬಿಜೆಪಿಗೆ ಅಭಿವೃದ್ಧಿಯಷ್ಟೆ ಮುಖ್ಯ. ಈ ಹಿಂದೆ ರಾಜ್ಯದ ಲೂಟಿಗೆ ಪೈಪೋಟಿ ನಡೆಸಿದ ಸರಕಾರಗಳನ್ನು ನೀವೇ ಕಂಡಿದ್ದೀರಿ. ಅಸ್ಥಿರ ಸರಕಾದ ನಾಟಕ ನೋಡಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊರಗಡೆಯಷ್ಟೆ ಎರಡು ಪಕ್ಷ. ಇವರೆಡು ದೆಹಲಿಯಲ್ಲಿ ಜತೆಯಾಗಿಯೇ ಇರುತ್ತಾರೆ. ಸಂಸತ್ತಿನಲ್ಲಿ ಜತೆಯಾಗಿರುತ್ತಾರೆ. ಕುಟುಂಬ ರಾಜಕೀಯ ಮಾಡುವ ಈ ಎರಡು ಪಕ್ಷಗಳನ್ನು ಜನ ತಿರಸ್ಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೆಡಿಎಸ್‌ಗೆ ನೀಡುವ ಪ್ರತಿ ಮತ ಕಾಂಗ್ರೆಸ್ ಗೆ ಸೇರಲಿದೆ. ಇದರಿಂದ ಮತ್ತೆ ಅಸ್ಥಿರ ಸರಕಾರ ರಚನೆಗೊಳ್ಳಲಿದೆ. ಹೀಗಾಗಿ ಮತದಾರರು ಬಿಜೆಪಿಗೆ ಮತ ನೀಡಿ, ಬಹುಮತದ ಸರಕಾರಕ್ಕೆ ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಯಾವಾಗೆಲ್ಲ ಜೆಡಿಎಸ್ , ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಕೆಲ ಸೀಮಿತ ಕುಟುಂಬಕ್ಕಷ್ಟೆ ಅನುಕೂಲವಾಗಲಿದೆ. ನಮ್ಮ ಸರಕಾರದಲ್ಲಿ ಎಲ್ಲ ಕುಟುಂಬಗಳು ನಮ್ಮ‌ ಕುಟುಂಬ ಇದ್ದಂತೆ. ಡಬಲ್ ಎಂಜಿನ್ ಸರಕಾರದ ವೇಳೆಯಲ್ಲಿ ಜಿಲ್ಲೆಯ 90 ಸಾವಿರ ಮನೆಗೆ ಕೊಳಾಯಿ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೆವೆ‌. ಬಡವರಿಗೆ ಸ್ಪಂದಿಸುವ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಚನ್ನಪಟ್ಟಣದ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಖಡಕ್ ಮಾತು

ಕಾಂಗ್ರೆಸ್‌ನ ಗ್ಯಾರಂಟಿ, ಘೋಷಣೆ ದೊಡ್ಡ ಸುಳ್ಳು

ವಿಶ್ವಾಸಘಾತಕತನಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡುತ್ತಲೇ ಇದೆ. ಚುನಾವಣೆಗೂ ಮುನ್ನ ಸಾಲಮನ್ನಾ ಮಾಡುವ ಸುಳ್ಳು ಭರವಸೆ ನೀಡಿದೆ. ಸುಳ್ಳಿನ ಬಂಡಲ್ ಎಂದರೆ ಕಾಂಗ್ರೆಸ್. ರೈತರನ್ನು ಸಾಲದ ಹೊರೆಯಲ್ಲಿ ಮುಳುಗಿಸಿ, ಎಲೆಕ್ಷನ್ ವೇಳೆಗೆ ಸಾಲಮನ್ನಾದ ಸುಳ್ಳು ಘೋಷಣೆ ಮಾಡುವುದೇ ಕಾಂಗ್ರೆಸ್‌ನ ಕೆಲಸ. ದೇಶದಲ್ಲಿನ ಕೋಟ್ಯಾಂತರ ಜನರಿಗೆ ಬ್ಯಾಂಕ್ ನಲ್ಲಿ‌ಖಾತೆಯೇ ಇರಲಿಲ್ಲ. ಇಂತಹವರ ಸಾಲ ಮನ್ನಾವನ್ನು ಕಾಂಗ್ರೆಸ್ ಮಾಡಿಯೇ ಇಲ್ಲ. ಕಾಂಗ್ರೆಸ್ ನ ಈ ಸಾಲಮನ್ನಾದ ನಾಟಕ ರೈತರಿಗೆ ಪ್ರಯೋಜನವೇ ಆಗುತ್ತಿರಲಿಲ್ಲ.
ಕಾಂಗ್ರೆಸ್‌ ನ ಪ್ರತಿಯೊಂದು ಗ್ಯಾರೆಂಟಿ, ಘೋಷಣೆಯು ಸುಳ್ಳಿನ ದೊಡ್ಡ ಮೂಟೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ.

ಕಾಂಗ್ರೆಸ್ ನ ಜನರು ಇಲ್ಲಿಯು ಸುಳ್ಳಿನ ಗ್ಯಾರೆಂಟಿ ಹಿಡಿದು ಓಡಾಡುತ್ತಿದೆ. ಕಿಸಾನ ಸನ್ಮಾನ್ ಮೂಲಕ ಎರಡುವರೆ ಲಕ್ಷ ಕೋಟಿ ರೂ.ಗಳನ್ನು ರೈತರ ಖಾತೆಗೆ ಹಾಕಲಾಗಿದೆ. 18 ಸಾವಿರ ಕೋಟಿ ರಾಜ್ಯದ ಜನರಿಗೆ ಲಭಿಸಿದೆ. ರಾಮನಗರ ಜಿಲ್ಲೆಗೆ 300 ಕೋಟಿ ಹಣ ದೊರೆತ್ತಿದೆ. ಈ ಎಲ್ಲ ಯೋಜನೆಗಳು ಚುನಾವಣೆಗು ಮುನ್ನವೇ‌ ಕೆಲಸ ಮಾಡಿದ್ದವೆ. ಇದು ನಿಜವಾದ ಗ್ಯಾರೆಂಟಿ ಕೆಲಸ.

ಉಚಿತ ಆರೋಗ್ಯ ಸೌಲಭ್ಯ ನೀಡಲಾಗಿದೆ

ಕೇಂದ್ರ ಸರಕಾರ ಮೂಲಕ ಪ್ರತಿಯೊಬ್ಬರಿಗೂ ಐದು ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ಇದೆ. ಈ ರೇಷ್ಮೆ ನಾಡಿನಲ್ಲಿ ರೇಷ್ಮೆ ಬೆಳೆಗಾರರಿಗೆ ಪ್ರತಿ ಟನ್‌ಗೆ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಿದ್ದು ನಮ್ಮ ಬಿಜೆಪಿ ಸರಕಾರ. ಇದರಿಂದಾಗಿ ರೇಷ್ಮೆ ರಫ್ತು ಪ್ರಮಾಣವು ಹೆಚ್ಚಾಗಿದ್ದು, ಉತ್ಪಾದನೆಯು ಹೆಚ್ಚಾಗಿದೆ. ಇದರ ನೇರ ಲಾಭ ಬೆಳೆಗಾರರಿಗೆ ಲಭಿಸಿದೆ. ಕಾಂಗ್ರೆಸ್ ನ ವಾರೆಂಟಿ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಯಂತೆ ಪ್ರತಿ ಮನೆಯ ಮಹಿಳೆಯರಿಗೆ ಒಂದು ಸಾವಿರ ನೀಡುತ್ತೆವೆ ಎಂದಿದ್ದ ಘೋಷಣೆ ಆಗಿಯೇ ಉಳಿದಿದೆ. ಕಾರ್ಯರೂಪಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ನ ನೀತಿಗಳೆ ರಿವರ್ಸ್ ಗೇರ್ . ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿಯ ಉತ್ತಮ ಯೋಜನೆಗಳನ್ನು ರದ್ದು ಮಾಡುತ್ತಾರೆ. ಕಾಂಗ್ರೆಸ್ ನ ಬಿ ಟೀಂ ಜೆಡಿಎಸ್‌. ಕಾಂಗ್ರೆಸ್ ನ ಎಲ್ಲ ಮಾತನ್ನು ಜೆಡಿಎಸ್ ಒಪ್ಪುತ್ತವೆ. ರಾಜ್ಯಕ್ಕೆ ರಿವರ್ಸ್ ಗೇರ್ ಸರಕಾರಕ್ಕಿಂತ ಡಬಲ್ ಎಂಜಿನ್ ಮೂಲಕ ಮುಂದಕ್ಕೆ ಹೋಗುವ ಸರಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version