ಕೊಡಗು: ನಡುರಸ್ತೆಯಲ್ಲೇ ಜಗಳಕ್ಕಿಳಿದ ಖಾಸಗಿ ಬಸ್ಸುಗಳ ಸಿಬ್ಬಂದಿ ಒಬ್ಬರಿಗೊಬ್ಬರು (Assault Case) ಹೊಡೆದಾಡಿಕೊಂಡಿದ್ದಾರೆ. ಕೊಡಗಿನ ಗೋಣಿಕೊಪ್ಪದಲ್ಲಿ ಘಟನೆ ನಡೆದಿದೆ. ಒಂದು ಬಸ್ಸಿಗೆ ಮತ್ತೊಂದು ಬಸ್ಸನ್ನು ಅಡ್ಡ ನಿಲ್ಲಿಸಿದ ಎಂದು ಶುರುವಾದ ಗಲಾಟೆ ಸಾರ್ವಜನಿಕರ ಎದುರಿನಲ್ಲೇ ಹೊಡೆದಾಡಿಕೊಂಡಿದ್ದಾರೆ.
ಒಬ್ಬ ಸಿಬ್ಬಂದಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೇ ಜಾಡಿಸಿ ಒದ್ದಿದ್ದಾನೆ. ಖಾಸಗಿ ಬಸ್‌ಗಳ ಸಿಬ್ಬಂದಿ ಹೊಡೆದಾಟಕ್ಕೆ ಸಾರ್ವಜನಿಕರು ಬೆಪ್ಪಾದರು. ಅಲ್ಲಿದ್ದ ಸಾರ್ವಜನಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೊ ಸೆರೆಯಾಗಿದೆ. ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident : ದುಬೈ ಪ್ರವಾಸಕ್ಕೆ ಹೋದ ಗೋಕಾಕ್ ಮೂಲದ ನಾಲ್ವರು ಸಜೀವ ದಹನ
ಜಮೀನಿಗಾಗಿ ಮಚ್ಚಿನಿಂದ ಹಲ್ಲೆ
ತುಮಕೂರು : ಜಮೀನು ವಿವಾದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹಲ್ಲೆಗೆ ಯತ್ನಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಶಿವಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ತಮಗೆ ಸೇರಬೇಕೆಂದು ಗ್ರಾಮದ ನಾಗರಾಜ್ ಮೇಲೆ ಹರೀಶ್ ಎಂಬಾತ ಮಚ್ಚು ಹಿಡಿದು ಹಲ್ಲೆ ನಡೆಸಿದ್ದಾನೆ.
ಗ್ರಾಮದ 33/5 ಎ 8.5 ಗುಂಟೆ ಜಮೀನು ತಮಗೆ ಸೇರಬೇಕೆಂದು ಹರೀಶ್ ಹಲ್ಲೆಗೆ ಮುಂದಾಗಿದ್ದಾರೆ. ಅಂದಹಾಗೇ ನಾಗರಾಜ್ ಅವರ ತಾಯಿ ಶಾರದಮ್ಮ ಹೆಸರಿನಲ್ಲಿರುವ ಜಮೀನು ಇದ್ದು, ನಾಗರಾಜ್‌ಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದೆ . ಶಾರದಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ತೆಂಗಿನಕಾಯಿ ಕೀಳಿಸಲು ಹೋದಾಗ ಪಕ್ಕದ ಜಮೀನಿನ ಮಾಲೀಕ ಹರೀಶ್ ನಾಗರಾಜ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಷ ಸೇವಿಸಿದ ಬಿಲ್ ಕಲೆಕ್ಟರ್
ಯಾದಗಿರಿ: ವಿಷ ಸೇವಿಸಿ ಬಿಲ್ ಕಲೆಕ್ಟರ್ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಪುರ ಪಂಚಾಯತಿ ಪಿಡಿಓ, ಅಧ್ಯಕ್ಷೆ ವಿರುದ್ಧ ಕೇಸ್ ದಾಖಲಾಗಿದೆ. ಪಿಡಿಓ ದೇವೇಂದ್ರಪ್ಪ ಹಾಗೂ ಅಧ್ಯಕ್ಷೆ ರೇಣುಕಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದ ಹಲವು ಅಭಿವೃದ್ಧಿ ಕಾಮಗಾರಿ ಬಿಲ್ ಮಾಡದೇ ಸತಾಯಿಸುತ್ತಿದ್ದರು. ಇದರಿಂದ ಮನನೊಂದು ಬಿಲ್ ಕಲೆಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕಾಮಗಾರಿ ಮಾಡಿದ 3,75,000 ರೂ. ಬಿಲ್ ಮಾಡದೇ ಸತಾಯಿಸಿದ್ದರು. ಬಿಲ್ ಕಲೆಕ್ಟರ್ ಯಲ್ಲಪ್ಪ ಅವರ ಪುತ್ರ ವೆಂಕಟೇಶ್ ಅರಳಗುಂಡಗಿ ದೂರಿನನ್ವಯ ಸುರಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ