Site icon Vistara News

Karnataka Weather: ಮಲೆನಾಡಲ್ಲಿ ಮೈ ಕೊರೆವ ಚಳಿ; ಉತ್ತರ ಒಳನಾಡಲ್ಲಿ ಥಂಡ ಹೊಡೆಸುವ ಥಂಡಿ!

happy girl in a winter city

ಬೆಂಗಳೂರು: ರಾಜ್ಯದಲ್ಲಿ ಚಳಿ ತನ್ನ ಪ್ರಭಾವ ಬೀರಲು ಶುರು ಮಾಡಿದ್ದು, ಮಲೆನಾಡು ಭಾಗದಲ್ಲಿ ಕೊರೆಯುವ ಚಳಿಯ ವಾತಾವರಣ ಇದೆ. ಜತೆಗೆ ಉತ್ತರ ಒಳನಾಡಿನ ಕೆಲವು ಕಡೆಯೂ ಸಹ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ವಾತಾವರಣ ತಂಪಾಗಿ ಮೈ ನಡುಗಿಸಲಿದೆ. ಇನ್ನು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಶುಷ್ಕ ವಾತಾವರಣ (Dry weather) ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka weather Forecast) ಹೇಳಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಇರಲಿದೆ. ಆದರೆ, ಈ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಚಳಿಯ ವಾತಾವರಣ ಇರಲಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದ ಕೆಲವು ಕಡೆ ಮೈ ನಡುಗುವ ವಾತಾವರಣ ಇರಲಿದೆ.

ಇದನ್ನೂ ಓದಿ: Benefits Of Carrots: ಕ್ಯಾರೆಟ್ಟಿನ ಈ ಪಂಚಭಕ್ಷ್ಯಗಳನ್ನು ಮಾಡದಿದ್ದರೆ ಚಳಿಗಾಲವೇ ವೇಸ್ಟ್!

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರುಗಳಲ್ಲಿ ಮುಂಜಾನೆ ಮಂಜಿನ ಸ್ಥಿತಿ ಇದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಕಾಣಿಸಿಕೊಳ್ಳಲಿದೆ. ಆದರೆ, ರಾತ್ರಿ ವೇಳೆ ಪುನಃ ಚಳಿ ತನ್ನ ಪ್ರಭಾವವನ್ನು ಬೀರುತ್ತದೆ.

ಉತ್ತರ ಒಳನಾಡಲ್ಲಿ ಚಳಿ ಜಾಸ್ತಿ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರಲಿದೆ.

ಬೆಂಗಳೂರಲ್ಲಿ ಇನ್ನೆರಡು ದಿನ ಚಳಿಯಾಟ

ಬೆಂಗಳೂರಲ್ಲಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ಹಾಗೂ ಮುಂಜಾನೆ ಮಂಜಿನ ವಾತಾವರಣ ಇರಲಿದೆ. ರಾತ್ರಿಯಾಗುತ್ತಿದ್ದಂತೆ ಚಳಿಯ ಪ್ರಭಾವ ಹೆಚ್ಚಾಗಲಿದೆ. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Turmeric In Winter: ಚಳಿಗಾಲದಲ್ಲಿ ನೆರವಾಗುವ ಅರಿಶಿನವೆಂಬ ಸಂಜೀವಿನಿ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 29 ಡಿ.ಸೆ -16 ಡಿ.ಸೆ
ಮಂಗಳೂರು: 35 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 15 ಡಿ.ಸೆ
ಗದಗ: 31 ಡಿ.ಸೆ – 14 ಡಿ.ಸೆ
ಹೊನ್ನಾವರ: 36 ಡಿ.ಸೆ- 21 ಡಿ.ಸೆ
ಕಲಬುರಗಿ: 32 ಡಿ.ಸೆ – 18 ಡಿ.ಸೆ
ಬೆಳಗಾವಿ: 30 ಡಿ.ಸೆ – 14 ಡಿ.ಸೆ
ಕಾರವಾರ: 36 ಡಿ.ಸೆ – 22 ಡಿ.ಸೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version